ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶ ದಲ್ಲಿ ಮಳೆರಾಯನ ಆರ್ಭಟ ಮತ್ತೆ ಮುಂದು ವರಿದಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ಹರಿವಿನಲ್ಲಿ ಹೆಚ್ಚಳ ಕಂಡು ಬಂದಿದ್ದು, ಕಳೆದೆರೆಡು ದಿನಗಳ ಹಿಂದಷ್ಟೇ ಸಂಚಾ ರಕ್ಕೆ ಮುಕ್ತಗೊಂಡಿದ್ದ ಕೆಳಮಟ್ಟದ ಎರಡು ಸೇತುವೆಗಳು ಮತ್ತೆ ಗುರುವಾರ ಜಲಾವೃತ ವಾಗಿವೆ.

ತಾಲ್ಲೂಕಿನ ವೇದಗಂಗಾ ನದಿಗೆ ನಿರ್ಮಿಸಿರುವ ಜತ್ರಾಟ-ಭಿವಶಿ ಮತ್ತು ಕೃಷ್ಣಾ ನದಿಗೆ ನಿರ್ಮಿಸಿರುವ ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆದ ಕೆಳಮಟ್ಟದ ಸೇತುವೆಗಳು ಮುಳುಗಡೆ ಯಾಗಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ 66,465 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದರೆ, ಹಿಪ್ಪರಗಿ ಜಲಾಶಯದಿಂದ 51,036 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಮಳೆ ವಿವರ: ಮಹಾರಾಷ್ಟ್ರದ ಕೊಯ್ನಾ: 76 ಮಿ.ಮೀ, ನವಜಾ:124 ಮಿ.ಮೀ, ಮಹಾಬಳೇಶ್ವರ: 87ಮಿ.ಮೀ, ವಾರಣಾ: 50 ಮಿ.ಮೀ, ಸಾಂಗ್ಲಿ: 2.2 ಮಿ.ಮೀ ಮತ್ತು ಕೊಲ್ಹಾಪುರ: 2 ಮಿ.ಮೀ ಮಳೆ ದಾಖಲಾಗಿದ್ದರೆ, ತಾಲ್ಲೂಕಿನ ಚಿಕ್ಕೋಡಿಯಲ್ಲಿ 5.6 ಮಿ.ಮೀ, ಸದಲಗಾ: 6.6 ಮಿ.ಮೀ, ನಿಪ್ಪಾಣಿ: 10.2 ಮಿ.ಮೀ, ಗಳತಗಾ: 4.0 ಮಿ.ಮೀ, ಸೌಂದಲಗಾ: 11.1 ಮಿ.ಮೀ, ಜೋಡಟ್ಟಿ: 2.3 ಮಿ.ಮೀ ಮಳೆಯಾಗಿದೆ.
ಸೇತುವೆಗಳ ಭಾನುವಾರದ ನೀರಿನ ಮಟ್ಟ: ಕಲ್ಲೋಳ: 525.60ಮೀ (ಅಪಾಯದ ಮಟ್ಟ: 538.00), ಅಂಕಲಿ: 525.10(ಅಪಾಯದ ಮಟ್ಟ: 537.00ಮಿ), ಸದಲಗಾ: 531.890(ಅಪಾಯದ ಮಟ್ಟ: 538.00) ಕುಡಚಿ: 522.75 (ಅಪಾಯದ ಮಟ್ಟ529.00).

ದಿನವಿಡಿ ಸುರಿದ ಮಳೆ
ಖಾನಾಪುರ: ಎರಡು ದಿನಗಳಿಂದ ಮಾಯ ವಾಗಿದ್ದ ಮಳೆ ಗುರುವಾರ ತುಂತುರು ಹನಿಗ ಳೊಂದಿಗೆ ಮತ್ತೆ ಮರಳಿದೆ. ಕೃಷಿ ಜಮೀನುಗಳಲ್ಲಿ ಭತ್ತ ನಾಟಿ ಮಾಡುವ ಕಾರ್ಯ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಚುರುಕುಗೊಂಡಿದೆ.

