ಬೆಂಗಳೂರು: ಕೋಲ್ಕತ್ತದ ಮೆಹರ್ ಅತ್ವಾಲ್ ಇಲ್ಲಿ ಕೊನೆಗೊಂಡ ಉಷಾ ಸದರ್ನ್ ಇಂಡಿಯಾ ಮಹಿಳೆಯರ ಅಮೆಚೂರ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ಗುರುವಾರ ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಮೆಹರ್ 75 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಒಟ್ಟಾರೆ 218 ಸ್ಟ್ರೋಕ್ಗಳೊಂದಿಗೆ ಅವರು ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಮೆಹರ್ಗೆ ಪ್ರಬಲ ಪೈಪೋಟಿ ನೀಡಿದ ವಾಣಿ ಕಪೂರ್ (221) ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕೊನೆಯ ಸುತ್ತಿನಲ್ಲಿ ವಾಣಿ (73) ನಿಖರ ಪ್ರದರ್ಶನ ನೀಡಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು.

ತ್ವೇಸಾ ಮಲಿಕ್ (227) ಮತ್ತು ಗುರ್ಬಾನಿ ಸಿಂಗ್ (232) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ಬೆಂಗಳೂರಿನ ಅದಿತಿ ಅಶೋಕ್ (233) ಐದನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಅನಿಷಾ ಪಡುಕೋಣೆ (238) ಹಾಗೂ ಮಿಲೀ ಸರೋಹ (240) ಕ್ರಮವಾರಿ ಆರು ಹಾಗೂ ಏಳನೇ ಸ್ಥಾನ ಗಿಟ್ಟಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.