ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ನಾವು ವೈದ್ಯರು ಊಟದ ಹೊತ್ತಿನಲ್ಲೋ, ಅಪರೂಪಕ್ಕೆ ಬಿಡುವು ಸಿಕ್ಕಿದಾಗಲೋ ರೋಗಿಗಳಿಗೆ ಸಂಬಂಧಿಸಿದಂಥ ಹಾಸ್ಯ ಪ್ರಸಂಗಗಳನ್ನು ವಿನಿಮಯ ಮಾಡಿಕೊಳ್ಳುವುದುಂಟು. ಆಗೆಲ್ಲ ನಗೆಯ ಬಾಂಬುಗಳೇ ಸಿಡಿಯುತ್ತವೆ. ಅವುಗಳಲ್ಲಿ ಕೆಲವು ಇಗೋ ಇಲ್ಲಿವೆ:

ನನ್ನ ಚರ್ಮರೋಗ ತಜ್ಞೆ ಗೆಳತಿಯ ಬಳಿ ಬಂದ ರೋಗಿಗೆ ಕಜ್ಜಿ (ಖ್ಚಚಿಜಿಛಿ) ಆಗಿತ್ತು. ಅವಳು ಪರೀಕ್ಷಿಸಿ ಔಷಧ ಬರೆಯುವಾಗ ಆತ ತನಗೆ ಏನಾಗಿದೆ ಎಂದು ಕೇಳಿದ. ಕಜ್ಜಿ ಎಂದರೆ ಬೇಸರವಾಗಬಹುದೆಂದು ಆಕೆ `ಖ್ಚಚಿಜಿಛಿ' ಎಂದು ಹೇಳಿ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದಳು. ಆದರೆ ಆತ ಮತ್ತೆ ಮತ್ತೆ ಅದೇನು ಕಾಯಿಲೆ ಎಂದು ಪೀಡಿಸಿದಾಗ ಕಜ್ಜಿ ಎಂದು ಹೇಳಲೇಬೇಕಾಯಿತು.

ಕೂಡಲೇ ಉರಿದು ಬಿದ್ದ ಆತ `ನಾನು ಮೇಲ್ಜಾತಿಯವ. ದಿನಾ ಸ್ನಾನ ಮಾಡುತ್ತೇನೆ. ನಂಗೆ ಎಲ್ಲಿಂದ ಈ ಕೆಟ್ಟ ರೋಗ ಬರಲು ಸಾಧ್ಯ? ನಿಮ್ಮ ಚಿಕಿತ್ಸೆಯೇ ಸರಿಯಿಲ್ಲ' ಎಂದು ಅವಳು ಕೊಟ್ಟ ಚೀಟಿಯನ್ನೇ ಬಿಸಾಡಿ ಹೊರನಡೆದ!

ನನ್ನ ಫಿಸೀಷಿಯನ್ ಗೆಳತಿಯ ರೋಗಿಯೊಬ್ಬರಿಗೆ ಎಕ್ಸ್ರೇ ಅವಶ್ಯಕತೆ ಇತ್ತು. ಅವಳು ಹಳ್ಳಿಯ ಆ ರೋಗಿಗೆ ಅದನ್ನು ಚೀಟಿಯಲ್ಲಿ ಬರೆದುಕೊಟ್ಟು `ಫೋಟೊ ಹಿಡಿಸಿಕೊಂಡು ಬನ್ನಿ' ಎಂದು ಹೇಳಿದಳು. ಸುಮಾರು ಸಮಯದ ಬಳಿಕ ಆತ ಒಂದು ದೊಡ್ಡ ಕವರ್ ಹಿಡಿದು ಬಂದ. ಅದರಲ್ಲಿ ಅವನು ಜೋರಾಗಿ ನಗುತ್ತಿದ್ದ ಒಂದು ದೊಡ್ಡ ಫೋಟೊ! ಎಕ್ಸ್ರೇಗೆ ಹಳ್ಳಿಜನ ಸಾಮಾನ್ಯವಾಗಿ ಫೋಟೊ ಎಂದು ಕರೆಯುವುದರಿಂದ ಅವನಿಗೆ ಸರಿಯಾಗಿ ಅರ್ಥ ಆಗಲಿ ಎಂದು ಅವಳು ಹೇಳಿದ್ದು ಈ ಅವಾಂತರಕ್ಕೆ ಎಡೆ ಮಾಡಿಕೊಟ್ಟಿತ್ತು.

ನನ್ನ ಸ್ತ್ರೀರೋಗ ತಜ್ಞೆ ಗೆಳತಿಯದು ಇನ್ನೊಂದು ಕಥೆ. ಅಬಾರ್ಷನ್ಗೆ ಎಂದು ಬರುವ ರೋಗಿಗಳಿಗೆ ಲೆಕ್ಕವೇ ಇಲ್ಲ. ಒಮ್ಮೆ ಒಬ್ಬಾಕೆ ಹೊಟ್ಟೆ ತೊಳೆಸಬೇಕು ಎಂದು ಬಂದಳು. ಇವಳು ರೇಗಿ `ಹೂಂ ತೊಳೀತೇನೆ. ಸ್ವಲ್ಪ ಸಬೀನಾ ತಗೊಂಡು ಬಾ' ಎಂದರೆ ಅವಳು ಅದನ್ನೇ ತಂದು ಬಿಡೋದೇ! `ತಂದಿದೀನಿ ಡಾಕ್ಟ್ರೇ. ಈಗ ತೊಳೀತೀರಾ' ಎಂದ ಆ ಮುಗ್ಧ ಹೆಂಗಸಿನ ಮೇಲೆ ಕೋಪಿಸಿಕೊಳ್ಳುವುದಾದರೂ ಹೇಗೆ ಎಂದಳು ಗೆಳತಿ.

ಯಂತ್ರಕ್ಕೆ ಸಿಲುಕಿ ಕೈ ಬೆರಳು ತುಂಡಾದ ರೋಗಿಯೊಬ್ಬ ನಮ್ಮ ವಿಭಾಗಕ್ಕೆ ಬಂದ. ಅವನ ತುಂಡಾದ ಬೆರಳನ್ನು ಫಾರ್ಮಲಿನ್ನ ಒಂದು ಶೀಶೆಯಲ್ಲಿ ಹಾಕಿ ತಂದಿದ್ದರು. ಅದನ್ನು ಜೋಡಿಸಿ ಎಂದು ಜೊತೆಗೆ ಬಂದವರು ಗೋಗರೆದರು. ಸ್ಪೆಸಿಮನ್ಗಳನ್ನು ಹಾಳಾಗದಂತೆ ಕಾಪಾಡಲು ಫಾರ್ಮಲಿನ್ ಬಳಸಬಹುದಷ್ಟೇ ವಿನಃ ಶರೀರಕ್ಕೆ ಜೋಡಿಸಬಹುದಾದ ಅಂಗವನ್ನು ಕೆಲ ಕಾಲ ಜೀವಂತವಾಗಿಡಲು ಅಲ್ಲ. ಈ ಕುರಿತು ತೃಣಮಾತ್ರವೂ ಜ್ಞಾನವಿಲ್ಲದವರ ಕೆಲಸವದು!

`ಫಾರ್ಮಲಿನ್ನಲ್ಲಿ ಹಾಕಿದರೆ ಜೋಡಿಸಲು ಬರುವುದಿಲ್ಲಪ್ಪ. ಅದನ್ನು ಮ್ಯೂಸಿಯಂನಲ್ಲಿ ಇಡಬಹುದಷ್ಟೇ' ಎಂದು ಎಷ್ಟು ಹೇಳಿದರೂ ಆತ ಕೇಳಲೊಲ್ಲ. `ನರ್ಸಿಗ್ ಹೋಂ ಡಾಕ್ಟ್ರು ಹಾಕಿಕೊಟ್ಟದ್ದು. ಆಗುತ್ತದೆ ಅಂತಾ ಹೇಳಿದ್ದಾರೆ' ಅನ್ನೋ ಒಂದೇ ಮಾತು. `ನೋಡು ಈಗಲೇ ಎಷ್ಟು ಗಟ್ಟಿಯಾಗಿದೆ ಅಂತಾ' ಎಂದು ತೆಗೆದು ತೋರಿಸಿದ ಮೇಲೆ ನಂಬಿಕೆ ಬಂತು ಅನಿಸುತ್ತೆ.

`ನೀವು ಈಗ ಹೇಳಿದ್ದನ್ನ ಬರ್ಕೊಡಿ ಡಾಕ್ಟ್ರೇ. ಆ ನರ್ಸಿಂಗ್ ಹೋಂ ಡಾಕ್ಟ್ರಿಗೆ ಗತಿ ಕಾಣಿಸ್ತೀನಿ' ಎಂದ. ಇರೋ ವಿಷಯವನ್ನ ಬರೆದುಕೊಡಲೇ ಬೇಕಾಯಿತು. ಇನ್ನು ಆ ಡಾಕ್ಟ್ರಿಗೆ ಏನು ಕಾದಿದೆಯೋ ಎಂದು ವಿಭಾಗದವರೆಲ್ಲ ಮರುಕಪಟ್ಟೆವು!

ಪ್ರತಿ ಶನಿವಾರ ಭೂಮಿಕಾ ಓದಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.