ಲಾವೋನ ಕನಸು (ಕವಿತೆಗಳು)
ಲೇ: ರಾಜೇಂದ್ರ ಪ್ರಸಾದ್
ಪ್ರ: ಅನೇಕ, ನಂ. 72, ‘ಭೂಮಿಗೀತ’,
6ನೇ ತಿರುವು, ಉದಯಗಿರಿ, ಮಂಡ್ಯ– 571401

‘ನಡುಹಗಲು ನೆತ್ತಿಯ ಮೇಲೆ/ ಕೂತು ತೂಕಡಿಸುವಾಗ/ ಪಶ್ಚಿಮ ಚೀನಾದಿಂದ ನೀರೆಮ್ಮೆಯ ಮೇಲೆ/ ಹೊರಟು ಲಾವೋ ತಾತ/ ಕಾವೇರಿಯ ದಡಕ್ಕೆ ಬಂದಿದ್ದ!’ (ಲಾವೋನ ಕನಸು/ 82) ಎಂದು ಈ ಸಂಕಲನಕ್ಕೆ ಹೆಸರು ಕೊಟ್ಟ ಕವಿತೆಯಲ್ಲಿ ಬರೆಯುವ ರಾಜೇಂದ್ರ ಪ್ರಸಾದ್, ಚೀನೀ ದಾರ್ಶನಿಕ ಲಾವೋತ್ಸೆಯ ಚಿಂತನೆ ನಮಗೂ ಬೇಕಾಗಿರುವುದನ್ನು, ಅದು ನಮ್ಮದೂ ಆಗಿರುವುದನ್ನು ಇದರಲ್ಲಿ ಸೂಚಿಸುತ್ತಿರುವಂತಿದೆ.

ಈ ಸಂಕಲನದ ಕವಿತೆಗಳಲ್ಲಿ ಹೊಸವಸ್ತು, ನುಡಿಗಟ್ಟಿಗೆ ಕವಿ ತಡಕಾಡಿರುವುದರ ಕುರುಹುಗಳನ್ನು ಕಾಣಬಹುದು. ಕನಸು–ವಾಸ್ತವದ ನಡುವೆ ಸದಾ ಕನವರಿಸುವ ಆ ಕವಿತೆಗಳು ತಮ್ಮ ಗಂಭೀರ ನಿಲುವಿನಿಂದಾಗಿ ಓದುಗರಲ್ಲಿ ಒಂದಷ್ಟು ಸಿದ್ಧತೆಯನ್ನು ಕೇಳುತ್ತವೆ. ಏಕೆಂದರೆ ಅವು ಈ ಕಾಲದ ಭಾಷೆಯಲ್ಲಿ ಮಾತನಾಡುತ್ತಿವೆ.

‘ಅಟ್ಟ ಸೇರಿದ್ದ ತುಕ್ಕಿನ ಖಡ್ಗಗಳಿಗೆ/ ಸಾಣೆ ಹಿಡಿಯಲಾಗುತ್ತಿದೆ...’ (ಪ್ರಧಾನ ಸೇವಕರು, ಕರಸೇವಕರು ಮತ್ತು ಗೋ–ಕರು/39) ಎಂದು ಈ ಕಾಲದ ಹಿಂಸೆಯ ಬಗ್ಗೆ ಹೇಳುತ್ತಲೇ ‘ಬಲಿಗಂಬದ ಬಳಿ ಎಣಿಸಲಾರದಷ್ಟು ಮುಂಡಗಳು/ ಬೀಳಲು ಶುರುವಾಗುತ್ತವೆ!’ (ನಾಗರಿಕತೆಯ ಕೊನೆಯ ಮೆಟ್ಟಿಲು/ 37) ಎಂದು ಹಾಡಹಗಲೇ ಕೊಲೆಯಾಗುವ ನಾಗರಿಕೆಯನ್ನು ಈ ಕವಿತೆ ಬಣ್ಣಸುತ್ತದೆ.

ತಮ್ಮ ಪಂಚೇಂದ್ರಿಯಗಳು ಉಂಡ ಸಕಲೆಂಟೂ ಭಾವನೆಗಳನ್ನು ಮನುಷ್ಯ ಸಂವೇದನೆಯ ಹಾಡಾಗಿಸಿದ್ದಾರೆ ಕವಿ. ತಮ್ಮ ‘ಪ್ರಾರ್ಥನೆ’ ಕವಿತೆಯಲ್ಲಿ ‘ಪ್ರಭುವೇ,/ ಎಂದೂ ಏನೂ ಕೇಳದ ನಾನು/ ಮಂಡಿಯೂರಿ ಬೊಗಸೆಯಷ್ಟು ಪ್ರೀತಿ ಬೇಡಿದೆ/ ನಿನ್ನ ಕರುಣೆಯ ಖಡ್ಗ ಕೈಯನ್ನೇ ಕತ್ತರಿಸಿತು’ ಎನ್ನುವ ಕವಿ ಈ ಕವಿತೆಯಲ್ಲಿ ಎಲ್ಲ ಇಂದ್ರಿಯಗಳನ್ನು ಹಾಳುಮಾಡುವ ದೇವರ ಬಗ್ಗೆ ಹೇಳುತ್ತಾನೆ.

