ಮೈಕ್ರೊಸಾಫ್ಟ್ನ ಹೊಸ ಕಾರ್ಯನಿರ್ವಹಣಾ ತಂತ್ರಾಂಶ `ವಿಂಡೋಸ್ -8~ರ ಮುನ್ನೋಟ ಆವೃತ್ತಿ ((preview version) ಕಳೆದ ವಾರ ಬಿಡುಗಡೆಗೊಂಡಿದೆ. ಇದನ್ನು `ಹೊಸ ತಲೆಮಾರಿನ ಕಿಟಕಿ~ ಎಂದೇ ಕಂಪೆನಿ ಬಣ್ಣಿಸಿದೆ.

ಸಾಂಪ್ರದಾಯಿಕ ಗಣಕಯಂತ್ರ ಬಳಕೆದಾರರು ಮತ್ತು ತೀವ್ರವಾಗಿ ಹೆಚ್ಚುತ್ತಿರುವ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮಾರುಕಟ್ಟೆಗೆ ತಕ್ಕಂತೆ ವಿಂಡೋಸ್-8 ವಿನ್ಯಾಸಗೊಳಿಸಲಾಗಿದೆ ಎನ್ನುತ್ತಾರೆ ಮೈಕ್ರೊಸಾಫ್ಟ್ನ ವಿಂಡೋಸ್ ವಿಭಾಗದ ಅಧ್ಯಕ್ಷ ಸ್ಟೀವನ್ ಸಿನೊಫಕ್ಸಿ. ಇತ್ತೀಚೆಗೆ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ಕಾಂಗ್ರೆಸ್ನಲ್ಲಿ ವಿಂಡೋಸ್-8 ಪರೀಕ್ಷಾರ್ಥ ಆವೃತ್ತಿ ಬಿಡುಗಡೆ ಮಾಡಲಾಯಿತು.

ತೀವ್ರವಾಗಿ ಹೆಚ್ಚುತ್ತಿರುವ ಗೂಗಲ್ನ `ಆಂಡ್ರಾಯ್ಡ~ ಕಾರ್ಯನಿರ್ವಹಣಾ ತಂತ್ರಾಂಶದ ಬಳಕೆ ಮೈಕ್ರೊಸಾಫ್ಟ್ನ ನಿದ್ರೆಗೆಡಿಸಿದೆ. ಸಾಂಪ್ರದಾಯಿಕ ಗಣಕಯಂತ್ರ, ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ನಲ್ಲಿ ಇಂಟರ್ನೆಟ್ ಬಳಸುವುದಕ್ಕಿಂತ ಹೆಚ್ಚಾಗಿ ಸ್ಮಾರ್ಟ್ಫೋನ್ ಮೂಲಕ ಅಂತರ್ಜಾಲ ಬಳಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ, ಭವಿಷ್ಯದ ಮೊಬೈಲ್ ಕಂಪ್ಯೂಟಿಂಗ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಮಾರುಕಟ್ಟೆ ಗುರಿಯಾಗಿಟ್ಟುಕೊಂಡು `ವಿಂಡೋಸ್ 8~ ಹೊರಬಂದಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

`ವಿಂಡೋಸ್ 8~ ಎರಡು ಮಾದರಿಗಳಲ್ಲಿ ಲಭ್ಯವಿದೆ. ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ಗಳಿಗೆ ಒಂದು ಮಾದರಿ ಇದ್ದರೆ, ಇನ್ನೊಂದನ್ನು `ಎಆರ್ಎಂ~ ಮೈಕ್ರೊಪ್ರೊಸೆಸರ್ ಇರುವ ಟ್ಯಾಬ್ಲೆಟ್, ಸ್ಮಾರ್ಟ್ಫೋನ್ ಮತ್ತು ಇತರೆ ಪೊರ್ಟೆಬಲ್ ಡಿವೈಸಸ್ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ಹೊಸ ಕಾರ್ಯನಿರ್ವಹಣಾ ತಂತ್ರಾಂಶದ ಅಧಿಕೃತ ಬಿಡುಗಡೆ ದಿನಾಂಕವನ್ನು ಕಂಪೆನಿ ಇನ್ನೂ ನಿಗದಿಪಡಿಸಿಲ್ಲ. ಆದರೆ, ಟ್ಯಾಬ್ಲೆಟ್ಗಳಲ್ಲಿ `ಮೈಕ್ರೊಸಾಫ್ಟ್ ಆಫೀಸ್~ ಉಚಿತವಾಗಿ ನೀಡುವ ಕುರಿತು ಕಂಪೆನಿ ಚಿಂತಿಸುತ್ತಿದೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.

