ಸೋಮವಾರ, ಜೂಲೈ 6, 2020
27 °C

ಮೈಲಾರ ಮಹಾದೇವ ಅಧ್ಯಯನ ಪೀಠ ಸ್ಥಾಪನೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಲಾರ ಮಹಾದೇವ ಅಧ್ಯಯನ ಪೀಠ ಸ್ಥಾಪನೆಗೆ ಮನವಿ

ಹಾವೇರಿ: “ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹುತಾತ್ಮ ಮೈಲಾರ ಮಹದೇವ ಅವರ ಹೆಸರಿನಲ್ಲಿ ಪೀಠವೊಂದನ್ನು ಸ್ಥಾಪಿಸಬೇಕು ಎಂದು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುವುದು” ಎಂದು ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾದ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ತಿಳಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಹುತಾತ್ಮ ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಮೊದಲ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು. ಹುತಾತ್ಮ ಮೈಲಾರ ಮಹಾದೇವ ಅವರ ಹೋರಾಟ ಕುರಿತು ಹೆಚ್ಚಿನ ಅಧ್ಯಯನವಾಗಬೇಕಿದೆ. ಅದಕ್ಕಾಗಿ ಅಧ್ಯಯನಪೀಠ ಸ್ಥಾಪಿಸಲು ವಿನಂತಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ಮೈಲಾರ ಮಹದೇವ ಅವರ ಹೋರಾಟ ಹಾಗೂ ಜೀವನ ಕುರಿತು ಪ್ರಾಥಮಿಕ ಅಥವಾ ಪ್ರೌಢ ಶಾಲಾ ಪಠ್ಯ ಪುಸ್ತಕದಲ್ಲಿ ಪಾಠ ಇಲ್ಲವೇ ಕಥೆ ರೂಪದಲ್ಲಿ ಸೇರ್ಪಡೆ ಮಾಡಲು ಪಠ್ಯಪುಸ್ತಕ ರಚನಾ ಸಮಿತಿ ಸೂಚಿಸಬೇಕೆಂದು ಸರ್ಕಾರಕ್ಕೆ ಪತ್ರ ಸಹ ಬರೆಯುವುದಾಗಿ ತಿಳಿಸಿದರು.ಮೈಲಾರ ಮಹದೇವ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಹಲವಾರು ಕಾಮಗಾರಿಗಳನ್ನು ಸರ್ಕಾರ ಕೈಕೊಂಡಿದೆ. ಹಾವೇರಿ ನಗರದಲ್ಲಿ ವೀರಸೌಧ ಈಗಾಗಲೇ ನಿರ್ಮಾಣಗೊಂಡಿದ್ದು, ಅದರ ಪಕ್ಕದಲ್ಲಿ ವಾಚನಾಲಯ ಸೌಲಭ್ಯವುಳ್ಳ ವಸ್ತು ಸಂಗ್ರಹಾಲಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೈಲಾರ ಮಹದೇವ ಮತ್ತು ಅವರ ಸಹಚರ ಹೋರಾಟಗಾರರಾದ ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಅವರು ಬ್ರಿಟಿಷರ ಗುಂಡಿಗೆ ಬಲಿಯಾದ ಸ್ಥಳವಾದ ಹೊಸರಿತ್ತಿಯಲ್ಲಿ ಸ್ಮಾರಕ ಭವನ ನಿರ್ಮಾಣ ಹಂತದಲ್ಲಿದೆ. ಮೈಲಾರ ಮಹದೇವ ಅವರ ಜನ್ಮ ಸ್ಥಳವಾದ ಮೋಟೆಬೆನ್ನೂರಿನಲ್ಲಿ ಒಂದು ಕೋಟಿ ರೂ. ವೆಚ್ಚದ ಸ್ಮಾರಕ ಭವನಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಕೊರಡೂರಿನಲ್ಲಿರುವ ಆಶ್ರಮದ ಸ್ಥಿತಿಗತಿ ಕುರಿತು ವಿವರವಾದ ವರದಿ ಸಿದ್ಧಗೊಳಿಸಿ, ಆಶ್ರಮದ ಪುನರುತ್ಥಾನಕ್ಕೆ ಕೈಕೊಳ್ಳಬೇಕಾದ ಕ್ರಮಗಳನ್ನು ಸೂಚಿಸುವಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಈ ಟ್ರಸ್ಟ್‌ಗೆ ಸರ್ಕಾರ ರೂ. 12ಲಕ್ಷ  ನೀಡಿದ್ದು, ಟ್ರಸ್ಟ್‌ನ ವಿವಿಧ ಕಾರ್ಯಚಟುವಟಿಕೆಗಳನ್ನು ರೂಪಿಸಲಾಗುವುದು ಎಂದು ಟ್ರಸ್ಟ್ ಸದಸ್ಯ ಕಾರ್ಯದರ್ಶಿಗಳೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ತಿಳಿಸಿದರು.ನಗರಸಭಾ ಸದಸ್ಯ ಹಾಗೂ ಟ್ರಸ್ಟ್‌ನ ಇನ್ನೊಬ್ಬ ಸದಸ್ಯ ನಾಗೇಂದ್ರ ಕಟಕೋಳ ಮಾತನಾಡಿ, ಹಾವೇರಿ ನಗರದ ಹೃದಯ ಭಾಗದಲ್ಲಿರುವ ಮೈಲಾರ ಮಹದೇವ ವೃತ್ತವನ್ನು ಉನ್ನತೀಕರಣಗೊಳಿಸಿ, ಅಲ್ಲಿ ಅವರ ಕಂಚಿನ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಸಲಹೆ ಮಾಡಿದರು.ಟ್ರಸ್ಟ್‌ನ ಸದಸ್ಯರಾದ ವಿಧಾನ ಸಭಾ ಮಾಜಿ ಸ್ಪೀಕರ್ ಬಿ.ಜಿ. ಬಣಕಾರ, ವಿ.ಎನ್. ತಿಪ್ಪನಗೌಡರ, ಮೈಲಾರ ಮಹದೇವ ಅವರ ಮೊಮ್ಮಗ (ಮಗಳ ಮಗ) ಎಚ್.ಎಸ್.ಮಹಾದೇವಪ್ಪ ಸಾಹಿತಿ ಸತೀಶ ಕುಲಕರ್ಣಿ ಅವರು, ಹಾವೇರಿ, ಹೊಸರಿತ್ತಿ ಹಾಗೂ ಮೋಟೆಬೆನ್ನೂರಿನಲ್ಲಿ ರೂಪಿಸಬಹುದಾದ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದರು.21 ಸದಸ್ಯ ಬಲದ ಟ್ರಸ್ಟ್‌ನ ಮೊದಲ ಸಭೆಯಲ್ಲಿ ಏಪ್ರಿಲ್ 1ರಂದು ಹುತಾತ್ಮ ಮೈಲಾರ ಮಹದೇವಪ್ಪ ಅವರ 68ನೇ ಪುಣ್ಯತಿಥಿ ಹಾಗೂ ಜೂನ್ 8ರಂದು ಜನ್ಮ ಶತಮಾನೋತ್ಸವ ಆಚರಣೆಯ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚರ್ಚಿಸಲಾಯಿತಲ್ಲದೇ, ಜನ್ಮ ಶತಮಾನೋತ್ಸವ ಸಮಾರಂಭದ  ರೂಪುರೇಷೆಗಳನ್ನು ನಿರ್ಧರಿಸಲು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಟ್ರಸ್ಟ್‌ನ ಇನ್ನೊಂದು ಸಭೆ ಜರುಗಿಸಲು ನಿರ್ಧರಿಸಲಾಯಿತು.ಜಿ.ಪಂ. ಸಹಾಯಕ ಕಾರ್ಯದರ್ಶಿ ಎ.ಟಿ. ಜಯಕುಮಾರ, ಪರಮೇಶ್ವರಪ್ಪ ಮೈಲಾರ, ತೋಟಗಾರಿಕಾ ಉಪನಿರ್ದೇಶಕ ಎಸ್.ಜೆ. ದೊಡ್ಡಗೌಡ, ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಟಿ. ನೆಗಳೂರ, ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಹಾಯಕ ಎಚ್.