ಬೆಂಗಳೂರು/ಸುರತ್ಕಲ್: ಅಡುಗೆ ಅನಿಲ ಸಾಗಣೆಯ ಬಾಡಿಗೆ ದರ ಹೆಚ್ಚಿಸುವಂತೆ ಒತ್ತಾಯಿಸಿ ಎಲ್ಪಿಜಿ ಸಾಗಣೆ ಟ್ಯಾಂಕರ್ಗಳ ಮಾಲೀಕರು ಬುಧವಾರ ರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ಬೆಂಗಳೂರು ನಗರದೆಲ್ಲೆಡೆ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಗ್ರಾಹಕರಿಗೆ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ.

ದೇಶ-ವಿದೇಶದಿಂದ ಹಡಗಿನಲ್ಲಿ ನವ ಮಂಗಳೂರು ಬಂದರಿಗೆ ಬರುವ ಅನಿಲವನ್ನು ಕೊಳವೆ ಮಾರ್ಗದಲ್ಲಿ ಮಂಗಳೂರು ರಿಫೈನರಿ ಅಂಡ್ ಪೆಟ್ರೊ ಕೆಮಿಕಲ್ಸ್ ಲಿ.(ಎಂಆರ್ಪಿಎಲ್)ಗೆ ರವಾನಿಸಲಾಗುತ್ತದೆ. ಇಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಎಚ್ಪಿಸಿಎಲ್)ನ ಬಂಕ್ನಿಂದ ಬುಲೆಟ್ ಟ್ಯಾಂಕರ್ಗಳಿಗೆ ಅನಿಲ ಭರ್ತಿ ಮಾಡಿ ನೆಲಮಂಗಲ ಸಮೀಪದ ಘಟಕಕ್ಕೆ ಸರಬರಾಜು ಮಾಡಲಾಗುತ್ತದೆ. ಸದ್ಯ ನೂರಾರು ಬುಲೆಟ್ ಟ್ಯಾಂಕರ್ಗಳು ಸುರತ್ಕಲ್ ಬಳಿಯೇ ನಿಲುಗಡೆಗೊಂಡಿರುವುದರಿಂದ ರಾಜ್ಯದಲ್ಲಿನ ಅನಿಲ ಸರಬರಾಜು ಮೇಲೆ ಪ್ರತೀಕೂಲ ಪರಿಣಾಮವಾಗಲಿದೆ.

ಮುಷ್ಕರಕ್ಕೂ ಮುನ್ನ ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಸುಮಾರು ಒಂದು ಲಕ್ಷ ಅಡುಗೆ ಅನಿಲ ಸಿಲಿಂಡರ್ಗಳು ಪೂರೈಕೆಯಾಗುತ್ತ್ದ್ದಿದವು. ಆದರೆ, ಮುಷ್ಕರದ ಹಿನ್ನೆಲೆಯಲ್ಲಿ ಎಲ್ಪಿಜಿ ಸಿಲಿಂಡರ್ ಸಾಗಣೆಯ 3,600 ಟ್ಯಾಂಕರ್ಗಳ ಸೇವೆ ಸ್ಥಗಿತಗೊಂಡಿದೆ. ಈಗ `ದಾಸ್ತಾನು ಇಲ್ಲ~ ಎಂದು ಹೇಳುತ್ತಿರುವ ವಿತರಕರು, ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

`ಮತ್ತೆ ಮುಷ್ಕರ ಆರಂಭವಾಗಿರುವುದರಿಂದ ಸಮಸ್ಯೆ ಮೂರು ಪಟ್ಟು ಹೆಚ್ಚಾಗಿದೆ~ ಎಂದು ಎಲ್ಪಿಜಿ ವಿತರಕರ ಒಕ್ಕೂಟದ ಕಾರ್ಯದರ್ಶಿ ಎನ್.ಸತ್ಯನ್ `ಪ್ರಜಾವಾಣಿ~ಗೆ ತಿಳಿಸಿದರು.

ಈ ಹಿಂದೆ ಜನವರಿ ತಿಂಗಳಲ್ಲಿ ಟ್ಯಾಂಕರ್ ಮಾಲೀಕರು ಮುಷ್ಕರ ನಡೆಸಿದಾಗ ಅನಿಲ ಪೂರೈಕೆ ವಿಳಂಬದಿಂದ ಗ್ರಾಹಕರು ಹೆಚ್ಚಿನ ತೊಂದರೆ ಅನುಭವಿಸಿದ್ದರು.

