ಕರ್ನಾಟಕದ ದೀವರು
(ಒಂದು ಐತಿಹಾಸಿಕ ಅಧ್ಯಯನ)
ಲೇ: ಮಧು ಗಣಪತಿರಾವ್ ಮಡೆನೂರು
ಪು: 308; ಬೆ: ರೂ. 250
ಪ್ರ: ಹೊತ್ತರಳಿ ಪ್ರಕಾಶನ
ಶ್ರೀ ಮಡೆನೂರು ನಿಲಯ, 4ನೇ ಮುಖ್ಯರಸ್ತೆ,
3ನೇ ತಿರುವು,

ಶರಾವತಿ ನಗರ ‘ಬಿ’ ಬ್ಲಾಕ್, ಶಿವಮೊಗ್ಗ–577 201ಮಲೆನಾಡಿನ ಜನಾಂಗವಾದ ದೀವರ ಬಗ್ಗೆ ವಿವರವಾದ ಅಧ್ಯಯನ ಮಾಡಿರುವ ಮಧು ಗಣಪತಿರಾವ್ ಮಡೆನೂರು ಅದನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ. ದೀವರು ಮೂಲತಃ ಯೋಧವೃತ್ತಿಯವರಾಗಿದ್ದು ಅವರ ತ್ಯಾಗ ಜೀವನದ ಜೊತೆಗೆ ಅವರ ಸಂಪ್ರದಾಯ, ಕುಲವೃತ್ತಿ, ಹಬ್ಬ, ಜಾನಪದ ಮುಂತಾದ ಸಾಂಸ್ಕೃತಿಕ ಸಂಗತಿಗಳ ಕುರಿತು ಇಲ್ಲಿ ಕೊಡಲಾಗಿದೆ.

ಇದಕ್ಕಾಗಿ ಲೇಖಕರು ಶಾಸನಗಳನ್ನು ಸಾಹಿತ್ಯವನ್ನು ಆಕರವಾಗಿಸಿಕೊಂಡಿದ್ದಾರೆ. ಸ್ವತಃ ಅವರ ಕ್ಷೇತ್ರಕಾರ್ಯವೂ ಇಲ್ಲಿ ಸೇರಿಕೊಂಡಿದೆ. ಕರ್ನಾಟಕದ ಅರಣ್ಯ ಭಾಗಗಳಲ್ಲಿ ಚದುರಿ ಹೋಗಿರುವ ಈ ಕಾಡಿನ ಮಕ್ಕಳ ಬಗ್ಗೆ ಪೂರ್ಣಪ್ರಮಾಣದ ಅಧ್ಯಯನವೊಂದು ಈವರೆಗೆ ಬಂದಿರಲಿಲ್ಲ. ಆ ದಿಸೆಯಲ್ಲಿ ಈ ಕೃತಿಯೇ ಮಹತ್ವದ ಕೆಲಸವಾಗಿದೆ.

ಪಿಎಚ್.ಡಿ.ಯಂತಹ ಅಕಡೆಮಿಕ್ ಅಧ್ಯಯನದ ಕಾರಣಕ್ಕೆ ಈ ಬರವಣಿಗೆ ನಡೆದಿಲ್ಲವಾದ್ದರಿಂದ ಅಂಥ ಅಧ್ಯಯನಗಳಲ್ಲಿ ಇರುವ ಗಡಸುತನ, ಬೇರೊಬ್ಬರ ನಿಯಂತ್ರಣ ಇದಕ್ಕಿಲ್ಲ. ಹಾಗಾಗಿ ಈ ಅಧ್ಯಯನಕ್ಕೆ ಮುಕ್ತವಾದ, ಎಲ್ಲವನ್ನು ಒಳಗೊಳ್ಳುವ ಗುಣವಿದೆ. ಇಲ್ಲಿ ನೀಡಲಾಗಿರುವ ವಿವರಗಳು ಮುಂದೆ ಬರಲಿರುವ ಇಂಥ ಜನಾಂಗೀಯ ಅಧ್ಯಯನಗಳಿಗೆ ಮಾರ್ಗದರ್ಶಿಯಾಗಬಲ್ಲದು.

ಶಿವಮೊಗ್ಗ, ಚಿಕ್ಕಮಗಳೂರು, ಹಾಸನದ ಸಕಲೇಶಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ವಾಸಿಸುತ್ತಿರುವ ದೀವರ ಬಗ್ಗೆ ಇನ್ನೂ ಹೆಚ್ಚಿನ ಜನಾಂಗೀಯ, ಐತಿಹಾಸಿಕ ಅಧ್ಯಯನಕ್ಕೆ ಅವಕಾಶವಿದೆ ಎಂಬುದನ್ನು ಈ ಕೃತಿ ಸೂಚಿಸುತ್ತದೆ.