ಸದ್ಯ ಗ್ಯಾಡ್ಜೆಟ್ ಲೋಕದ ಪ್ರತಿಯೊಂದು ನೂತನ ಆವಿಷ್ಕಾರಗಳು ನಡೆಯುತ್ತಿರುವುದು ಸ್ಮಾರ್ಟ್ಫೋನ್ಗಳಲ್ಲಿ. ಅತ್ಯಾಧುನಿಕ ವಿನ್ಯಾಸ ಮತ್ತು ಅಪ್ಲಿಕೇಷನ್ಸ್ಗಳಿಂದಾಗಿ ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಮಾರುಕಟ್ಟೆಯನ್ನು ಇವು ಹಿಂದಿಕ್ಕಿವೆ. `ಪರ್ಸನಲ್ ಕಂಪ್ಯೂಟರ್ಗೆ ಸಂಬಂಧಿಸಿದ ಎಲ್ಲ ಪ್ರಮುಖ ಆವಿಷ್ಕಾರಗಳು ಮೊಬೈಲ್ ಫೋನ್ನಿಂದಲೇ ಬರುತ್ತಿವೆ~ ಎನ್ನುತ್ತಾರೆ ಮೈಕ್ರೊಸಾಫ್ಟ್ನ ತಾಂತ್ರಿಕ ತಜ್ಞೆ ಟಿಮ್ ಕೌಲಿಂಗ್.

ಈ ದೂರದೃಷ್ಟಿ ಇಟ್ಟುಕೊಂಡೇ ಮೈಕ್ರೊಸಾಫ್ಟ್ `ವಿಂಡೋಸ್-8~ನ್ನು ಹೊಸ ತಲೆಮಾರಿನ ಅಪ್ಲಿಕೇಷನ್ ಆಧಾರಿತ ಮಾದರಿಯಾಗಿ ರೂಪಿಸಿದೆ. `ಮೈಕ್ರೊಸಾಫ್ಟ್~ನ ವಿಂಡೋಸ್ ಫೋನ್ನಲ್ಲಿ ಇರುವ ಕಾರ್ಯನಿರ್ವಹಣಾ ತಂತ್ರಾಂಶದ ಥೇಟ್ ಸ್ಪರ್ಶ ಸಂವೇದಿ ಅನುಭವವನ್ನೇ `ವಿಂಡೋಸ್-8~ ನೀಡಲಿದೆ. ಕಂಪ್ಯೂಟರ್ನ ಸ್ಟಾರ್ಟ್ ಅಪ್ಲಿಕೇಷನ್ ಜತೆಗೆ ಅಳವಡಿಸಿರುವ `ಮೆಟ್ರೊ~ (Metro) ಇಂಟರ್ಫೇಸ್ ಚಿತ್ರಗಳು, ಇ-ಮೇಲ್ ಸೇರಿದಂತೆ ಇಂಟರ್ನೆಟ್ ಜಗತ್ತಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಟ್ಯಾಬ್ಲೆಟ್ನಲ್ಲಿ ವಿಂಡೋಸ್-8 ಆವೃತ್ತಿಯನ್ನು ಸ್ಪರ್ಶ ಸಂವೇದಿ ಪರದೆ ಮೂಲಕ ಬಳಸಬಹುದು.

ಸಾಂಪ್ರದಾಯಿಕ `ಪಿಸಿ~ಗಳಲ್ಲಿ ಮೌಸ್ ಮತ್ತು ಕಿ-ಬೋರ್ಡ್ ಮೂಲಕ ಕಾರ್ಯನಿರ್ವಹಿಸಬಹುದು. ಅಲ್ಲದೆ, `ಮೆಟ್ರೊ~ ಇಂಟರ್ಫೇಸ್ ಇಷ್ಟಪಡದ ಗ್ರಾಹಕರು, ಸಾಂಪ್ರದಾಯಿಕ ವಿಂಡೋಸ್ಗೆ ಬದಲಾಯಿಸಿಕೊಳ್ಳುವ ಸೌಲಭ್ಯವೂ ಇದರಲ್ಲಿದೆ ಎನ್ನುತ್ತಾರೆ ಮೈಕ್ರೊಸಾಫ್ಟ್ನ `ಮೆಟ್ರೊ~ ವಿನ್ಯಾಸಕಿ ಬಿಲ್ ಫ್ಲೊರಾ.

ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ, ಆ್ಯಪಲ್ನ ಹೊಸ ಕಾರ್ಯನಿರ್ವಹಣಾ ತಂತ್ರಾಂಶ `ಮೌಂಟನ್ ಲಯನ್ (Mountain Lion)
ಕೂಡ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇದು ಜಗತ್ತಿನ ಅತ್ಯಂತ ಸುಧಾರಿತ ಕಾರ್ಯನಿರ್ವಹಣಾ ತಂತ್ರಾಂಶ ಎನ್ನುವ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.

ಈ ಹಿಂದೆ ಮೊಬೈಲ್ನಲ್ಲಿ ಮಾತ್ರ ಬಳಸಬಹುದಾಗಿದ್ದ ಹಲವು ಸೌಲಭ್ಯಗಳನ್ನು ಆ್ಯಪಲ್ ಮೌಂಟನ್ ಲಯನ್ ಮೂಲಕ ಡೆಸ್ಕ್ಟಾಪ್, ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೂ ಲಭ್ಯಗೊಳಿಸಿದೆ. ಹಾಗೆ ನೋಡಿದರೆ, `ವಿಂಡೋಸ್-8~ ಕೂಡ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆಯ ಪಡಿಯಚ್ಚು. ಆ್ಯಪಲ್ ಮತ್ತು ಆಂಡ್ರಾಯ್ಡ ಸ್ಪರ್ಧೆ ಎದುರಿಸುವ ಜತೆಗೆ, ಅಪ್ಲಿಕೇಷನ್ ಮಾರುಕಟ್ಟೆಯತ್ತಲೂ ಗಮನ ಹರಿಸಬೇಕಾದ ತುರ್ತು ಮೈಕ್ರೊಸಾಫ್ಟ್ ನ ಮುಂದಿದೆ.

ಪರ್ಸನಲ್ ಕಂಪ್ಯೂಟರ್ ಎದುರು ದೈತ್ಯವಾಗಿ ಬೆಳೆಯುತ್ತಿರುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ಫೋನ್ ಮಾರುಕಟ್ಟೆ ಭವಿಷ್ಯದ ದಿನಗಳಲ್ಲಿ ಈ ಕಂಪೆನಿಗಳ ಭವಿಷ್ಯ ನಿರ್ಧರಿಸಲಿದೆ ಎನ್ನುತ್ತಾರೆ ತಜ್ಞರು.

ಉದಾಹರಣೆಗೆ ಐಫೋನ್ ಅಥವಾ ಐಪಾಡ್ ಖರೀದಿಸುವ ಗ್ರಾಹಕ ಲ್ಯಾಪ್ಟಾಪ್ ಖರೀದಿ ಆಯ್ಕೆ ಬಂದಾಗ `ಮ್ಯಾಕ್~ನೆಡೆಗೆ ಹೆಚ್ಚಿನ ಒಲವು ತೋರಿಸುತ್ತಾನೆ. ಹೀಗಾಗಿ ಎಲ್ಲ ಡಿವೈಸಸ್ಗಳಲ್ಲೂ ಕಾರ್ಯನಿರ್ವಹಿಸುವ ಏಕ ಪ್ರಕಾರದ (unified OS)
ಕಾರ್ಯನಿರ್ವಹಣಾ ತಂತ್ರಾಂಶ ಅಭಿವೃದ್ಧಿಪಡಿಸುವ ಅನಿವಾರ್ಯತೆ ಕಂಪೆನಿಗಳ ಮುಂದಿದೆ. ಸದ್ಯ ಕಂಪ್ಯೂಟರ್ ವಹಿವಾಟಿನಲ್ಲಿ `ಆ್ಯಪಲ್~ನ ಪಾಲು ಚಿಕ್ಕದಿದ್ದರೂ, ಕಾರ್ಯನಿರ್ವಹಣಾ ತಂತ್ರಾಂಶದ ವಿಷಯಕ್ಕೆ ಬಂದರೆ ಆ್ಯಪಲ್ಗೆ ದೊಡ್ಡ ಪ್ರಮಾಣದ ಲಾಭವಿದೆ.

ಸಾಂಪ್ರದಾಯಿಕ ಪರ್ಸನಲ್ ಕಂಪ್ಯೂಟರ್ (ಪಿಸಿ) ಕಾರ್ಯನಿರ್ವಹಣಾ ತಂತ್ರಾಂಶ ಮಾರುಕಟ್ಟೆಯಲ್ಲಿ ಮೈಕ್ರೊಸಾಫ್ಟ್ ಮುಂದಿದ್ದರೂ, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ಫೋನ್ ರಂಗಕ್ಕೆ ಬಂದರೆ, ಕಂಪೆನಿಯ ಮುಂದೆ ಹಲವು ಸವಾಲುಗಳಿವೆ.

ಆದರೆ, `ವಿಂಡೋಸ್ -8~ ಭವಿಷ್ಯದ ಅಖಂಡ ಕಂಪ್ಯೂಟಿಂಗ್ನ ಭರವಸೆ ಎನ್ನುವಂತೆ ಹೊರಬಂದಿದೆ ಎನ್ನುತ್ತಾರೆ ಮೊಬೈಲ್ ಮಾರುಕಟ್ಟೆ ಅಧ್ಯಯನ ಸಂಸ್ಥೆ ಗಾರ್ಟ್ನರ್ನ ವಿಶ್ಲೇಷಕಿ ಕರೊಲಿನಾ ಮಿಲೆನ್ಸಿ.

ಸದ್ಯಕ್ಕೆ ಜಾಗತಿಕ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಆ್ಯಪಲ್ ಶೇ 64 ಮತ್ತು ಆಂಡ್ರಾಯ್ಡ ಶೇ 32ರಷ್ಟು ಪಾಲು ಹೊಂದಿದೆ. ಆದರೆ, ಮೈಕ್ರೊಸಾಫ್ಟ್ನ ಪಾಲು ಶೇ 2ಕ್ಕಿಂತಲೂ ಕಡಿಮೆ ಇದೆ. ಸ್ಮಾರ್ಟ್ಫೋನ್ ವಿಷಯದಲ್ಲಿ ಆ್ಯಪಲ್ ಶೇ 19 ಮತ್ತು ಆಂಡ್ರಾಯ್ಡ ಶೇ 50ರಷ್ಟು ಪಾಲು ಹೊಂದಿದ್ದರೆ ಕಂಪೆನಿ ಕೇವಲ ಶೇ 1.5ರಷ್ಟು ಪಾಲು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಡುಗಡೆಯಾಗುತ್ತಿರುವ `ವಿಂಡೋಸ್-8~ ಮೈಕ್ರೊಸಾಫ್ಟ್ನ ಮಾರುಕಟ್ಟೆ ಅಸ್ತಿತ್ವ ನಿರ್ಧರಿಸಲಿರುವ ಉತ್ಪನ್ನವೂ ಹೌದು.

`ವಿಂಡೋಸ್-8~ ಪರೀಕ್ಷಾರ್ಥ ಆವೃತ್ತಿಯನ್ನು ಆಸಕ್ತರು (http://windows.microsoft.com/enUS/windows8/consumerpreview) ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.