ಹಾಸನ: ಸರ್ಕಾರಿ ಶಾಲೆಗಳಿಗೆ ಪ್ರವೇಶಾತಿ ಕಡಿಮೆಯಾಗುತ್ತ ಒಂದೊಂದಾಗಿ ಶಾಲೆಗಳು ಮುಚ್ಚುತ್ತಿದ್ದರೆ, ಚನ್ನರಾಯಪಟ್ಟಣ ತಾಲ್ಲೂಕಿ ನಲ್ಲಿ ಮೂರು ವರ್ಷಗಳಿಂದ ಮುಚ್ಚಿದ್ದ ನಾಲ್ಕು ಶಾಲೆಗಳನ್ನು ಈ ವರ್ಷ ಪುನಃ ತೆರೆಯಲಾಗಿದೆ.

ಐದಕ್ಕೂ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚುವ ತೀರ್ಮಾನವನ್ನು ಸರ್ಕಾರ ಕೈಗೊಂಡ ಬಳಿಕ ಜಿಲ್ಲೆಯಲ್ಲಿ ಅನೇಕ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ `ಶಾಲೆಗಳನ್ನು ಮುಚ್ಚಿಲ್ಲ, ವಿಲೀನ ಮಾಡಿದ್ದೇವೆ, ವಿದ್ಯಾರ್ಥಿಗಳು ಬಂದರೆ ಪುನಃ ತೆರೆಯುತ್ತೇವೆ' ಎನ್ನುತ್ತ ಬಂದಿದೆ. ಆದರೆ, ಚನ್ನರಾಯಪಟ್ಟಣದ ಈ ನಾಲ್ಕು ಶಾಲೆಗಳನ್ನು ಬಿಟ್ಟರೆ ಬೇರೆಲ್ಲೂ ಮುಚ್ಚಿದ್ದ ಶಾಲೆಗಳನ್ನು ಪುನಃ ತೆರೆದ ಉದಾಹರಣೆಗಳಿಲ್ಲ.

2008-09ನೇ ಸಾಲಿನಲ್ಲಿ ಮುಚ್ಚಿದ್ದ ನರಿಹಳ್ಳಿ ಪ್ರಾಥಮಿಕ ಶಾಲೆ, ಟಿ.ಹೊನ್ನೇನಹಳ್ಳಿ ಪ್ರಾಥಮಿಕ ಶಾಲೆ, ಕಾವಲು ಹೊಸೂರು ಪ್ರಾಥಮಿಕ ಶಾಲೆ ಹಾಗೂ ದೊಡ್ಡೇರಿ ಕಾವಲು ಪ್ರಾಥಮಿಕ ಶಾಲೆ ಇವು ಈ ವರ್ಷ ಪುನಃ ಮಕ್ಕಳಿಗಾಗಿ ಬಾಗಿಲು ತೆರೆದುಕೊಂಡಿರುವ ಶಾಲೆಗಳು.
`ನಾವು ಮನೆ ಮನೆಗೆ ಭೇಟಿ ನೀಡಿ ಪಾಲಕರನ್ನು ವಿನಂತಿಸಿಕೊಂಡೆವು.

ಊರಿನ ಸರ್ಕಾರಿ ಶಾಲೆಯನ್ನು ಮುಚ್ಚಿದರೆ ಎಂಥ ಸಮಸ್ಯೆಯಾಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆವು. ಖಾಸಗಿ ಶಾಲೆಗಳಿಗೆ ಅತಿಯಾದ ಶುಲ್ಕ ತೆತ್ತು ಬೇಸರಗೊಂಡಿದ್ದ ಅನೇಕ ಪಾಲಕರಿಗೆ ನಮ್ಮ ಮಾತು ಮನವರಿಕೆಯಾಯಿತು. ಒಳ್ಳೆಯ ಶಿಕ್ಷಕರನ್ನು ಶಾಲೆಗೆ ಕಳುಹಿಸಿದರೆ ಮಕ್ಕಳನ್ನು ಕಳುಹಿಸಲು ಸಿದ್ಧ ಎಂದರು. ಅದರಂತೆ ನಾವೂ ಸೂಕ್ತ ಕ್ರಮ ಕೈಗೊಂಡೆವು. ಈಗ ನಾಲ್ಕು ಶಾಲೆಗಳು ಬಾಗಿಲು ತೆರೆದಿವೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು ತಿಳಿಸಿದರು.