ಅಂಗಭಂಗದ ರಾಜ್ಯದಲ್ಲಿ

ಮತ್ತು ಇತರ ಮಕ್ಕಳ ನಾಟಕಗಳು
ಲೇ: ಕೃಷ್ಣಮೂರ್ತಿ ಬಿಳಿಗೆರೆ
ಪು: 92; ಬೆ: ರೂ. 60
ಪ್ರ: ನಮ್ಮ ಪ್ರಕಾಶನ
ಬಿಳಿಗೆರೆ, ತಿಪಟೂರು ತಾಲ್ಲೂಕು
ತುಮಕೂರು ಜಿಲ್ಲೆ
–572 114

ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಪ್ರಯೋಗ ಮತ್ತು ಕೃತಿಗಳನ್ನು ಕೊಟ್ಟಿರುವ ಕೃಷ್ಣಮೂರ್ತಿ ಬಿಳಿಗೆರೆ ಸಹಜ ಕೃಷಿಯಲ್ಲೂ ತಮ್ಮ ಪ್ರಯೋಗಗಳನ್ನು ನಡೆಸಿ ಆ ವಿಷಯದಲ್ಲೂ ಬರವಣಿಗೆ ಮಾಡಿದ್ದಾರೆ. ಇಲ್ಲಿರುವ ಮೂರು ಪುಟ್ಟ ನಾಟಕಗಳಲ್ಲಿ ‘ಅಂಗಭಂಗದ ರಾಜ್ಯದಲ್ಲಿ’ ಪ್ರಕೃತಿಯಲ್ಲಿ ಮನುಷ್ಯ ನಾಶಮಾಡಿದ ಜೀವಜಾಲವನ್ನು ಮತ್ತೆ ಸೃಷ್ಟಿಸುವ ಹುಣಸೆ ಮರದ ಹುಡುಗಿಯ ಕಥೆಯನ್ನು ಹೇಳುತ್ತದೆ.

ಇನ್ನೊಂದು ನಾಟಕ ‘ಕೇಡಾಳ ಕೆಪ್ಪರ್ಕ’ ಜನರಿಗೆ ಒಳಿತನ್ನು ಉಂಟುಮಾಡುವ ಪುಸ್ತಕಗಳನ್ನು ನಾಶ ಮಾಡುವವರ ಬಗ್ಗೆ ಇದೆ. ಪುಸ್ತಕಗಳಿಂದ ಸಿಗುವ ಖುಷಿ, ಜ್ಞಾನ, ಅದನ್ನು ಎಂದಿಗೂ ನಾಶ ಮಾಡಲಾಗದು ಎಂಬ ಸರಳ ಸಂದೇಶ ಮಕ್ಕಳಿಗೆ ಇಲ್ಲಿದೆ. ಸಂಗೀತ ನಾಟಕ ‘ಕತ್ತೆಯ ಹಾಡು’ ಕೂಡ ನಿರಂಕುಶ ಅಧಿಕಾರವನ್ನು ಅದರ ಮಿತಿಯನ್ನು, ಮನುಷ್ಯನ ಶ್ರಮದ ಮಹತ್ವ, ಅದರ ನಿರಂತರತೆಯನ್ನು ಸೂಚಿಸುವ ನಾಟಕ.

ಮನುಷ್ಯನ ಕೇಡು, ದುಷ್ಟತನವೇ ಇಲ್ಲಿನ ನಾಟಕಗಳ ಸ್ಥೂಲ ಹಂದರವನ್ನು ರೂಪಿಸಿದೆ. ಅದು ಎಂದಿಗೂ ಶಾಶ್ವತವಲ್ಲ ಎಂಬ ಆಶಯ ಇವುಗಳ ವಸ್ತು. ಈ ನಾಟಕಗಳ ಕಾವ್ಯ, ಸಂಗೀತದ ಗುಣ ಮಕ್ಕಳನ್ನು ಸೆಳೆಯಬಹುದು. ಅವುಗಳ ಸಂಕ್ಷಿಪ್ತ ಆಕಾರವೂ ಮಕ್ಕಳನ್ನು ಹಿಡಿದಿಡಲು ಸಹಾಯಕ. ಮಕ್ಕಳ ಕಲ್ಪನೆಗೆ ಈ ನಾಟಕಗಳ ಸರಳ ಕಥೆಗಳು ರೆಕ್ಕೆಪುಕ್ಕ ಮೂಡಿಸುತ್ತವೆ. ಹಾಗೆಯೇ ಅವರನ್ನು ಇನ್ನಷ್ಟು ಕ್ರಿಯಾಶೀಲರಾಗಿಸುವ ಶಕ್ತಿಯೂ ಇವುಗಳಿಗಿದೆ.

