ಸೋಮವಾರ, ಜೂನ್ 21, 2021
30 °C

ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದರೆ ಶಿಸ್ತುಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಚುನಾವಣಾ ಕೆಲಸ ಕಾರ್ಯ­ಗಳನ್ನು ಎಚ್ಚರಿಕೆ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿ­ಸ­ಬೇಕು. ಚುನಾವಣೆಯು ಶಾಂತಿ ಹಾಗೂ ಮುಕ್ತವಾಗಿ ನಡೆಯುವಂತೆ ನೋಡಿ­ಕೊಳ್ಳ­ಬೇಕು ಎಂದು ಚುನಾವಣಾಧಿ­ಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಡಿ.ಎಸ್‌. ವಿಶ್ವನಾಥ್‌ ಸೂಚಿಸಿದರು.ಜಿಲ್ಲಾ ಕಂದಾಯ ಭವನದ ಸಭಾಂ­ಗಣದಲ್ಲಿ ಸೋಮವಾರ ನಡೆದ ಚುನಾ­ವಣಾ ವಿವಿಧ ಸಮಿತಿಗಳ ನೋಡೆಲ್ ಅಧಿಕಾರಿಗಳು, ಸಹಾಯಕ ಚುನಾವಣಾ­ಧಿಕಾರಿಗಳು, ಇಓ, ತಹಶೀಲ್ದಾರ್‌ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚುನಾವಣಾ ಕಾರ್ಯಕ್ಕೆ ನೇಮಕ­ಗೊಂಡ ಸಿಬ್ಬಂದಿ ಅಗತ್ಯ ಬಿದ್ದಲ್ಲಿ ವಾರದ ಎಲ್ಲ ದಿನವೂ ದಿನದ 24 ಗಂಟೆ ಕಾರ್ಯ­ನಿರ್ವಹಿಸಬೇಕಿದ್ದು, ಚುನಾ­ವಣಾ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿ ಲೋಪ­ವೆಸ­ಗುವ ಅಧಿಕಾರಿಗಳು ಶಿಸ್ತು ಕ್ರಮ ಎದು­ರಿಸ­­ಬೇಕಿರುತ್ತದೆ ಎಂದು ಎಚ್ಚರಿಸಿದರು.ಮತದಾರರಲ್ಲಿ ಜಾಗೃತಿ ಮೂಡಿಸಿ:  18 ವರ್ಷ ತುಂಬಿ ಮತದಾನಕ್ಕೆ ಅರ್ಹತೆ ಪಡೆದು ಇದುವರೆಗೂ ಮತ­ದಾರರ ಪಟ್ಟಿಗೆ ಸೇರ್ಪಡೆಗೊಳ್ಳದ ಮತ­ದಾರರನ್ನು ಸೇರ್ಪಡೆ­ಗೊಳಿಸಲು ಹಾಗೂ ಮತದಾರರ ತಿದ್ದುಪಡಿ­ಗಾಗಿ ಭಾನು­ವಾರ ಜಿಲ್ಲೆಯಾದ್ಯಂತ  ವಿಶೇಷ ಆಂದೋಲನವನ್ನು ಹಮ್ಮಿಕೊಂಡು ನೋಡಲ್ ಅಧಿಕಾರಿಗಳನ್ನು ನಿಯೋಜಿ­ಸಲಾಗಿತ್ತು. ಇದಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆ­ತಿದೆ. ಹೊಸ­ದಾಗಿ ಮತದಾರರ ಪಟ್ಟಿಗೆ ಸೇರ್ಪ­ಡೆಗೊಳ್ಳಲು 14,436 ಅರ್ಜಿಗಳು  ನಮೂನೆ 6 ರಲ್ಲಿ ಸ್ವೀಕೃತಗೊಂಡಿವೆ ಎಂದು ಅವರು ಮಾಹಿತಿ ನೀಡಿದರು.