ದಾವಣಗೆರೆ: ಪಿಳಪಿಳನೆ ಕಣ್ಣು ಬಿಡುತ್ತಿದ್ದ ಮುದ್ದು ಕಂದಮ್ಮಗಳು, ತಮ್ಮ ಮಗುವಿಗೆ ಯಾವ ಹೆಸರು ಸೂಚಿಸಬಹುದು ಎಂಬ ಕುತೂಹಲ ತಾಯಿಯರಲ್ಲಿ, ತೊಟ್ಟಿಲು ಕಾರ್ಯಕ್ರಮ ಹೇಗಿರಬಹುದು ಎಂಬುದನ್ನು ನೋಡಲು ಬಂದಿದ್ದ ಒಂದಷ್ಟು ಮಂದಿ...

- ಈ ದೃಶ್ಯಗಳು ಕಂಡುಬಂದಿದ್ದು ದಾವಣಗೆರೆಯ ವಿರಕ್ತಮಠದಲ್ಲಿ.ಬಸವ ಜಯಂತಿ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಮಂಗಳವಾರ ಆಯೋಜಿಸಿದ್ದ `ತೊಟ್ಟಿಲು ಕಾರ್ಯಕ್ರಮ~ಕ್ಕೆ ತಾಯಂದಿರು ತಮ್ಮ ಮುದ್ದು ಮಕ್ಕಳೊಂದಿಗೆ ನಾಮಕರಣಕ್ಕೆ ಆಗಮಿಸಿದ್ದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ `ಬಸವರಾಜ~, `ಶಿವಯೋಗಿ~, `ಜಯದೇವ~ ಎಂದು ಮಕ್ಕಳಿಗೆ ನಾಮಕರಣ ಮಾಡುತ್ತಿದ್ದರೆ, ಅತ್ತ ಕಂದಮ್ಮಗಳು ನಗು- ಅಳಿವಿನೊಂದಿಗೆ ಮಗ್ನವಾಗಿದ್ದವು!

ತೊಟ್ಟಿಲು ಕಾರ್ಯಕ್ರಮಕ್ಕೆ ಸಾಕಷ್ಟು ತಾಯಂದಿರು ನಾಮಕರಣಕ್ಕೆ ಮಕ್ಕಳನ್ನು ಕರೆ ತಂದಿದ್ದರು. ಐತಿಹಾಸಿಕ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳಿಗೆ ನಾಮಕರಣ ಮಾಡಿದರೆ ಎಲ್ಲವೂ ಒಳಿತಾಗಲಿದೆ ಎಂದು ಪೋಷಕರು ಅನಿಸಿಕೆ ವ್ಯಕ್ತಪಡಿಸಿದರು.

ಅದಕ್ಕೂ ಮೊದಲು ಮಾತನಾಡಿದ ಬಸವಪ್ರಭು ಸ್ವಾಮೀಜಿ, ಮಕ್ಕಳಿಗೆ ದಾರ್ಶನಿಕರ, ಬಸವಾದಿಶರಣ ಹೆಸರು ಇಡುವುದು ಸೂಕ್ತ. ಇದರಿಂದ ಮಕ್ಕಳಲ್ಲಿ ಒಳ್ಳೆಯ ಭಾವನೆಹುಟ್ಟಿ ಮಹಾನ್ ವ್ಯಕ್ತಿಗಳಂತೆ ಆಗಲು ಪ್ರಯತ್ನಿಸುತ್ತಾರೆ ಎಂದು ಸಲಹೆ ನೀಡಿದರು.

ಜಗತ್ತಿನಲ್ಲಿ ಸಂಸ್ಕಾರ, ಸಂಸ್ಕೃತಿಯ ಕೊರತೆಯಿಂದ ಅಪರಾಧ ಪ್ರಕರಣ ಗಳು ಹೆಚ್ಚುತ್ತಿವೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದ ಅವರು, ಸ್ತ್ರೀಕುಲದ ಉದ್ಧಾರಕ್ಕೆ ದುಡಿದವರು ಬಸವಣ್ಣ. ಅವರಿಗೆ ಸಮಾಜದಲ್ಲಿ ಸಮಾನತೆ ಕಲ್ಪಿಸಬೇಕು ಎಂದು ಮನೆಬಿಟ್ಟು ಹೊರಬಂದರು. ಜಯಂತಿಯಂದು ಮಾತ್ರ ಅವರನ್ನು ನೆನಪಿಸಿಕೊಳ್ಳದೇ ಅವರ ಕಾಯಕ, ದಾಸೋಹ, ಶಿವಯೋಗಿ ತತ್ವಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಬಸವತತ್ವದಲ್ಲಿ ಪರಿಹಾರ ಇದೆ. ಬಸವ ತತ್ವಗಳು ಜಾಗತೀಕ ಸಮಸ್ಯೆಗಳಿಗೂ ಪರಿಹಾರ ಸೂಚಿಸುತ್ತವೆ. 12ನೇ ಶತಮಾನದಲ್ಲಿ ಸಮಾನತೆಗೆ ದುಡಿದ ಮಹಾನ್ ವ್ಯಕ್ತಿ ಬಸವಣ್ಣ. ಶೋಷಣೆಗೆ ಒಳಗಾದವರಿಗೆ ಬದುಕು ಕಟ್ಟಿಕೊಟ್ಟವ್ಯಕ್ತಿ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.