ಭತ್ತದ ಜಮೀನುಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ಪೂರ್ವ ಭಾಗದಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಅಮಟೆ ಅಮಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮಗಾಂವ ಗ್ರಾಮದ ರಸ್ತೆ ಸಂಪರ್ಕ ಕಡಿದು ಹೋಗಿದೆ.

ಈ ಭಾಗದಲ್ಲಿ ಅವ್ಯಾಹತವಾಗಿ ಸುರಿಯುತ್ತಿ ರುವ ಮಳೆಯ ಕಾರಣ ಅಮಗಾಂವ-ಚಿಕಲೆ ಗ್ರಾಮಗಳ ನಡುವಿನ ಹಳ್ಳದಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ಇಲ್ಲಿ ಹಲವು ವರ್ಷಗಳಿಂದ ನಿರ್ಮಿಸಲಾಗುತ್ತಿರುವ ಸೇತು ವೆಯ ಕಾರ್ಯ ಇದುವರೆಗೂ ಪೂರ್ಣಗೊಳ್ಳದ ಕಾರಣ ಈ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಗುರುವಾರ ತಾಲ್ಲೂಕಿನ ಅಸೋಗಾದಲ್ಲಿ 18.2 ಮಿ. ಮೀ, ಬೀಡಿಯಲ್ಲಿ 5.4 ಮಿ. ಮೀ, ಕಕ್ಕೇರಿಯಲ್ಲಿ 4.6 ಮಿ. ಮೀ, ಗುಂಜಿಯಲ್ಲಿ 36.4 ಮಿ. ಮೀ, ಗವ್ವಾಳಿಯಲ್ಲಿ 32.8 ಮಿ. ಮೀ, ಜಾಮಗಾಂವನಲ್ಲಿ 81.8 ಮಿ. ಮೀ, ಲೋಂಡಾ ರೈಲು ನಿಲ್ದಾಣದಲ್ಲಿ 36 ಮಿ. ಮೀ, ಲೋಂಡಾದಲ್ಲಿ 44.4 ಮಿ. ಮೀ ಮಳೆಯಾಗಿದೆ.

ನಾಗರಗಾಳಿಯಲ್ಲಿ 24.1 ಮಿ. ಮೀ, ಜಾಂಬೋಟಿಯಲ್ಲಿ 24.8 ಮಿ. ಮೀ, ಚಾಪೋಲಿಯಲ್ಲಿ 30.8 ಮಿ. ಮೀ, ಕಣಕುಂಬಿಯಲ್ಲಿ 85.2 ಮಿ.ಮೀ , ಅಮಗಾಂವದಲ್ಲಿ 78.8 ಮಿ.ಮೀ ಹಾಗೂ ಖಾನಾಪುರ ಪಟ್ಟಣದಲ್ಲಿ 11.6 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನಲ್ಲಿ ಮಳೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ನೀರು ಬಿಡುಗಡೆ
ಮುನವಳ್ಳಿ: ಸವದತ್ತಿ ಹಾಗೂ ರಾಮದುರ್ಗ ಮತ್ತು ಬಾದಾಮಿ ತಾಲ್ಲೂಕಿನ ಜನತೆ ಮತ್ತು ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ನವಿಲುತೀರ್ಥ ಮಲಪ್ರಭಾ ಜಲಾಶಯದ ನಾಲ್ಕು ಗೇಟ್ಗಳಿಂದ ನೀರು ಬಿಡಲಾಗಿದೆ.

ಜಲಾಶಯಕ್ಕೆ 1450 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1224 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಜಲಾಶಯದಲ್ಲಿ 2048 ಅಡಿ ನೀರು ಸಂಗ್ರಹವಾಗಿದ್ದು, ಕಳೆಗ ವರ್ಷ ಈ ಅವಧಿಯಲ್ಲಿ 2033 ಅಡಿ ನೀರು ಸಂಗ್ರಹವಾಗಿ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್. ನರಸಣ್ಣವರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.