ಮೆಟ್ರೊ: ತಿರುವುಗಳಲ್ಲಿ 45ಕಿ.ಮೀ ವೇಗ ಮಿತಿ

ಭಾನುವಾರ, ಮೇ 19, 2019
34 °C

ಮೆಟ್ರೊ: ತಿರುವುಗಳಲ್ಲಿ 45ಕಿ.ಮೀ ವೇಗ ಮಿತಿ

Published:
Updated:

ಬೆಂಗಳೂರು: `ನಮ್ಮ ಮೆಟ್ರೊ~ದ ತಿರುವಿನ ಹಳಿ ಮಾರ್ಗ ಮೊನಚಾಗಿರುವುದರಿಂದ ರೈಲಿನ ಗರಿಷ್ಠ ವೇಗ ಮಿತಿಯನ್ನು ಶೇ 10ರಷ್ಟು ನಿಯಂತ್ರಿಸುವಂತೆ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತ ಡಿ.ಕೆ. ಸಿಂಗ್ ಸಲಹೆ ಮಾಡಿದ್ದಾರೆ.ತಿರುವುಗಳಲ್ಲಿ ಹೇಗೆ ರೈಲುಗಳನ್ನು ನಿಯಂತ್ರಿಸಲಾಗುತ್ತದೆ ಎಂಬುದರ ಬಗ್ಗೆ ಬಿಎಂಆರ್‌ಸಿಎಲ್ ಬಳಿ ಮಾಹಿತಿಯೇ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನೇರವಾದ ಮಾರ್ಗಗಳಲ್ಲಿ ಮೆಟ್ರೊ ರೈಲು ಗಂಟೆಗೆ ಗರಿಷ್ಠ 65.7 ಕಿ.ಮೀ ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಈ ಮುನ್ನ ಲಖನೌನ ಸಂಶೋಧನಾ ವಿನ್ಯಾಸ ಹಾಗೂ ಗುಣಮಟ್ಟ ಸಂಸ್ಥೆಯು ನೇರ ಮಾರ್ಗಗಳಲ್ಲಿ ಗಂಟೆಗೆ ಗರಿಷ್ಠ 75 ಕಿ.ಮೀ. ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.ಆದರೆ, ಈ ವೇಗ ಮಿತಿ ನಿಯಂತ್ರಣ ಆರು ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿದೆ. ಆನಂತರ ಪುನರ್ ಪರಿಶೀಲನೆ ನಡೆಸಿ ವೇಗ ಮಿತಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry