ಬುಧವಾರ, ಮೇ 12, 2021
20 °C

ಮೇವು ಸಾಗಣೆ ಲಾರಿ ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ತಾಲ್ಲೂಕಿನ ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ ಸಮರ್ಪಕವಾಗಿ ಮೇವು ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಬಿ.ಜಿ. ಕೆರೆ ಗ್ರಾಮಸ್ಥರು ಸೋಮವಾರ ಗೋಶಾಲೆಗೆ ಮೇವು ಸಾಗಣೆ ಮಾಡುತ್ತಿದ್ದ ಲಾರಿ ತಡೆದು ಪ್ರತಿಭಟನೆ ನಡೆಸಿದರು.ಗೋಶಾಲೆಗೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗುವ ಹೊತ್ತಿಗೆ ಅಲ್ಲಿರುವ ಬೇರೆ ಊರಿನ ಗ್ರಾಮಸ್ಥರು ಮೇವು ಹಾಕಿಕೊಂಡಿರುತ್ತಾರೆ. ಇದರಿಂದ ಮೇವು ಸಿಗದೇ ಖಾಲಿ ಹೊಟ್ಟೆಯಲ್ಲಿ ಜಾನುವಾರುಗಳನ್ನು ವಾಪಾಸ್ ಕರೆದುಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿವಾರು ಮೇವು ವಿತರಣೆ ಮಾಡಬೇಕು ಎಂದು ಗ್ರಾಮದಲ್ಲಿ ನಡೆಯುತ್ತಿದ್ದ ತುರ್ತುಸಭೆಯಲ್ಲಿ ಭಾಗವಹಿದ್ದ ಗಾಮ ಪಂಚಾಯ್ತಿ ಸದಸ್ಯರಿಗೆ ಮನವಿ ಮಾಡಿದರು.ನಂತರ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಈಗಿರುವ ಗೋಶಾಲೆ ಕೊಂಡ್ಲಹಳ್ಳಿ, ಕೋನಸಾಗರ ಭಾಗಕ್ಕೆ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಡ್ಲಹಳ್ಳಿ- ಬಿ.ಜಿ. ಕೆರೆ ಮಧ್ಯಭಾಗದಲ್ಲಿ ಮತ್ತೊಂದು ಗೋಶಾಲೆ ಆರಂಭಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.