ಸೋಮವಾರ, ಜುಲೈ 26, 2021
24 °C

ಮೆಟ್ರೊ ವೆಬ್‌ತಾಣ ತೆರೆದಾಕ್ಷಣ ಕಾಣುವುದು ಕನ್ನಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈಗ ‘ನಮ್ಮ ಮೆಟ್ರೊ’ದ ವೆಬ್‌ತಾಣ (http://www.bmrc.co.in) ತೆರೆದಾಕ್ಷಣ ಮೊದಲಿಗೆ ಕನ್ನಡದಲ್ಲಿಯೇ  ವಿವರಗಳು ಕಾಣಿಸಿಕೊಳ್ಳುತ್ತವೆ.ಈ ಮೊದಲು ವೆಬ್‌ತಾಣ ತೆರೆದಾಗ ಇಂಗ್ಲಿಷ್‌ನಲ್ಲಿ ವಿವರಗಳು ಕಾಣುತ್ತಿದ್ದವು. ನಂತರ ಕನ್ನಡ ಭಾಷೆಯನ್ನು ಆಯ್ಕೆಮಾಡಿಕೊಂಡು ಕನ್ನಡ ಆವೃತ್ತಿಯನ್ನು ನೋಡಬೇಕಾಗಿತ್ತು.ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ಕೆಲ ದಿನಗಳ ಹಿಂದೆ   ‘ಬೆಂಗಳೂರು ಮೆಟ್ರೊ ರೈಲು ನಿಗಮ’ದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನುಮಂತಯ್ಯ ಅವರು  ಕನ್ನಡದ ವೆಬ್‌ ಪುಟಗಳೇ ಮೊದಲು ಕಾಣಿಸಿಕೊಳ್ಳುವಂತೆ (ಡಿಫಾಲ್ಟ್‌) ವ್ಯವಸ್ಥೆ ಮಾಡುವಂತೆ ನಿಗಮದ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು.ಈ ಸೂಚನೆ ಮೇರೆಗೆ ನಿಗಮವು ಕನ್ನಡಕ್ಕೆ ಪ್ರಾಶಸ್ತ್ಯ ನೀಡಿದೆ. ಇಂಗ್ಲಿಷ್‌ ಆವೃತ್ತಿಯೂ ಇರಲಿದೆ. ವೆಬ್‌ತಾಣ ತೆರೆದ ಮೇಲೆ ಇಂಗ್ಲಿಷ್‌ ಭಾಷೆ ಆಯ್ಕೆ ಮಾಡಿಕೊಂಡರೆ ಆಂಗ್ಲ ಆವೃತ್ತಿಯನ್ನು ವೀಕ್ಷಿಸಬಹುದು. ಬಿಬಿಎಂಪಿ ವೆಬ್‌ತಾಣದಲ್ಲೂ ಮೊದಲಿಗೆ ಕನ್ನಡ ಆವೃತ್ತಿಯೇ ತೆರೆದುಕೊ ಳ್ಳಲಿದೆ. ಆದರೆ ಬಿಡಿಎ, ಜಲಮಂಡಳಿ, ಬಿಎಂಟಿಸಿ, ಬೆಸ್ಕಾಂ ಸಂಸ್ಥೆಗಳ ವೆಬ್‌ತಾಣಗಳನ್ನು ತೆರೆದಾಗ ಮೊದಲಿಗೆ ಆಂಗ್ಲ ಆವೃತ್ತಿಯೇ ಕಾಣಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.