ಭಕ್ತ ಸತ್ತ ಮೇಲೆ ದೇವರೂ ಉಳಿಯದಿರುವುದನ್ನು ಇಲ್ಲಿ ಈ ಕಾಲದ ರೂಪಕವನ್ನಾಗಿಸಿದ್ದಾರೆ ಕವಿ. ಭಿನ್ನ ದನಿ, ಧಾಟಿಗಾಗಿ ಗಂಭೀರವಾಗಿ ಪ್ರಯತ್ನಿಸಿರುವ ಕವಿ ಈ ಕಾಲದ ಆರ್ತನಾದ, ಸಂಕಟಗಳನ್ನು ತಮ್ಮದೇ ರೀತಿಯಲ್ಲಿ ಹಿಡಿಯಲು ಪ್ರಯತ್ನಿಸಿರುವದು ಅವರ ಕಾವ್ಯದ ವಿಶೇಷ ಗುಣವಾಗಿದೆ.

ಡಯಸ್ಪೊರಾ
ಲೇ: ಆರ್. ತಾರಿಣಿ ಶುಭದಾಯಿನಿ
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,
ಕಲಾಗ್ರಾಮ, ಜ್ಞಾನಭಾರತಿ ಆವರಣದ ಹಿಂಭಾಗ,
ಮಲ್ಲತ್ತಹಳ್ಳಿ, ಬೆಂಗಳೂರು– 560 056
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ‘ವಿಚಾರ ಸಾಹಿತ್ಯ ಮಾಲೆ’ಯ ಅಡಿಯಲ್ಲಿ ಬಂದ ಈ ಪುಸ್ತಕವು ‘ಡಯಸ್ಪೊರಾ’ ಎಂಬ ಪರಿಕಲ್ಪನೆಯ ಕುರಿತು ಇದೆ. ಇದನ್ನು ಬರೆದಿರುವ ಆರ್. ತಾರಿಣಿ ಶುಭದಾಯಿನಿ ಈ ಪರಿಕಲ್ಪನೆಯನ್ನು ಸರಳವಾಗಿ ಕನ್ನಡದಲ್ಲಿ ವಿವರಿಸಲು ಪ್ರಯತ್ನಿಸಿದ್ದಾರೆ.

‘ಡಯಸ್ಪೊರಾ ಎಂಬುದೊಂದು ಪರಿಕಲ್ಪನೆ; ವಲಸಿಗರ ಮತ್ತು ನೆಲಸಿಗರ ಬದುಕಿನ ಕ್ರಮ, ನುಡಿ ಬಳಕೆ, ಆಚರಣೆ, ಸಾಹಿತ್ಯ, ಸಾಮಾಜಿಕ ಪ್ರಾಮುಖ್ಯ, ದುಡಿಮೆ ಇತ್ಯಾದಿಗಳನ್ನೆಲ್ಲ ಕುರಿತ ತಿಳಿವಳಿಕೆಯನ್ನು ಈ ಪದ ಸೂಚಿಸುತ್ತದೆ’ ಎಂದು ಈ ಮಾಲಿಕೆಯ ಸಂಪಾದಕರಾದ ಓ.ಎಲ್. ನಾಗಭೂಷಣ ಸ್ವಾಮಿ ತಮ್ಮ ಮಾತಿನಲ್ಲಿ ವಿವರಿಸಿದ್ದಾರೆ. ಸಾಹಿತ್ಯ, ಹಲವು ಶಾಸ್ತ್ರಗಳ ಶಿಸ್ತು, ನೆಲೆಗಳಿಂದ ಅಧ್ಯಯನ ಮಾಡುವ ಅವಕಾಶ ಈ ಪರಿಕಲ್ಪನೆಯಲ್ಲಿದೆ.

ಈ ಪರಿಕಲ್ಪನೆ ಕನ್ನಡಕ್ಕೆ ಹೊಸದಾಗಿದ್ದು ಆಸಕ್ತರಲ್ಲಿ ಕುತೂಹಲ ಮೂಡಿಸುವಂತಿದೆ. ಜಗತ್ತಿನ ಪ್ರಮುಖ ಡಯಸ್ಪೊರಾಗಳು, ಡಯಸ್ಪೊರಾ ಸಾಹಿತ್ಯ, ಕನ್ನಡದಲ್ಲಿ ಡಯಸ್ಪೊರಾ ಸಾಧ್ಯತೆಯ ಕುರಿತಾಗಿ ಈ ಪುಸ್ತಕದಲ್ಲಿ ವಿವರವಾದ ವಿವರಣೆ ಇದೆ.