ಬೆಂಗಳೂರು ನಗರದ ಅನಿಲ ವಿತರಣಾ ಏಜೆನ್ಸಿಗಳಲ್ಲಿ ಪ್ರತಿ ನಿತ್ಯ ಸುಮಾರು ಒಂದು ಲಕ್ಷ ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡುತ್ತಾರೆ. ಮುಷ್ಕರದ ಪರಿಣಾಮ ಅನಿಲ ಪೂರೈಕೆಯಾಗದೆ ಗ್ರಾಹಕರು, ವಿತರಕರೊಡನೆ ಜಗಳವಾಡುವಂತಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಸೇರಿದಂತೆ ದಕ್ಷಿಣದ ಇತರೆ ರಾಜ್ಯಗಳಲ್ಲೂ ಮುಷ್ಕರ ಆರಂಭವಾಗಿದ್ದು, ಸಮಸ್ಯೆ ತೀವ್ರಗೊಳ್ಳುವ ಮೊದಲು ಟ್ಯಾಂಕರ್ ಮಾಲೀಕರ ಬೇಡಿಕೆ ಈಡೇರಿಸುವಂತೆ ತೈಲ ಕಂಪೆನಿಗಳ ಮೇಲೆ ಸರ್ಕಾರ ಒತ್ತಡ ಹೇರಬೇಕು ಎಂದು ಸತ್ಯನ್ ಒತ್ತಾಯಿಸಿದರು.

ನಾಗರಿಕರ ಆತಂಕ: `ಈಗಾಗಲೇ ಬುಕ್ಕಿಂಗ್ ಮಾಡಿ ಹಲವು ದಿನಗಳಾದರೂ ಅನಿಲ ಪೂರೈಕೆಯಾಗುತ್ತಿಲ್ಲ. ಕೆಲವು ತಿಂಗಳುಗಳಿಂದ ಇದೇ ಸಮಸ್ಯೆ ಎದುರಾಗಿದ್ದು, ಹೋಟೆಲ್ನಲ್ಲಿ ಊಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚುವರಿ ಸಿಲಿಂಡರ್ ಸೌಲಭ್ಯವನ್ನು ನಾವು ಹೊಂದಿಲ್ಲ. ಈಗ ಮತ್ತೆ ಮುಷ್ಕರ ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ~ ಎಂದು ಎಚ್ಎಸ್ಆರ್ ಲೇಔಟ್ ನಿವಾಸಿ ಶ್ರೀಧರ್ ಅಳಲು ತೋಡಿಕೊಂಡರು.

`ಮೊಬೈಲ್ ಮೂಲಕ ತಿಂಗಳ ಹಿಂದೆಯೇ ಸಿಲಿಂಡರ್ ಬುಕ್ಕಿಂಗ್ ಮಾಡಿದ್ದೆ. ವಿತರಣೆ ಮಾಡುವುದಾಗಿ ಖಚಿತಪಡಿಸಿ ಏಜೆನ್ಸಿಯಿಂದ ಸಂದೇಶ ಕೂಡ ಬಂದಿತ್ತು. ಆದರೆ, ತಿಂಗಳ ಅಂತ್ಯದವರೆಗೂ ಕಾದರೂ ಸಿಲಿಂಡರ್ ಪೂರೈಕೆಯಾಗಿಲ್ಲ. ಗ್ರಾಹಕರ ಸಮಸ್ಯೆಗಳನ್ನು ಕೇಳುವ ಸೌಜನ್ಯವೂ ವಿತರಕರಿಗಿಲ್ಲ~ ಎಂದು ತಿಪ್ಪಸಂದ್ರ ನಿವಾಸಿ ಪದ್ಮಾ ಆಕ್ರೋಶ ವ್ಯಕ್ತಪಡಿಸಿದರು.

