ಕಲಬುರ್ಗಿ: ಕಲಬುರ್ಗಿ, ಸೊಲ್ಲಾಪುರ ಸೇರಿ ವಿವಿಧ ಜಿಲ್ಲಾ ಕೇಂದ್ರದ ರೈಲು ನಿಲ್ದಾಣದೊಳಗಿನ ಬೈಕ್ ನಿಲುಗಡೆ ತಾಣದಿಂದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಜೇವರ್ಗಿ ತಾಲ್ಲೂಕು ಬಿರಾಳ (ಕೆ) ಗ್ರಾಮದ ಸಚಿನ್ ದೇವಿಂದ್ರಪ್ಪಗೌಡ ಮಾಲಿಬಿರಾದಾರ, ಭೀಮಣ್ಣ ವೆಂಕಣ್ಣ ನಾಯಿಕೋಡಿ ಹಾಗೂ ಸತೀಶ ಗೋಪಾಲ ರಾಠೋಡ ಬಂಧಿತ ಆರೋಪಿಗಳು.

ಕಲಬುರ್ಗಿ ಹೊರ ವಲಯ ತಾಜಸುಲ್ತಾನಪುರ ಮಾರ್ಗದಲ್ಲಿ ಬೆಳಗಿನ ಜಾವ ನೋಂದಣಿ ಸಂಖ್ಯೆಗಳಿ ಲ್ಲದ ಎರಡು ಬೈಕ್ಗಳ ಮೇಲೆ ಸಂಚರಿ ಸುತ್ತಿದ್ದವರ ಮೇಲೆ ಅನುಮಾನಗೊಂಡು ಪೊಲೀಸರು ವಿಚಾರಿಸಿದಾಗ ಕಳ್ಳರು ಸಿಕ್ಕಿಬಿದ್ದಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2015ರ ಮೇ ತಿಂಗಳಿಂದ ಇಲ್ಲಿಯವರೆಗೂ ರಾಯಚೂರಿನಲ್ಲಿ 6, ಕಲಬುರ್ಗಿಯಲ್ಲಿ 7, ಯಾದಗಿರಿಯಲ್ಲಿ 8, ಸೊಲ್ಲಾಪುರದಲ್ಲಿ 2 ಹಾಗೂ ವಿಜಯಪು ರದಲ್ಲಿ 4 ಸೇರಿ ಒಟ್ಟು 27 ಬೈಕ್ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿ ಗಳು ಒಪ್ಪಿಕೊಂಡಿದ್ದಾರೆ ಎಂದರು.

ಸಾಮಾನ್ಯವಾಗಿ, ರೈಲ್ವೆ ನಿಲ್ದಾಣ ಪಕ್ಕದ ಬೈಕ್ ನಿಲುಗಡೆ ತಾಣದಲ್ಲಿ ಜನರು ನಿಲ್ಲಿಸಿ ಹೋಗುವ ಬೈಕ್ಗಳನ್ನು ಈ ಆರೋಪಿಗಳು ಕಳ್ಳತನ ಮಾಡು ತ್ತಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ ಎಂದರು.

ಗ್ರಾಮಾಂತರ ಡಿಎಸ್ಪಿ ವಿಜಯ ಅಂಚಿ, ಗ್ರಾಮೀಣ ಠಾಣೆ ಪಿಐ ಎ. ವಾಜೀದ್ ಪಟೇಲ್, ಪಿಎಸ್ಐ ಚಂದ್ರ ಶೇಖರ ತಿಗಡಿ, ಸಿಬ್ಬಂದಿ ಜ್ವಾಲೇಂದ್ರ, ಸಿದ್ರಾಮಪ್ಪ, ಇಬ್ರಾಹಿಂ, ಹುಸೇನಭಾಷಾ, ಅಂಬಾಜಿ, ಕೇಸುರಾಯ, ವಿಶ್ವನಾಥ ಈರಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮನೆ ಕಳ್ಳನ ಬಂಧನ: ಕಲಬುರ್ಗಿ ಹಾಗೂ ಜೇವರ್ಗಿ ತಾಲ್ಲೂಕಿನ ವಿವಿಧೆಡೆ ಮನೆ ಕಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ಕಳ್ಳನೊಬ್ಬನನ್ನು ಮಂಗಳವಾರ ಬೆಳಗಿನ ಜಾವ 4ಕ್ಕೆ ಜೇವರ್ಗಿ ಠಾಣೆಯ ಪೊಲೀ ಸರು ಕಾರ್ಯಾಚರಣೆ ನಡೆಸಿ ಜೇವರ್ಗಿಯ ಸಿಂದಗಿ ಕ್ರಾಸ್ನಲ್ಲಿ ಬಂಧಿಸಿದ್ದಾರೆ.

ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ನಿವಾಸಿ ಹಾಲಿ ಜೇವರ್ಗಿಯ ಖಾಜಾ ಕಾಲೊನಿಯ ಕರ್ತಾರಸಿಂಗ್ ಜಂಗುಸಿಂಗ್ ಸರದಾರಜಿ ಬಂಧಿತ ಆರೋಪಿ. ಆರೋಪಿಯಿಂದ 340 ಗ್ರಾಂ ತೂಕದ ಅಂದಾಜು ₹10,20,000 ಮೌಲ್ಯದ ಚಿನ್ನಾಭರಣ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಕಲಬುರ್ಗಿಯ ರಾಘವೇಂದ್ರ ಠಾಣೆ ಯಲ್ಲಿ 1, ಮಹಾಗಾಂವ ಠಾಣೆಯಲ್ಲಿ 1, ಆಶೋಕ ನಗರ ಠಾಣೆಯಲ್ಲಿ 7, ಎಂ.ಬಿ.ನಗರ ಠಾಣೆಯಲ್ಲಿ 4, ವಿಶ್ವವಿದ್ಯಾಲಯ ಠಾಣೆಯಲ್ಲಿ 3 ಹಾಗೂ ಜೇವರ್ಗಿ ಠಾಣೆಯಲ್ಲಿ 3 ಸೇರಿ 19 ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಬಂಧಿತ ಆರೋಪಿಯು ಭಾಗಿಯಾದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಜಯಪ್ರಕಾಶ್ ಅವರು ತಿಳಿಸಿದರು.

ಸಿಪಿಐ ಎಚ್.ಎಂ.ಇಂಗಳೇಶ್ವರ, ಪಿಎಸ್ಐ ಶ್ರೀಮಂತ ಇಲ್ಲಾಳ್ ಹಾಗೂ ಜೇವರ್ಗಿ ಠಾಣೆಯ ಸಿಬ್ಬಂದಿ ಮಲ್ಲಿಕಾರ್ಜುನ, ಪರಮೇಶ್ವರ ಹಾಗೂ ಶಿವರಾಜಕುಮಾರ ಅವರು ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.