ಶನಿವಾರ, ಮಾರ್ಚ್ 6, 2021
28 °C

ಮೊಬೈಲ್‌ ಮಾರಾಟ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಬೈಲ್‌ ಮಾರಾಟ ಏರಿಕೆ

ನವದೆಹಲಿ (ಪಿಟಿಐ):  ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ  ಭಾರತದ ಮೊಬೈಲ್‌ ಫೋನ್‌ ಮಾರುಕಟ್ಟೆ ವಹಿವಾಟು ಶೇ 4ರಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು  ವರದಿಯೊಂದು ಹೇಳಿದೆ.ಎಲ್ಲ ಸೌಲಭ್ಯಗಳನ್ನು ಹೊಂದಿದ ಸ್ಮಾರ್ಟ್‌ ಫೋನ್‌ಗಳು ಐದು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ  ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಾರಣ 2016ರಲ್ಲಿ ಒಟ್ಟು 25 ಕೋಟಿ ಮೊಬೈಲ್‌  ಫೋನ್ ಮಾರಾಟವಾಗುವ   ನಿರೀಕ್ಷೆ ಇದೆ ಎಂದು ಸೈಬರ್‌ ಮಿಡಿಯಾ ರಿಸರ್ಚ್‌ ಸಂಸ್ಥೆ ನಡೆಸಿದ  ವರದಿ ಹೇಳಿದೆ.2015ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾದ ಪ್ರತಿ ನಾಲ್ಕು ಮೊಬೈಲ್‌ ಫೋನ್‌ಗಳಲ್ಲಿ ಮೂರು  ಫೋನ್‌ಗಳ ಬೆಲೆ ₹10 ಸಾವಿರಕ್ಕಿಂತ ಅಗ್ಗವಾಗಿತ್ತು. 2015ರಲ್ಲಿ  ಸ್ಮಾರ್ಟ್‌ ಫೋನ್‌ಗಳ ಮಾರಾಟ ಶೇ32ರಷ್ಟು ಏರಿಕೆಯಾಗಿದ್ದು,   ಫೀಚರ್‌ ಮೊಬೈಲ್‌ ಫೋನ್‌ ಮಾರಾಟ  ಶೇ 17 ಕುಸಿದಿದೆ.2016ರಲ್ಲಿ ಐದು ಸಾವಿರ ರೂಪಾಯಿಗಿಂತ ಅಗ್ಗದ ಬೆಲೆಗೆ ದೊರೆಯುವ  ಸ್ಮಾರ್ಟ್‌ ಫೋನ್‌ಗಳು ಪ್ರತಿಯೊಬ್ಬರ ಕೈಯಲ್ಲೂ ರಾಜಾಜಿಸಲಿವೆ. ಅದರೊಂದಿಗೆ  ಯುವ ಜನಾಂಗವನ್ನು ಆಕರ್ಷಿಸುತ್ತಿರುವ ಹೊಸ 4ಜಿ ಫೋನುಗಳಿಗೆ ಭಾರಿ ಬೇಡಿಕೆ ಕುದುರಲಿದೆ. ಪ್ರಸಕ್ತ  ವರ್ಷದಲ್ಲಿ  ಐದು ಕೋಟಿ  4ಜಿ ಫೋನ್‌ ಮಾರಾಟವಾಗುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.