ಬೆಂಗಳೂರು: `ಉಚಿತ ಭಾಷಾ ಪುನಃ ಸ್ಥಾಪನಾ ಶಿಬಿರವನ್ನು ಏ.29 ರಿಂದ ಮೇ 5 ರವರೆಗೆ ಹಾಗೂ 7 ರಿಂದ 13 ವರ್ಷದ ಮೂಕ ಮಕ್ಕಳಿಗೆ ಮೇ 1 ರಿಂದ 2 ವಾರಗಳ ಕಾಲ ಉಚಿತ ಬೇಸಿಗೆ ಶಿಬಿರವನ್ನು ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದೆ~ ಎಂದು ಸಂವಾದ ವಾಕ್ ಮತ್ತು ಶ್ರವಣ ಕೇಂದ್ರ ಸಂಸ್ಥೆಯ ನಿರ್ದೇಶಕಿ ರಾಧಿಕಾ ಪೂವಯ್ಯ ಹೇಳಿದರು.

`ಹೆಬ್ಬಾಳದಲ್ಲಿರುವ ಸಂಸ್ಥೆಯು ಮೂಕ ಹಾಗೂ ಕಿವುಡು ಮಕ್ಕಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಲ್ಲಿ ಶ್ರಮವಹಿಸುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣ ಸಲಕರಣೆಗಳು, ಚಿಕಿತ್ಸೆ ನೀಡಲು ಬೇಕಾಗಿರುವ ಅನುಭವಿ ವೈದ್ಯರು ಸಾಕಷ್ಟು ಸಂಖ್ಯೆಯಲ್ಲಿ ಇದ್ದು ಸೂಕ್ತಮಾರ್ಗದರ್ಶನವನ್ನು ನಡೆಸಲಾಗುತ್ತಿದೆ~ ಎಂದು ವಿವರಿಸಿದರು.

`ಸಂಸ್ಥೆಯ ವತಿಯಿಂದ ಸ್ಪೀಚ್ ಲಾಂಗ್ವೇಜ್ ಪ್ಯಾಥೋಲಾಜಿ ಅಂಡ್ ಆಡಿಯೋಲಾಜಿ ಎಂಬ 4 ವರ್ಷದ ಕೋರ್ಸ್ನ್ನು ಆರಂಭಿಸಲಾಗುವುದು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು~ ಎಂದರು.

ಸಂಸ್ಥೆಯ ಅಂತರ್ಜಾಲ ತಾಣವನ್ನು ಉದ್ಘಾಟಿಸಲಾಯಿತು. ಹೆಚ್ಚಿನ ಮಾಹಿತಿಗಾಗಿ www.samvaadinstitute.org ವೆಬ್ ತಾಣಕ್ಕೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.