ಗಜೇಂದ್ರಗಡ: ಕಳೆದ ಕೆಲ ದಿನಗಳ ಹಿಂದೆ ಸುರಿದ ಅಲ್ಪ ಪ್ರಮಾಣದ ಮಳೆಯಿಂದ ಹರ್ಷಗೊಂಡ ಅನ್ನದಾತ ವಿಳಂಬದ ಮಧ್ಯೆಯೂ ಮುಂಗಾರು ಬಿತ್ತನೆಗೆ ಒಲವು ತೋರಿದ್ದಾನೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ವರ್ತಕ (ದಲ್ಲಾಳಿ) ಅಂಗಡಿಗಳು ಮುದ್ರೆ ರಹಿತ ಬೀಜ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವುದು ರೈತರ ದುಗುಡ ಹೆಚ್ಚಿಸಿದೆ.

ಬಿತ್ತನೆ ಅವಧಿ ಮುಗಿದ ಬಳಿಕ (ಕೆಲ ದಿನಗಳ ಹಿಂದೆಯಷ್ಟೇ) ಅಲ್ಪ ಪ್ರಮಾಣ ಮಳೆ ಧರೆಗಿಳಿದಿದೆ. ಪರಿಣಾಮ ಭೂ ತಾಯಿಯ ಒಡಲು ಸ್ವಲ್ಪ ತಣ್ಣಗಾಗಿದೆ. ಹೀಗಿದ್ದರೂ ರೈತರು ವಲ್ಲದ ಮನಸ್ಸಿ ನಿಂದ ಬಿತ್ತನೆಗೆ ಮುಂದಾ ಗಿದ್ದಾರೆ. ಆದರೆ, ವರ್ತಕರು ನೀಡುವ ಮುದ್ರೆ ರಹಿತ ಬೀಜ ಬಿತ್ತನೆಯಿಂದಾಗಿ ನೇೀಗಿಲ ಯೋಗಿಯ ಜಂಘಾಬಲವೇ ಕುಸಿದಿದೆ.

ಮುದ್ರೆ ರಹಿತ ಬೀಜಗಳ ಪ್ರಕ್ರಿಯೆ: ತಾಲ್ಲೂಕಿನ ಗಜೇಂದ್ರಗಡ, ರೋಣ, ನರೇಗಲ್ ಮತ್ತು ಹೊಳೆ ಆಲೂರ ಪಟ್ಟಣಗಳಲ್ಲಿ 70 ಕ್ಕೂ ಅಧಿಕ ವರ್ತಕ (ದಲ್ಲಾಳಿ) ಅಂಗಡಿಗಳಿವೆ. 20 ಕ್ಕೂ ಅಧಿಕ ಅಧಿಕೃತ ಬೀಜ, ಗೊಬ್ಬರ ಮಾರಾಟ ಮಳಿಗೆಗಳಿವೆ. ಆದರೆ, ರೈತರು ಅಧಿಕೃತ ಬೀಜ ಮಾರಾಟ ಕೇಂದ್ರಗಳಿಂದ ನೇರವಾಗಿ ಬೀಜ, ಗೊಬ್ಬರವನ್ನು ಖರೀದಿಸದೆ, ವರ್ತಕರ ಮೂಲಕ ಖರೀದಿಸುತ್ತಾರೆ. ಕಾರಣ ಬಿತ್ತನೆ ವೇಳೆ ಬೀಜ ಗೊಬ್ಬರ ಖರೀದಿಗೆ ಅವಶ್ಯವಿರುವ ಆರ್ಥಿಕ ಅನುಕೂಲತೆ ರೈತರಿಗೆ ಇರುವು ದಿಲ್ಲ. ಈ ಹಿನ್ನೆಲೆಯಲ್ಲಿ ವರ್ತಕರು ಬಡ್ಡಿ ದರದಲ್ಲಿ ರೈತರಿಗೆ ಬೀಜ, ಗೊಬ್ಬರ ನೀಡಿ, ಅನುಕೂಲ ಕಲ್ಪಿಸುತ್ತಾರೆ. ಫಸಲು ಮಾರಾಟ ವೇಳೆ ವರ್ತಕರು ಬಿತ್ತನೆ ವೇಳೆ ನೀಡಿದ ಬೀಜ, ಗೊಬ್ಬರಕ್ಕೆ ಸಂಬಂಧಿಸಿದ ಒಟ್ಟು ಹಣವನ್ನು ಬಡ್ಡಿ ಸಹೀತ ಹಿಂಪಡೆದು ಕೊಳ್ಳುವುದು ರೂಢಿಯಲ್ಲಿದೆ.

