ಚಿಂಚೋಳಿ: ತಾಲ್ಲೂಕಿನ ಮೊಗದಂಪೂರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಧ್ವಜ ಕಟ್ಟೆ ಸ್ಥಾಪನೆಗೆ ಸಂಬಂಧಿಸಿದಂತೆ ದಲಿತರು ಹಾಗೂ ಸವರ್ಣಿಯರ ಮಧ್ಯೆ ಉಂಟಾಗಿದ್ದ ವಿವಾದವನ್ನು ಪರಿಹರಿಸುವಲ್ಲಿ ಸೇಡಂ ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತ ಡಿ.ಕೆ. ರವಿ ಬುಧವಾರ ಯಶಸ್ವಿಯಾಗಿದ್ದಾರೆ.

ಜೂ.30ರಂದು ಮೊಗದಂಪೂರಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ್ದ ಡಿ.ಕೆ ರವಿ ಅವರು, ಬುಧವಾರ ಇಲ್ಲಿನ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಉಭಯ ಕೋಮಿನವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ವಿವಾದಕ್ಕೆ ತೆರೆ ಎಳೆದರು.

ಸಭೆಯಲ್ಲಿ ಮಾತನಾಡಿದ ಗ್ರಾಮದ ಕೋಲಿ ಸಮಾಜದ ಮುಖಂಡ ನರಸಿಮ್ಲು ಸವಾರಿ ಅವರು, ತಮ್ಮ ಮನೆಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಅಂಬೇಡ್ಕರ್ ಧ್ವಜ ಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು. ಇದಕ್ಕೆ ಅಂಬೇಡ್ಕರ ಸಂಘದವರು ಸಮ್ಮತಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭೀಮರಾವ್ ತೇಗಲತಿಪ್ಪಿ, ಅಬ್ದುಲ್ ಬಾಷೀತ್, ಕೆ.ಎಂ ಹಾಷ್ಮೀ, ಕಾಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಹೇರೂರು, ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಮ್ಲು ಕುಂಬಾರ್, ರಘುವೀರ ಭೀಮಸೈನಿಕ, ಗೌತಮ ಬೊಮ್ಮನಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

`ಗ್ರಾಮದಲ್ಲಿ ಎಲ್ಲರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಇರುವಂತೆ ಮಾಡಲಾಗಿದೆ. ಗ್ರಾಮದಲ್ಲಿ ಯಾವುದೇ ರೀತಿಯ ವಿವಾದ, ಅಸಮಾಧಾನ ಇಲ್ಲ. ಇತರ ಅಧಿಕಾರಿಗಳ ಸಹಯೋಗದೊಂದಿಗೆ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವ ಸಮ್ಮತ ಅಭಿಪ್ರಾಯದಂತೆ ವಿವಾದ ಬಗೆ ಹರಿಸಲಾಗಿದೆ~ ಎಂದು ಸಹಾಯಕ ಆಯುಕ್ತ ಡಿ.ಕೆ ರವಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಸಭೆಯ ನಂತರ ಅಧಿಕಾರಿಗಳೊಂದಿಗೆ ಮೊಗದಂಪೂರಕ್ಕೆ ತೆರಳಿದ ಸಹಾಯಕ ಆಯುಕ್ತ ಡಿ.ಕೆ ರವಿ. ನರಸಿಮ್ಲು ಸವಾರಿ, ರಘುವೀರ ಭೀಮಸೈನಿಕ, ಲಕ್ಷ್ಮಣ, ಪೆಂಟಮ್ಮಾ, ತಹಶೀಲ್ದಾರ ಡಾ. ರಮೇಶಬಾಬು ಹಾಲು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೇವ ಬೈಗೊಂಡ, ಸರ್ಕಲ್ ಇನ್ಸ್ಪೆಕ್ಟರ್ ಕೆ. ಬಸವರಾಜ, ಸಬ್ ಇನ್ಸ್ಪೆಕ್ಟರ್ ಅಡಿವೆಪ್ಪ ಬನ್ನಿ, ಬಸವರಾಜ ಫುಲಾರಿ ಮುಂತಾದವರು, ವಿವಾದ ಬಗೆಹರಿದ ಸುದ್ದಿ ತಿಳಿದ ಗ್ರಾಮಸ್ಥರು ಸವಾರಿ ಅವರ ಮನೆಯ ಎದುರಿನಲ್ಲಿ ಕಟ್ಟಿದ್ದ ಅಂಬೇಡ್ಕರ್ ಧ್ವಜ ಕಟ್ಟೆಯಲ್ಲಿ ನೀಲಿ ಧ್ವಜಾರೋಹಣ ಮಾಡಿದರು.

ಗ್ರಾಮದಲ್ಲಿ ಅಂಬೇಡ್ಕರ್ ಕಟ್ಟೆ ನಿರ್ಮಿಸಲು ಉದ್ದೇಶಿಸಿದ ಸ್ಥಳದಲ್ಲಿ ಹಲವಾರು ವರ್ಷಗಳಿಂದ ಮುಸಲ್ಮಾನರು ಮೊಹರಂ ಹಬ್ಬದಲ್ಲಿ ಸೂಫಿಗಳ ಅಲಾಯಿ ಪೀರಾ ಕೂಡಿಸುತ್ತಿದ್ದರಿಂದ, ದಲಿತರು ಮತ್ತು ಮುಸಲ್ಮಾನರ ಮಧ್ಯೆ ಸಂಘರ್ಷ ಉಂಟಾಗಿ ಅಶಾಂತಿಯ ವಾತಾವರಣ ಮೂಡಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದ್ದವು. ಸುಮಾರು 15 ತಿಂಗಳಿನಿಂದ ನಡೆಯುತ್ತಿದ್ದ ವಿವಾದ ಬಗೆ ಹರಿದಿದ್ದು ದಲಿತರು, ಸವರ್ಣಿಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.