ಕಷ್ಟಕುಲದ ಕಥೆ
(ದಲಿತರ ಸಬಲೀಕರಣದ ಅಧ್ಯಯನಗಳು)
ಲೇ: ಟಿ.ಆರ್. ಚಂದ್ರಶೇಖರ
ಪು: 112; ಬೆ: ರೂ. 80
ಪ್ರ: ಲಡಾಯಿ ಪ್ರಕಾಶನ
ನಂ. 21, ಪ್ರಸಾದ್ ಹಾಸ್ಟೇಲ್,
ಗದಗ– 582 101

ಭಾರತಕ್ಕೆ ಸ್ವಾತಂತ್ರ್ಯ ಬಂದು 64 ವರ್ಷಗಳು ಆಗಿದ್ದರೂ ಕೆಳವರ್ಗದವರ ಹಾಗೂ ದಲಿತರ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳಲ್ಲಿ ಮಹತ್ವದ ಬದಲಾವಣೆಗಳು ಆಗಿಲ್ಲ. ಅವರ ಅಭಿವೃದ್ಧಿಯ ಕಥನದ ಅಧ್ಯಯನವನ್ನು ಟಿ.ಆರ್. ಚಂದ್ರಶೇಖರ ಇಲ್ಲಿ ಕೊಟ್ಟಿದ್ದಾರೆ. ಭಾರತದ ಮೇಲ್ವರ್ಗದವರು ಹಾಗೂ ದಲಿತರು ಪಡೆದ ಅವಕಾಶಗಳನ್ನು ಒಂದರ ಪಕ್ಕದಲ್ಲಿ ಒಂದನ್ನಿಟ್ಟು ನೋಡಿದಾಗ ಅದರಲ್ಲಿ ತಾಳಮೇಳವೇ ಕಾಣಿಸುವುದಿಲ್ಲ ಎಂಬುದನ್ನು ಈ ಅಧ್ಯಯನ ತೋರಿಸುತ್ತದೆ.

ವಚನಕಾರರಿಂದ ಆರಂಭವಾದ ಈ ಅಧ್ಯಯನವು ಈ ವಚನ ಚಳವಳಿಯಲ್ಲಿ ಅಲ್ಲಿನ ದಲಿತರ ಸಮಸ್ಯೆಯನ್ನು, ಅದರ ಮಿತಿಗಳನ್ನು ಮುಖ್ಯವಾಗಿ ಗುರುತಿಸುತ್ತದೆ. ಅಂಬೇಡ್ಕರ್ ಅವರ ಚಿಂತನೆ, ಭಾರತದ ಸಂವಿಧಾನ, ಜನಗಣತಿ ವರದಿಗಳು, ಯೋಜನೆಯ ವರದಿಗಳು ಹಾಗೂ ಇನ್ನಿತರ ದಲಿತ ಅಧ್ಯಯನಗಳನ್ನು ಆಧರಿಸಿ ಇದನ್ನು ಮಾಡಲಾಗಿದೆ. ಕೊನೆಗೂ ದೇಶದಲ್ಲಿ ಹಲವು ಯೋಜನೆಗಳು ಬಂದರೂ ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಿಲ್ಲ ಎಂಬುದನ್ನು ಈ ಪುಸ್ತಕ ವಿವರವಾಗಿ, ನಿಖರವಾಗಿ ದಾಖಲಿಸಿದೆ. ಜೊತೆಗೆ ದಲಿತರು ಮತ್ತು ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರ್ಕಾರಗಳ ಸಂವೇದನಾ ಶೂನ್ಯತೆಯನ್ನು, ಅವುಗಳ ಅಸಮಾನತೆಯ ನಿಲುವನ್ನು ಕೂಡ.

ದಲಿತರಿಗೆ ಆಗಿರುವ ಅನ್ಯಾಯದ ಚಿತ್ರಣವನ್ನು ಕೊಡುವ ಚಂದ್ರಶೇಖರ ಅವರ ಈ ಅಧ್ಯಯನವು ಅತ್ಯಂತ ಅಕಡೆಮಿಕ್ ಆಗಿದ್ದು, ಪೆಡಸಾದ ಬರವಣಿಗೆಯಿಂದ ಕೂಡಿದೆ. ಈ ಕಾರಣದಿಂದಾಗಿ ಯಾರನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಯನವನ್ನು ಮಾಡಲಾಗಿದೆಯೋ ಅವರನ್ನು ಇದು ಮುಟ್ಟದಿರುವುದೂ ಸಾಧ್ಯ. ಯಾಕೆಂದರೆ ಗುರಿಯಷ್ಟೇ ದಾರಿಯೂ ಮುಖ್ಯ. ಆದರೆ, ಎಲ್ಲರ ಗಮನಕ್ಕೆ ಇದು ಅರ್ಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.