ಮೃದು ಧೋರಣೆ ಇಲ್ಲ: ಎಚ್‌ಡಿಕೆ

7

ಮೃದು ಧೋರಣೆ ಇಲ್ಲ: ಎಚ್‌ಡಿಕೆ

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಥವಾ ಬಿಜೆಪಿ ಸರ್ಕಾರ ಕುರಿತು ಮೃದು ಧೋರಣೆ ತಳೆದಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಗುರುವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ಯಡಿಯೂರಪ್ಪ ಕಷ್ಟದಲ್ಲಿರುವ ಕಾರಣ ಅವರ ಬಗ್ಗೆ ಅನುಕಂಪ ತೋರಿಸಿದ್ದೇನೆ. ವ್ಯಕ್ತಿಯೊಬ್ಬ ಕಷ್ಟದಲ್ಲಿ ಸಿಲುಕಿರುವಾಗ ಕಾಂಗ್ರೆಸ್ಸಿಗರಂತೆ ಪಟಾಕಿ ಹಚ್ಚಿ ಕುಣಿಯುವುದು ನಮ್ಮಿಂದ ಸಾಧ್ಯವಿಲ್ಲ.

 

ಅದು ಜೆಡಿಎಸ್ ಸಂಸ್ಕೃತಿಯೂ ಅಲ್ಲ~ ಎಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಅದರ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದ್ದು ಜೆಡಿಎಸ್; ಕಾಂಗ್ರೆಸ್ ಅಲ್ಲ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತಪ್ಪೆಸಗಿದರೆ ಅವರನ್ನೂ ಟೀಕಿಸಲು ಹಿಂಜರಿಯುವುದಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry