ಶುಕ್ರವಾರ, ಮೇ 20, 2022
21 °C

ಮೈತುಂಬ ಹೂ: ಮಾವಿನ ಭಾರಿ ಇಳುವರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಮಾವಿನ ಗಿಡಗಳು ಸಾಕಷ್ಟು ಹೂವುಗಳನ್ನು ಬಿಟ್ಟಿದ್ದು, ಈ ಬಾರಿ ಮಾವು ಬೆಳೆಗಾರರು ಭಾರಿ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.ತಾಲ್ಲೂಕಿನಲ್ಲಿ ಮಾವು ಬೆಳೆಗೆ ಉತ್ತಮ ಹವಾಮಾನ ವಿದ್ದು, ಒಟ್ಟು 86.20 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಅವುಗಳಲ್ಲಿ ಕೂಡ್ಲಿಗಿ ಹೋಬಳಿಯಲ್ಲಿ ಅತಿ ಹೆಚ್ಚು ಮಾವು ಬೆಳೆಯ ಲಾಗುತ್ತದೆ. ತಾಲ್ಲೂಕಿನ ಹೊಸಹಳ್ಳಿ ಹೋಬಳಿ ಹೆಚ್ಚು ಮಾವಿನ ತೋಟಗಳನ್ನು ಹೊಂದಿದೆ. ತಾಲ್ಲೂಕಿನ ಕಕ್ಕುಪ್ಪಿ, ಹೊಸಹಳ್ಳಿ, ಆಲೂರು, ಶಿವಪುರ, ಮರಬ, ಸಾಸಲವಾಡ, ಕೊಟ್ಟೂರು ಭಾಗಗಳಲ್ಲಿ ಮಾವಿನ ಮರಗಳಿವೆ. ರಸಪುರಿ, ಮಲಗೋವಾ, ತೋತಾಪುರಿ, ನೀಲಂ, ಬೆನಿಷ, ಮಲ್ಲಿಕಾ ತಳಿಗಳ ಮಾವುಗಳನ್ನು ಹೆಚ್ಚು ಬೆಳೆಯಲಾಗುತ್ತದೆ.ಮಾವಿಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ವರೆಗೆ ಉತ್ತಮ ಮಳೆ ಬೇಕಿದ್ದು, ನಂತರ ಮಳೆಯ ಅವಶ್ಯಕತೆ ಇರುವುದಿಲ್ಲ. ಈಗಾಗಲೇ ಮಾವಿನ ಮರಗಳೂ ಸಾಕಷ್ಟು ಹೂವುಗಳನ್ನು ಬಿಟ್ಟಿದ್ದು, ಹೂವುಗಳು ಕಾಯಿ ಕಟ್ಟುವ ಹಂತಕ್ಕೆ ಬಂದಿವೆ. ಮಾವಿನ ಬೆಳೆಗೆ ಅರಂಭದಲ್ಲೆ ಜಿಗಿ ಹುಳು ಹಾಗೂ ಬೂದಿ ರೋಗ ಬಿದ್ದಿದ್ದು, ಬೂದಿ ರೋಗ ನಿಯಂತ್ರಣಕ್ಕಾಗಿ ಬಾವಿಸ್ಟಿನ್ ಅಥವಾ ಹೆಕ್ಸಕೋಜೋಕ್ ಔಷಧಿಯನ್ನು ಪ್ರತಿ ಲೀಟರ್ ನೀರಿಗೆ ಒಂದು ಗ್ರಾಂ.ನಷ್ಟು ಔಷಧಿಯನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು.ಜಿಗಿಹುಳು ಹಾಗೂ ಕಾಯಿ ಕೊರೆವ ಹುಳುಗಳ ನಿಯಂತ್ರಣಕ್ಕಾಗಿ ಅಜಾರ್ ಡಿರೆಕ್ಟಿನ್ (ಬೇವಿನ ಎಣ್ಣೆ) 5 ಮಿ.ಲೀ ಔಷಧಿ ಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು ಅಥವಾ ಇಮಿಡಾ ಕ್ಲೋರೋಪಿಡ್ ಔಷಧಿಯನ್ನು ಪ್ರತಿ ಲೀ. ನೀರಿನಲ್ಲಿ 0.50 ಮಿ.ಲೀ. ಮಿಶ್ರಣ ಮಾಡಿ ಸಿಂಪಡಿಸಬೇಕು ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಯೋಗೀಶ್ವರ್ ರೈತರಿಗೆ ಸಲಹೆ ನೀಡಿದ್ದಾರೆ.ಈ ಔಷಧಿಗಳನ್ನು ಸಿಂಪಡಿಸುವಾಗ ಅತ್ಯಂತ ಎಚ್ಚರಿಕೆಯಿಂದ ಸಿಂಪಡಿಸ ಬೇಕು, ಏಕೆಂದರೆ ಔಷಧಗಳನ್ನು ಸಿಂಪಡಿ ಸುವುದರಿಂದ ಹೂವುಗಳಲ್ಲಿ ಪರಾಗ ಸ್ಪರ್ಶ ಏರ್ಪಡಿಸುವ ದುಂಬಿಗಳು ಹಾಳಾಗಿ, ಕಾಯಿ ಕಟ್ಟದೆ ಹೋಗಬಹುದು ಎಂದು ಯೋಗೀಶ್ ಎಚ್ಚರಿಕೆ ನೀಡುತ್ತಾರೆ.ಇನ್ನು ಮುಂಗಾರು ಹಂಗಾಮಿನಲ್ಲಿ ಮಾವಿನ ಗಿಡಗಳಿಗೆ ರಾಸಾಯನಿಕ ಗೊಬ್ಬರವನ್ನು ಹಾಕಬೇಕು. ಗಿಡಗಳ ವಯಸ್ಸಿಗೆ ತಕ್ಕಂತೆ ಸುಮಾರು 20 ಕೆ.ಜಿ.ಯವರೆಗೆ ಕೊಟ್ಟಿಗೆ ಗೊಬ್ಬರ ವನ್ನು ಹಾಕಬಹುದಾಗಿದೆ. ಈ ಗೊಬ್ಬರವು ಮುಂದಿನ ಬೆಳೆಗೆ ಫಲ ನೀಡಲಿದೆ ಎಂದು ಯೋಗೀಶ್ವರ್ ತಿಳಿಸುತ್ತಾರೆ.ಕಳೆದ ವರ್ಷಕ್ಕಿಂತ ಈ ವರ್ಷ ಮಾರುಕಟ್ಟೆಗೆ ಹೆಚ್ಚು ಹಣ್ಣು ಬರುವುದರಿಂದ ಬೆಲೆ ಇಳಿಮುಖ ಆಗಬಹುದು. ಇದರಿಂದ ಗ್ರಾಹಕರು ಹೆಚ್ಚು ಖುಷಿಪಟ್ಟರೆ, ಮಾರಾಟ ಗಾರರು, ಮಧ್ಯವರ್ತಿಗಳು ಕಡಿಮೆ ಲಾಭ ಪಡೆಯಬೇಕಾಗ ವುದು ಎಂದು ತೋಟದ ಮಾಲೀಕರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.