ಊರು ಸುತ್ತುವುದರಲ್ಲಿ ಆಸಕ್ತಿಯಿರುವ ಕೆ.ಎನ್.ಭಗವಾನ್ ತಮ್ಮ ನೋಟಕ್ಕೆ-ಲೇಖನಿಗೆ ದಕ್ಕಿದ ಜಗತ್ತನ್ನು ‘ಕಂಡಷ್ಟು ಜಗತ್ತು’ ಕೃತಿಯಲ್ಲಿ ಇತರರಿಗೆ ಕಾಣಿಸಲು ಪ್ರಯತ್ನಿಸಿದ್ದಾರೆ. ಇಲ್ಲಿನ ಹತ್ತೊಂಬತ್ತು ಬರಹಗಳಲ್ಲಿ ಅನೇಕ ಊರುಗಳ ಕಥನಗಳಿವೆ.
ವಸ್ತುವಿಗೆ ಸಂಬಂಧಿಸಿದಂತೆ ಲಂಡನ್‌ನಿಂದ ಗೊರವನಹಳ್ಳಿವರೆಗಿನ ವಿಸ್ತಾರವಿದೆ.ಕಂಡಷ್ಟನ್ನು ಪ್ರಾಮಾಣಿಕತೆಯಿಂದ ಚಿತ್ರಿಸಿರುವುದು ಈ ಬರಹಗಳ ವಿಶೇಷ. ಕರ್ನಾಟಕ ಹಾಗೂ ಭಾರತದಲ್ಲಿನ ಪ್ರವಾಸಿತಾಣಗಳನ್ನು ಪರಿಚಯಿಸುವಾಗ, ಸಂಪರ್ಕ ಹಾಗೂ ವಸತಿಗೆ ಸಂಬಂಧಿಸಿದ ವಿವರಗಳೂ ಇದ್ದಿದ್ದಲ್ಲಿ ಓದುಗರಿಗೆ ಉಪಯೋಗವಾಗುತ್ತಿತ್ತು.
ಪ್ರವಾಸ ಕಥನಗಳು ಏಕತಾನತೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಹೊರಬಂದಿರುವ ಭಗವಾನ್‌ರ ಕೃತಿ, ಈ ಕೊರತೆಯನ್ನೇನೂ ಬಗೆಹರಿಸುವುದಿಲ್ಲ. ಆದರೆ ಓದಿನ ರುಚಿಗಂತೂ ಧಕ್ಕೆಯಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.