ಎಂ. ಪುಟಲಕಟ್ಟಿ, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು, “ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹುತಾತ್ಮ ಮೈಲಾರ ಮಹದೇವ ಅವರ ಹೆಸರಿನಲ್ಲಿ ಪೀಠವೊಂದನ್ನು ಸ್ಥಾಪಿಸಬೇಕು ಎಂದು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುವುದು” ಎಂದು ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾದ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ತಿಳಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಹುತಾತ್ಮ ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಮೊದಲ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು. ಹುತಾತ್ಮ ಮೈಲಾರ ಮಹಾದೇವ ಅವರ ಹೋರಾಟ ಕುರಿತು ಹೆಚ್ಚಿನ ಅಧ್ಯಯನವಾಗಬೇಕಿದೆ. ಅದಕ್ಕಾಗಿ ಅಧ್ಯಯನಪೀಠ ಸ್ಥಾಪಿಸಲು ವಿನಂತಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ಮೈಲಾರ ಮಹದೇವ ಅವರ ಹೋರಾಟ ಹಾಗೂ ಜೀವನ ಕುರಿತು ಪ್ರಾಥಮಿಕ ಅಥವಾ ಪ್ರೌಢ ಶಾಲಾ ಪಠ್ಯ ಪುಸ್ತಕದಲ್ಲಿ ಪಾಠ ಇಲ್ಲವೇ ಕಥೆ ರೂಪದಲ್ಲಿ ಸೇರ್ಪಡೆ ಮಾಡಲು ಪಠ್ಯಪುಸ್ತಕ ರಚನಾ ಸಮಿತಿ ಸೂಚಿಸಬೇಕೆಂದು ಸರ್ಕಾರಕ್ಕೆ ಪತ್ರ ಸಹ ಬರೆಯುವುದಾಗಿ ತಿಳಿಸಿದರು.ಮೈಲಾರ ಮಹದೇವ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಹಲವಾರು ಕಾಮಗಾರಿಗಳನ್ನು ಸರ್ಕಾರ ಕೈಕೊಂಡಿದೆ. ಹಾವೇರಿ ನಗರದಲ್ಲಿ ವೀರಸೌಧ ಈಗಾಗಲೇ ನಿರ್ಮಾಣಗೊಂಡಿದ್ದು, ಅದರ ಪಕ್ಕದಲ್ಲಿ ವಾಚನಾಲಯ ಸೌಲಭ್ಯವುಳ್ಳ ವಸ್ತು ಸಂಗ್ರಹಾಲಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೈಲಾರ ಮಹದೇವ ಮತ್ತು ಅವರ ಸಹಚರ ಹೋರಾಟಗಾರರಾದ ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಅವರು ಬ್ರಿಟಿಷರ ಗುಂಡಿಗೆ ಬಲಿಯಾದ ಸ್ಥಳವಾದ ಹೊಸರಿತ್ತಿಯಲ್ಲಿ ಸ್ಮಾರಕ ಭವನ ನಿರ್ಮಾಣ ಹಂತದಲ್ಲಿದೆ. ಮೈಲಾರ ಮಹದೇವ ಅವರ ಜನ್ಮ ಸ್ಥಳವಾದ ಮೋಟೆಬೆನ್ನೂರಿನಲ್ಲಿ ಒಂದು ಕೋಟಿ ರೂ. ವೆಚ್ಚದ ಸ್ಮಾರಕ ಭವನಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಕೊರಡೂರಿನಲ್ಲಿರುವ ಆಶ್ರಮದ ಸ್ಥಿತಿಗತಿ ಕುರಿತು ವಿವರವಾದ ವರದಿ ಸಿದ್ಧಗೊಳಿಸಿ, ಆಶ್ರಮದ ಪುನರುತ್ಥಾನಕ್ಕೆ ಕೈಕೊಳ್ಳಬೇಕಾದ ಕ್ರಮಗಳನ್ನು ಸೂಚಿಸುವಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಈ ಟ್ರಸ್ಟ್‌ಗೆ ಸರ್ಕಾರ ರೂ. 