ಇದನ್ನೇ ಬಂಡವಾಳವನ್ನಾಗಿಸಿ ಕೊಂಡ ವರ್ತಕರು ಅಧಿಕೃತ ಮಾರಾಟ ಕೇಂದ್ರ ಗಳಲ್ಲಿ ದೊರೆಯುವ ಮುದ್ರೆ ಯುತ ಬೀಜಗಳ ಖರೀದಿಸಲು ಅವಕಾಶ ನೀಡದೆ, ಹೆಚ್ಚಿನ ಲಾಭಕ್ಕಾಗಿ ಅನಧಿಕೃತ ಖಾಸಗಿ ಬೀಜ ಕಂಪನಿಗಳು ನೀಡುವ ಮುದ್ರೆ ರಹಿತ ಬೀಜಗಳನ್ನು ರೈತರಿಗೆ ಬಲವಂತವಾಗಿ ನೀಡುತ್ತಾರೆ.

ನೇಗಿಲ ಯೋಗಿ ಅನಿವಾರ್ಯವಾಗಿ ಮುದ್ರೆ ರಹಿತ ಬೀಜ ಬಿತ್ತುತ್ತಿದ್ದಾರೆ 1,10,500 ಹೆಕ್ಟರ್ ಸಾಗುವಳಿ ಕ್ಷೇತ್ರ:ರೋಣ ತಾಲ್ಲೂಕು ಒಟ್ಟು 1,10,500 ಹೆಕ್ಟರ್ ಪ್ರದೇಶ ಕೃಷಿ ಕ್ಷೇತ್ರವನ್ನು ಹೊಂದಿದೆ. ಇದರಲ್ಲಿ ಪ್ರಸಕ್ತ ವರ್ಷ 70,556 ಹೆಕ್ಟರ್ ಪ್ರದೇಶ ಮುಂಗಾರು ಬಿತ್ತನೆಯನ್ನು ಅಂದಾಜಿ ಸಲಾಗಿತ್ತು. ಮುಂಗಾರು ಬಿತ್ತನೆಗೆ ಅಗತ್ಯವಿರುವ 1,520 ಕ್ವಿಂಟಲ್ ಮೆಕ್ಕೆಜೋಳ, 2,530 ಕ್ವಿಂಟಲ್ ಹೈಜೋಳ, 4,590 ಕ್ವಿಂಟಲ್ ಸಜ್ಜಿ, 2,860 ಕ್ವಿಂಟಲ್ ಸೂರ್ಯಕಾಂತಿ, 568 ಕ್ವಿಂಟಲ್ ಹೆಸರು, 3,620 ಕ್ವಿಂಟಲ್ ತೊಗರಿ, 186 ಕ್ವಿಂಟಲ್ ಶೇಂಗಾ ಬೀಜವನ್ನು ಕೃಷಿ ಇಲಾಖೆ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಹಾಗೂ ಭೂ ಚೇತನ ಕೇಂದ್ರ ಗಳಲ್ಲಿ ಸಂಗ್ರಹಿಸಡಲಾಗಿತ್ತು.

ಆದರೆ, ಕೆಲ ಕೊಳವೆ ಬಾವಿ ಹೊಂದಿರುವ ರೈತರು ಇಲಾಖೆ ನೀಡುವ ರೀಯಾಯಿತಿ ದರದ ಬೀಜಗಳನ್ನು ಖರೀದಿಸಿದನ್ನು ಹೊರತು ಪಡಿಸಿದರೆ, ಬಹುತೇಕ ರೈತರು ಅನಿವಾರ್ಯವಾಗಿ ವರ್ತಕರಿಂದ ಮುದ್ರೆ ರಹಿತ ಬೀಜ ಗಳನ್ನು ಖರೀದಿಸಿದ್ದಾರೆ.

