ಬುಧವಾರ, ಮೇ 12, 2021
20 °C
ಉದ್ಯಾವರ ಬೋಳಾರ್‌ಗುಡ್ಡೆ ಮೀನು ಮಾರುಕಟ್ಟೆ ಉದ್ಘಾಟನೆ

`ಮೂರು ಮಾರುಕಟ್ಟೆ ಉಚಿತ ನಿರ್ವಹಣೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರ್ವ: ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯಾವರ ಪೇಟೆಯ ಮುಖ್ಯ ಮೀನು ಮಾರುಕಟ್ಟೆ, ಬೋಳಾರ ಗುಡ್ಡೆ ಹಾಗೂ ಸಂಪಿಗೆ ನಗರ ಮೀನು ಮಾರುಕಟ್ಟೆಗಳಲ್ಲಿ ಮಹಿಳೆಯರಿಗೆ ಯಾವುದೇ ಸುಂಕವಿಲ್ಲದೆ ಉಚಿತವಾಗಿ ನಿರ್ವಹಿಸಲಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಿರಣ್ ಕುಮಾರ್ ಉದ್ಯಾವರ ತಿಳಿಸಿದರು.ಉದ್ಯಾವರ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ನಡೆದ ಉದ್ಯಾವರ ಬೋಳಾರುಗುಡ್ಡೆ ಸಮೀಪ ಗ್ರಾಮ ಪಂಚಾಯಿತಿ ನಿಧಿಯಿಂದ ಸು ಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಮೀನು ಮಾರು ಕಟ್ಟೆಯ ಉದ್ಘಾಟನಾ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು.ಸಾರ್ವಜನಿಕರ ಹಿತದೃಷ್ಟಿಯಿಂದ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಮೀನು ಮಾರು ಕಟ್ಟೆಗಳನ್ನು ಪಂಚಾಯಿತಿ ಸ್ವತಃ ಟೆಂಡರ್ ಶುಲ್ಕ ಪಾವತಿಸಿ ಗುತ್ತಿಗೆ ಪಡೆದಿದ್ದು, ಮೀನುಗಾರ ಮಹಿಳೆಯರ ಸುಂಕ ಮುಕ್ತಗೊಳಿಸಲಾಗಿದೆ ಎಂದು ಈ ಸಂದರ್ಭ ತಿಳಿಸಿದರು. ಕಿರಣ್‌ಕುಮಾರ್ ಅವರ ಕಾಳಜಿಗೆ ಉದ್ಯಾವರ ಮೀನು ಮಾರಾಟಗಾರ ಮಹಿಳಾ ಸಂಘವು ಅಭಿನಂದನೆ ಸಲ್ಲಿಸಿದೆ.ಉದ್ಯಾವರ ಗ್ರಾಮ ಪಂಚಾಯಿಯಿ ಅಧ್ಯಕ್ಷ ವಿಜಯಕುಮಾರ್  ನೂತನ ಮೀನು ಮಾರುಕಟ್ಟೆಯನ್ನು ಉದ್ಘಾಟಿ ಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಗಣೇಶ್ ಕುಮಾರ್, ಮಾಜಿ ಸದಸ್ಯ ಕಿರಣ್ ಕುಮಾರ್ ಉದ್ಯಾವರ, ಗ್ರಾಮ ಪಂಚಾಯತ್ ಸದಸ್ಯರಾದ ಭಾಸ್ಕರ ಕೋಟ್ಯಾನ್, ಪೆಟ್ರಿಕ್, ಸಂತೋಷ್, ಮೇರಿ ಡಿಸೋಜಾ, ರಜನಿ ಆರ್.ಅಂಚನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮನ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.