ಶುಕ್ರವಾರ, ಜೂನ್ 18, 2021
28 °C

ಮುಕ್ತೇಶ್‌ ಮರಳಿ ಬರುತ್ತಾರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ(ಪಿಟಿಐ):  ಮುಕ್ತೇಶ್‌ ಸುರಕ್ಷಿತವಾಗಿ ಮರಳಿ ಬರುತ್ತಾರೆ ಎಂದು ಪತನಗೊಂಡ ಮಲೇಷ್ಯಾ ವಿಮಾನದಲ್ಲಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಮುಕ್ತೇಶ್‌ ಮುಖರ್ಜಿ ಅವರ ಚಿಕ್ಕಪ್ಪ ಮಿಲನ್‌ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಣ್ಣನ ಮಗ ಜೀವಂತವಾಗಿದ್ದಾರೆ ಎಂಬ ಭರವಸೆ  ಅವರದು. ‘ನಮ್ಮ ಕುಟುಂಬದ ಮೇಲೆ ದೇವರು ಅಷ್ಟೊಂದು ಕ್ರೂರವಾಗಿರಲಾರ’ ಎಂದು  ಕೋಲ್ಕತ್ತ ಹೈಕೋರ್ಟ್‌­ನಲ್ಲಿ ವಕೀಲ ರಾಗಿರುವ ಮಿಲನ್‌ ಹೇಳಿದ್ದಾರೆ.ಮುಕ್ತೇಶ್‌, ಇಂದಿರಾಗಾಂಧಿ ಅವರ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಖಾತೆ ಸಚಿವರಾಗಿದ್ದ ಮೋಹನ್‌ ಕುಮಾರಮಂಗಲಂ ಅವರ ಮೊಮ್ಮಗ. ಕುಮಾರಮಂಗಲಂ, 1973ರ ಮೇನಲ್ಲಿ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.ಮುಕ್ತೇಶ್‌ ಅವರು ಕುಮಾರಮಂಗಲಂ ಅವರ ಹಿರಿಯ ಪುತ್ರಿ    ಉಮಾ ಅವರ ಪುತ್ರ. ಅವರ ತಂದೆ ಮೂಲಿ ಮುಖರ್ಜಿ ಅವರು ಆರ್ಸೆಲ್ಲರ್‌ ಮಿತ್ತಲ್‌ ಕಂಪೆನಿಯ ಆಡಳಿತ ಮಂಡಳಿ ಸದಸ್ಯರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.