`ವಿತರಕರು ದಾಸ್ತಾನಿದ್ದರೂ ಗ್ರಾಹಕರಿಗೆ ಪೂರೈಕೆ ಮಾಡದೆ ಸಿಲಿಂಡರ್ಗಳನ್ನು ಹೋಟೆಲ್ಗಳಿಗೆ ಹಾಗೂ ಆಟೊ ಚಾಲಕರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ~ ಎಂದು ರಾಜಾಜಿನಗರ ನಿವಾಸಿ ಆರತಿ ದೂರಿದರು.

ವಿತರಕರ ವಿಷಾದ: `ಹಲವು ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಿದ್ದಾರೆ. ಆದರೆ ದಾಸ್ತಾನಿಲ್ಲ. ಮುಷ್ಕರ ಆರಂಭವಾಗಿರುವ ಹಿನ್ನೆಲೆಯಲ್ಲಿ ಪೂರೈಕೆ ಇನ್ನೂ ವಿಳಂಬವಾಗಲಿದೆ. ಆದರೆ, ಗ್ರಾಹಕರು ವಿನಾಕಾರಣ ನಮ್ಮನ್ನು ದೂರುತ್ತಿದ್ದಾರೆ~ ಎಂದು ರಾಜಾಜಿನಗರದ ಏಜೆನ್ಸಿಯೊಂದರ ವಿತರಕ ನವೀನ್ ಅವರು ವಿಷಾದ ವ್ಯಕ್ತಪಡಿಸಿದರು.

`ಸಾಮಾನ್ಯವಾಗಿ, ಬುಕ್ ಮಾಡಿದ 17 ದಿನದೊಳಗೆ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದೇವೆ. ಮುಷ್ಕರ ಮೂರ್ನಾಲ್ಕು ದಿನದವರೆಗೆ ಮುಂದುವರಿದರೆ ಅನಿಲ ಪೂರೈಕೆಗೆ ಒಂದೂವರೆ ತಿಂಗಳು ಬೇಕಾಗುತ್ತದೆ~ ಎಂದು ಜೆ.ಪಿ ನಗರದ ಎಲ್ಪಿಜಿ ವಿತರಕರೊಬ್ಬರು ತಿಳಿಸಿದರು.

ಧರಣಿ ಕೈ ಬಿಡುವುದಿಲ್ಲ: `ಬಾಡಿಗೆ ದರ ಪರಿಷ್ಕರಣೆಗೆ ಒತ್ತಾಯಿಸಿ ಜನವರಿಯಲ್ಲಿ ಧರಣಿ ನಡೆಸಿದಾಗ, ಬೇಡಿಕೆಯನ್ನು ಫೆ.15ರೊಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಮುಷ್ಕರ ಕೈಬಿಡಲಾಗಿತ್ತು. ಆದರೆ ತೈಲ ಕಂಪೆನಿಗಳು ಸಮಸ್ಯೆಗೆ ಸ್ಪಂದಿಸದ ಕಾರಣ ಮತ್ತೆ ಧರಣಿ ನಡೆಸುತ್ತಿದ್ದೇವೆ. ಪರಿಹಾರ ಸಿಗುವವರೆಗೂ ಧರಣಿ ಕೈಬಿಡುವುದಿಲ್ಲ~ ಎಂದು ದಕ್ಷಿಣ ವಲಯ ಮೋಟಾರು ವಾಹನಗಳ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ಹೇಳಿದರು.

ಇಂಧನ ಬೆಲೆ ಮತ್ತು ಟೋಲ್ ದರ ಹೆಚ್ಚಳವಾಗಿರುವುದರಿಂದ ಹಳೆಯ ಬಾಡಿಗೆ ದರದಲ್ಲಿ ಅನಿಲ ಸಾಗಣೆ ಮಾಡಲು ಖಂಡಿತ ಸಾಧ್ಯವಿಲ್ಲ. ಪ್ರತಿ ಕಿ.ಮೀ ಬಾಡಿಗೆ ದರದಲ್ಲಿ ಮೂರು ರೂಪಾಯಿ ಹೆಚ್ಚಳ ಮಾಡಿದರೆ ಟ್ಯಾಂಕರ್ ಮಾಲೀಕರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ. ಮುಷ್ಕರದಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ನಿಜ. ಆದರೆ, ಅದಕ್ಕೆ ನಾವು ಏನೂ ಮಾಡುವ ಪರಿಸ್ಥಿತಿಯಲ್ಲಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.