ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿರುವ ಮಾಗಳ ಗ್ರಾಮವನ್ನು ಮುಳುಗಡೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುತ್ತದೆ ಎಂದು ಗ್ರಾಮದ ಮುಖಂಡರಾದ ಎಚ್.ಎಚ್. ಸಾಹುಕಾರ ಎಚ್ಚರಿಸಿದರು. ತಾಲ್ಲೂಕಿನ ರಾಜವಾಳದ ಬಳಿ ನಿರ್ಮಾಣವಾಗುತ್ತಿರುವ ಸಿಂಗಟಾಲೂರು ಏತ ನೀರಾವರಿಯ ಬ್ಯಾರೇಜ್ ಪ್ರದೇಶಕ್ಕೆ ಸೋಮವಾರ ಮುತ್ತಿಗೆ ಹಾಕಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರೂ ಕೇವಲ ಹೇಳಿಕೆಗಳನ್ನು ನೀಡುತ್ತಾ ಹಾದಿ ತಪ್ಪಿಸುತ್ತಿದ್ದಾರೆ ಎಂದರು.
ಯೋಜನೆಯ ಹಿನ್ನೀರು ಗ್ರಾಮ ವ್ಯಾಪ್ತಿಯಲ್ಲಿ ನುಗ್ಗುತ್ತಿದ್ದು ಬಸಿನೀರಿನಿಂದ ಮನೆಗಳು ಕುಸಿದು ಬೀಳುತ್ತಿದ್ದು ಅಪಾರ ನಷ್ಟವಾಗುತ್ತಿದೆ. ಆದರೂ ಮಾಗಳ ಮುಳುಗುವುದಿಲ್ಲ ಎಂದು ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಸಂತ ಮಾತನಾಡಿ, ಮಾಗಳ ಗ್ರಾಮವನ್ನೂ ಮುಳುಗಡೆ ಗ್ರಾಮವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.ಮಾಗಳ ಗ್ರಾಮವನ್ನು ಸಂಪೂರ್ಣ ಮುಳುಗಡೆ ಗ್ರಾಮವೆಂದು ಘೋಷಿಸಬೇಕು, ವೈಜ್ಞಾನಿಕ ಆಧಾರದಲ್ಲಿ ನಷ್ಟ ಅಂದಾಜಿಸಿ, ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕು, ನೆರೆ ನಿರಾಶ್ರಿತರಿಗೆ ನೀಡಲಾಗಿರುವ ಆಸರೆ ಯೋಜನೆ ಅಡಿ ಗ್ರಾಮವನ್ನು ಸ್ಥಳಾಂತರಿಸುವುದು ಬೇಡ, ಗ್ರಾಮಸ್ಥರಿಗೆ ಮುಳುಗಡೆ ಪ್ರದೇಶ ಹೊರತುಪಡಿಸಿ ಬೇರೆಡೆಗೆ ರುದ್ರಭೂಮಿ ಸ್ಥಳ ನೀಡಬೇಕು. ಕೈಬಿಟ್ಟ ಕೆಲವು ಜಮೀನುಗಳನ್ನು ಪುನಃ ಸರ್ವೆ ಮಾಡಿಸಿ ಪರಿಹಾರ ಒದಗಿಸಬೇಕು.

ಬೇಡಿಕೆಗಳು ಈಡೇರುವವರೆಗೂ ಕಾಮಗಾರಿಯನ್ನು ಆರಂಭಿಸಲು ಬಿಡುವುದಿಲ್ಲ ಎಂದು ಒತ್ತಾಯಿಸಿ ಮನವಿಪತ್ರ ಸಲ್ಲಿಸಿದರು.ಮುಖಂಡರಾದ ಅರವಳ್ಳಿ ವೀರಣ್ಣ, ಎಸ್.ಆರ್. ಹಿರೇಗೌಡರ್, ಎಳೆಮಾಲಿ ವಿರುಪಾಕ್ಷಪ್ಪ, ಜಯಕೀರ್ತಿ, ಬಿ.ಚಂದ್ರಪ್ಪ, ಜಿ.ನಾಗಭೂಷಣ, ಸಾಯಿರಾಮ, ಎಚ್.ರಾಮಬಾಬು, ಪಿ.ಎಸ್ ಕುದುರಿಹಾಳ್, ಹೇಮಪ್ಪ, ಎಸ್.ರಾಜಕುಮಾರ್, ಚನ್ನವೀರಮ್ಮ, ಎಚ್.ಪ್ರಕಾಶ್, ಹನುಮಂತಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.