12ಲಕ್ಷ  ನೀಡಿದ್ದು, ಟ್ರಸ್ಟ್‌ನ ವಿವಿಧ ಕಾರ್ಯಚಟುವಟಿಕೆಗಳನ್ನು ರೂಪಿಸಲಾಗುವುದು ಎಂದು ಟ್ರಸ್ಟ್ ಸದಸ್ಯ ಕಾರ್ಯದರ್ಶಿಗಳೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ತಿಳಿಸಿದರು.ನಗರಸಭಾ ಸದಸ್ಯ ಹಾಗೂ ಟ್ರಸ್ಟ್‌ನ ಇನ್ನೊಬ್ಬ ಸದಸ್ಯ ನಾಗೇಂದ್ರ ಕಟಕೋಳ ಮಾತನಾಡಿ, ಹಾವೇರಿ ನಗರದ ಹೃದಯ ಭಾಗದಲ್ಲಿರುವ ಮೈಲಾರ ಮಹದೇವ ವೃತ್ತವನ್ನು ಉನ್ನತೀಕರಣಗೊಳಿಸಿ, ಅಲ್ಲಿ ಅವರ ಕಂಚಿನ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಸಲಹೆ ಮಾಡಿದರು. ಟ್ರಸ್ಟ್‌ನ ಸದಸ್ಯರಾದ ವಿಧಾನ ಸಭಾ ಮಾಜಿ ಸ್ಪೀಕರ್ ಬಿ.ಜಿ. ಬಣಕಾರ, ವಿ.ಎನ್. ತಿಪ್ಪನಗೌಡರ, ಮೈಲಾರ ಮಹದೇವ ಅವರ ಮೊಮ್ಮಗ (ಮಗಳ ಮಗ) ಎಚ್.ಎಸ್. ಮಹಾದೇವಪ್ಪ ಸಾಹಿತಿ ಸತೀಶ ಕುಲಕರ್ಣಿ ಅವರು, ಹಾವೇರಿ, ಹೊಸರಿತ್ತಿ ಹಾಗೂ ಮೋಟೆಬೆನ್ನೂರಿನಲ್ಲಿ ರೂಪಿಸಬಹುದಾದ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದರು.21 ಸದಸ್ಯ ಬಲದ ಟ್ರಸ್ಟ್‌ನ ಮೊದಲ ಸಭೆಯಲ್ಲಿ ಏಪ್ರಿಲ್ 1ರಂದು ಹುತಾತ್ಮ ಮೈಲಾರ ಮಹದೇವಪ್ಪ ಅವರ 68ನೇ ಪುಣ್ಯತಿಥಿ ಹಾಗೂ ಜೂನ್ 8ರಂದು ಜನ್ಮ ಶತಮಾನೋತ್ಸವ ಆಚರಣೆಯ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚರ್ಚಿಸಲಾಯಿತಲ್ಲದೇ, ಜನ್ಮ ಶತಮಾನೋತ್ಸವ ಸಮಾರಂಭದ  ರೂಪುರೇಷೆಗಳನ್ನು ನಿರ್ಧರಿಸಲು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಟ್ರಸ್ಟ್‌ನ ಇನ್ನೊಂದು ಸಭೆ ಜರುಗಿಸಲು ನಿರ್ಧರಿಸಲಾಯಿತು.ಜಿ.ಪಂ. ಸಹಾಯಕ ಕಾರ್ಯದರ್ಶಿ ಎ.ಟಿ. ಜಯಕುಮಾರ, ಪರಮೇಶ್ವರಪ್ಪ ಮೈಲಾರ, ತೋಟಗಾರಿಕಾ ಉಪನಿರ್ದೇಶಕ ಎಸ್.ಜೆ. ದೊಡ್ಡಗೌಡ, ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಟಿ. ನೆಗಳೂರ, ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಹಾಯಕ ಎಚ್.ಎಂ. ಪುಟಲಕಟ್ಟಿ, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು,

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.