ವಲಸೆ ಎನ್ನುವುದು ಏಕಕಾಲಕ್ಕೆ ಕಳೆದುಕೊಳ್ಳುವುದು ಹೌದು, ಪಡೆದುಕೊಳ್ಳುವುದೂ ಹೌದು. ಇದು ಜಗತ್ತಿನ ಎಲ್ಲೆಡೆ ನಿರಂತರವಾಗಿ ಸಂಭವಿಸುವ ನಿರಂತರ ಪ್ರಕ್ರಿಯೆ. ಅದಕ್ಕಿರುವ ಕಾರಣ, ಪರಿಣಾಮದಂತಹ ಹಲವು ಆಯಾಮಗಳಿಗೆ ಈ ಪರಿಕಲ್ಪನೆ ಒಂದು ನಿರ್ದಿಷ್ಟ ಚೌಕಟ್ಟು ಹಾಕಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿನ ಹಲವು ವಲಸೆಗಳನ್ನು, ಅದನ್ನು ವಸ್ತುವನ್ನಾಗಿ ಉಳ್ಳ ಸಾಹಿತ್ಯವನ್ನು ಈ ಹಿನ್ನೆಲೆಯಲ್ಲಿ ಅಭ್ಯಾಸ ಮಾಡಬಹುದು. ಅದಕ್ಕೆ ಈ ಪರಿಕಲ್ಪನೆ ಹಲವು ಹೊಸ ದಿಕ್ಕುಗಳನ್ನು ತೆರೆಯುತ್ತದೆ.

ದರಗಾ
ಸಂ: ಬಸವರಾಜ ಕೋಡಗುಂಟಿ
ಪ್ರ: ಬಂಡಾರ ಪ್ರಕಾಶನ
ಮಸ್ಕಿ, ರಾಯಚೂರು ಜಿಲ್ಲೆ– 524 124
ಹೈದರಾಬಾದ್ ಕರ್ನಾಟಕದ ದರ್ಗಾಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ಬಸವರಾಜ ಕೋಡಗುಂಟಿ ಸಂಪಾದಿಸಿರುವ ಇದು 14 ದರ್ಗಾಗಳ ಕುರಿತ ಮಾಹಿತಿಯನ್ನು ಸಚಿತ್ರವಾಗಿ ಕೊಡುತ್ತದೆ. ಸೂಫಿ ಸಂತರಿಗೆ ಸೇರಿದ ಈ ದರ್ಗಾಗಳು ಹಿಂದೂ ಮುಸ್ಲಿಂ ಸಹಬಾಳ್ವೆಯ ಸಂಕೇತಗಳಾಗಿವೆ.

ಇಲ್ಲಿ ಕೊಡಲಾಗಿರುವ ದರ್ಗಾಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು– ಫಿರೋಜಾಬಾದ್ನ ಕಲೆಪುತ್ ರೆಹಮಾನ್ ದರ್ಗಾ, ಇಜೇರಿಯ ಖ್ವಾಜಾ ಅಮೀನುದ್ದಿನ ದರ್ಗಾ, ಗೋಗಿಯಯ ಚಂದಾಸಾಹೇಬ ದರ್ಗಾ, ಕಲಬುರ್ಗಿಯ ರುಕ್ನುದ್ದೀನ್ ಖಾದ್ರಿ, ರಾಣೋಸ ಪೀರ ದರ್ಗಾ– ಹೀಗೆ ಇಲ್ಲಿ ಅವುಗಳ ಬಗ್ಗೆ ಕೊಡಲಾಗಿರುವ ಮಾಹಿತಿಯು ಹೈದರಾಬಾದ್ ಕರ್ನಾಟಕದ ಧಾರ್ಮಿಕ ಪರಂಪರೆ ಹಾಗೂ ಇತಿಹಾಸದ ಭಾಗವಾಗಿದೆ.

ಸೂಫಿ ಸಂತರ ಜೀವನ, ತತ್ವ ಹಾಗೂ ಅವರ ಪವಾಡಗಳನ್ನು ಇಲ್ಲಿನ ಲೇಖನಗಳಲ್ಲಿ ಸಂಗ್ರಹವಾಗಿ ಕೊಡಲಾಗಿದೆ. ಈ ದರ್ಗಾಗಳಲ್ಲಿ ನಡೆಯುವ ಉರುಸ್ ಆಚರಣೆ, ಅವುಗಳಿಗೆ ನಡೆದುಕೊಳ್ಳುವ ಭಕ್ತಾದಿಗಳು ಮತ್ತು ಅವುಗಳ ಈಗಿನ ಸ್ಥಿತಿಯನ್ನು ಲೇಖನಗಳು ವಿವರಿಸುತ್ತವೆ.

ಈಗಿನ ಹಲವು ವಿಕಾರಗಳಿಗೆ ಮದ್ದಾಗಬಹುದಾದ ಹೈದರಾಬಾದ್ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ದರ್ಗಾಗಳ ಕುರಿತಾದ ಈ ಪುಸ್ತಕವು ಮುಖ್ಯವಾಗಿ ಹೊಸ ಬರಹಗಾರರನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಿದ್ಧವಾಗಿದೆ. ಕನ್ನಡದ ಮಹಾಪ್ರಾಣಗಳನ್ನು ಬಳಸದೆ ಬರೆದಿರುವ ಇಲ್ಲಿನ ಬರಹಗಳು ಭಾಷೆಯ ದೃಷ್ಟಿಯಿಂದಲೂ ವಿಶಿಷ್ಟ ಪ್ರಯತ್ನವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.