ವರ್ತಕರೊಂದಿಗೆ ಕಂಪನಿಗಳ ಒಪ್ಪಂದ: ತಾಲ್ಲೂಕಿನ ಬಹುತೇಕ ಕೃಷಿಕರು ವರ್ತಕ ಕೇಂದ್ರಗಳನ್ನು ಅವ ಲಂಭಿಸಿವೆ. ಇದನ್ನು ಅತ್ಯಂತ ಗಂಭೀರ ವಾಗಿ ಪರಿಗಣಿಸಿರುವ ಮುದ್ರೆ ರಹಿತ ಬೀಜ ತಯಾರಿಕರು ವರ್ತಕರೊಂದಿಗೆ ಹೆಚ್ಚು ಲಾಭದ ಒಳ ಒಪ್ಪಂದ ಮಾಡಿ ಕೊಂಡಿವೆ.

ಹೀಗಾಗಿ ತಾಲ್ಲೂಕಿನಾದ್ಯಂತ ಮುದ್ರೆ ರಹಿತ ಬೀಜ ಭರಾಟೆ ಭರದಿಂದ ಸಾಗಿದೆ. ಅಧಿಕೃತ ಬೀಜ ಮಾರಾಟ ಕೇಂದ್ರಗಳಲ್ಲಿ ಮುದ್ರೆಯುತ ಬೀಜದ ಪ್ಯಾಕೆಟ್ಗೆ ಕನಿಷ್ಠ 350 ರಿಂದ 800 ವರೆಗೆ (ಕಂಪನಿ ಆಧಾರದ ಮೇಲೆ ದರ) ದರಗಳಿವೆ. ಆದರೆ, ಮುದ್ರೆ ರಹಿತ ಬೀಜದ ಪ್ಯಾಕೇಟ್ಗಳಿಗೆ ವರ್ತಕರು ರೈತರಿಂದ ದೊಡ್ಡ ಮೊತ್ತದ ಹಣ ಪಡೆ ಯಲಾಗುತ್ತದೆ. ಇದರಿಂದ ವರ್ತಕರಿಗೆ ಮತ್ತು ಬೀಜ ತಯಾರಿಸುವವರಿಗೆ ಹಣದ ಹೊಳೆಯೇ ಹರಿಯುತ್ತದೆ. ಹೀಗಿದ್ದರೂ ಇಲಾಖೆ ಮೌನ ವಹಿಸಿ ರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ ದೂರಿದ್ದಾರೆ.

ಇವುಗಳ ಬಿತ್ತನೆಯಿಂದಾಗಿ ಇಳು ವರಿ ಕ್ಷೀಣಿಸುವಿಕೆ, ಗುಣಮಟ್ಟ ಕುಸಿತ, ಕೀಟ, ರೋಗಭಾದೆ ಸೇರಿದಂತೆ ನಾನಾ ತೊಂದರೆಗಳನ್ನು ಎದುರಿಸ ಬೇಕಾದ ಅನಿವಾರ್ಯತೆ ನೇಗಿಲಯೋಗಿ ಯದ್ದು. ಇದರಿಂದ ಈ ಬೀಜಗಳ ಮೇಲೆ ರೈತ ವಿಶ್ವಾಸ ಕಳೆದುಕೊಂಡಿದ್ದಾನೆ.

ಶಿಸ್ತು ಕ್ರಮ: ರೋಣ ತಾಲ್ಲೂಕಿನಲ್ಲಿ ಎಲ್ಲ ವರ್ತಕ (ದಲ್ಲಾಳಿ) ಕೇಂದ್ರಗಳಿಗೆ ಮುದ್ರೆ ರಹಿತ ಬೀಜ, ಗೊಬ್ಬರ ಮಾರಾಟ ಮಾಡದಂತೆ ನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೂ ಸಹ ಇಲಾಖೆ ನೀಡುವ ಬೀಜಗಳನ್ನೇ ಖರೀದಿಸಿ ಎಂದು ಮನವರಿಕೆ ಮಾಡಲಾ ಗಿದೆ. ಆದಾಗ್ಯೂ ವರ್ತಕ ಕೇಂದ್ರಗಳು ಮುದ್ರೆ ರಹಿತ ಬೀಜ ಮಾರಾಟದಲ್ಲಿ ತೊಡಗಿದ್ದರೆ ಶಿಸ್ತು ಕ್ರಮ ಜರುಗಿಸಲಾ ಗುವುದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.