ನರಿಹಳ್ಳಿ ಪ್ರಾಥಮಿಕ ಶಾಲೆಯಲ್ಲೆಗ 18 ವಿದ್ಯಾರ್ಥಿಗಳಿದ್ದಾರೆ. ಅದರಂತೆ ಟಿ.ಹೊನ್ನೇನಹಳ್ಳಿಯಲ್ಲಿ 22, ಕಾವಲು ಹೊಸೂರು ಶಾಲೆಯಲ್ಲಿ 15 ಹಾಗೂ ದೊಡ್ಡೇರಿ ಕಾವಲು ಪ್ರಾಥಮಿಕ ಶಾಲೆಯಲ್ಲಿ 12 ವಿದ್ಯಾರ್ಥಿಗಳಿದ್ದಾರೆ. ಇವುಗಳಲ್ಲಿ ಹೆಚ್ಚಿನವರು ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಬಂದಿದ್ದಾರೆ ಎಂಬುದು ವಿಶೇಷವಾಗಿದೆ.

ದೊಡ್ಡೇರಿ ಕಾವಲಿನ ಶಿಕ್ಷಕರೊಬ್ಬರು ಚನ್ನರಾಯಪಟ್ಟಣದ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರಾಗಿದ್ದಾರೆ. ಅವರು ನಿವೃತ್ತಿಯಾಗಲು ಇನ್ನು ಕೆಲವೇ ತಿಂಗಳು ಉಳಿದಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಸಂಪರ್ಕಿಸಿ, `ನಿಮ್ಮದೇ ಊರಿನ ಮತ್ತು ನೀವು ಕಲಿತ ಸರ್ಕಾರಿ ಶಾಲೆ ಮುಚ್ಚಿರುವುದು ನಿಮಗೆ ಬೇಸರ ತರುವ ವಿಚಾರವಲ್ಲವೇ ? ಅದನ್ನು ಮತ್ತೆ ತೆರೆಯಲು ನೀವೇಕೆ ಇಲಾಖೆಗೆ ಸಹಕಾರ ನೀಡಬಾರದು ?' ಎಂದು ಪ್ರಶ್ನಿಸಿದ್ದಾರೆ.

ಜತೆಗೆ ಶಾಲೆಯನ್ನು ಪುನಃ ತೆರೆಯಲು ಸಹಕಾರ ನೀಡಿದರೆ ಮಾತ್ರ ನಿವೃತ್ತಿ ನಂತರದ ಸೌಲಭ್ಯಗಳನ್ನು ನೀಡುತ್ತೇವೆ' ಎಂದಿದ್ದಾರೆ. ಶಾಲೆಯ ಜತೆಗೆ ಭಾವನಾತ್ಮಕ ಸಂಬಂಧವೂ ಇರುವುದರಿಂದ ಆ ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಹಕಾರ ನೀಡಿ ಶಾಲೆಯನ್ನು ಪುನಃ ತೆರೆಯಲು ಸಹಕರಿಸಿದ್ದಾರೆ.

`ತಾಲ್ಲೂಕಿನಲ್ಲಿ ಈವರೆಗೆ ಒಟ್ಟು 20 ಶಾಲೆಗಳು ಮುಚ್ಚಿವೆ. ಅವೆಲ್ಲವನ್ನೂ ಪುನಃ ತೆರೆಯಬೇಕು ಎಂಬುದು ನಮ್ಮ ಬಯಕೆ. ಕಳೆದ ವರ್ಷ ಮೂರು ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದಿತ್ತು. ಆದರೆ, ಕಷ್ಟಪಟ್ಟು ಅವು ಮುಚ್ಚದಂತೆ ನೋಡಿಕೊಂಡೆವು. ಪೋಷಕರು ಸಹಕಾರ ನೀಡಿದರೆ ಮುಚ್ಚಿದ ಎಲ್ಲ ಶಾಲೆಗಳನ್ನೂ ಆರಂಭಿಸಲು ಸಾಧ್ಯ' ಎಂದು ಪಾಂಡು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.