ಮಾಗಡಿಯಲ್ಲಿ 3,300, ಕನಕಪುರ 3,093, ರಾಮನಗರ 3,671 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 4,372 ನಮೂನೆ 6 ಸ್ವೀಕೃತಗೊಂಡಿವೆ. ವಿಶೇಷ ಆಂದೋಲನದಲ್ಲಿ ಹಾಜರಿರ ಪಿ.ಡಿ.ಓ, ವಿ.ಎ., ಗಳಿಗೆ ನೋಟೀಸ್ ಜಾರಿ­ಮಾಡಲು ಜಿಲ್ಲಾಧಿಕಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.ಇದೇ 16 ಕಡೆಯ ದಿನ: ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಇದೇ 16 ಕಡೆಯ ದಿನವಾಗಿದ್ದು, ಈ ಸ್ವೀಕೃತ­ಗೊಂಡ ಅರ್ಜಿಗಳನ್ನು ಇದೇ 20 ರೊಳಗೆ ದಾಖಲೀಕರಿಸಬೇಕಿದೆ. ಇದ­ಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬ­ರಂತೆ ಅಧಿಕಾರಿಗಳನ್ನು ನೇಮಕ ಮಾಡಿ­ರು­ವುದಾಗಿ ಜಿಲ್ಲಾಧಿಕಾರಿ ಹೇಳಿದರು.ನೇಮಕಗೊಂಡ ಅಧಿಕಾರಿಗಳು: ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ತೋಟ­ಗಾರಿಕಾ ಇಲಾಖಾ ಉಪ ನಿರ್ದೇಶಕಿ ಹೇಮಾ ಹಾಗೂ ಭೂ­ದಾಖಲೆಗಳ ಸಹಾ­ಯಕ ನಿರ್ದೇಶಕ ಸೈಯದ್ ಹುಸೇನ್, ರಾಮನಗರ ಕ್ಷೇತ್ರಕ್ಕೆ ಉದ್ಯೋಗ ವಿನಿಯಮ ಅಧಿಕಾರಿ ಎಸ್.ಜೆ.­­ಹೇಮಚಂದ್ರ, ಮಹಿಳಾ ಮತ್ತು ಮಕ್ಕಳ ಇಲಾಖಾ ಉಪನಿರ್ದೇಶಕಿ ಚಂದ್ರಾ, ಕನಕಪುರ ಕ್ಷೇತ್ರಕ್ಕೆ ಕೃಷಿ ಇಲಾಖೆ ಕೇಂದ್ರ ಸ್ಥಾನಿಕ ಸಹಾ­ಯಕ ಗೋಪಾಲಗೌಡ, ಡಿಎಸ್.ಡಬ್ಯ್ಲೂ ರಂಗೇ­-­ಗೌಡ ಹಾಗೂ ಚನ್ನಪಟ್ಟಣ ಕ್ಷೇತ್ರಕ್ಕೆ ರೇಷ್ಮೆ ಇಲಾ­ಖೆಯ ಉಪ­ನಿರ್ದೇ­ಶಕ ಲಕ್ಷ್ಮೀಪತಿ ರೆಡ್ಡಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಕಾರ್ಯ­ಪಾಲಕ ಎಂಜಿನಿಯರ್‌ ರವಿಶಂಕರ್ ಅವರನ್ನು ನೇಮಿ­ಸಲಾಗಿದೆ ಎಂದು ತಿಳಿಸಿದರು.ಕೇಂದ್ರಸ್ಥಾನದಲ್ಲಿಯೇ ಇರಲು ಸೂಚನೆ: ಚುನಾವಣೆ ಪ್ರಕ್ರಿಯೆ ಮುಗಿಯು­ವವ­ರೆಗೂ ಎಲ್ಲಾ ಅಧಿಕಾರಿ ನೌಕರರು ಕಡ್ಡಾ­ಯ­ವಾಗಿ ಕೇಂದ್ರ ಸ್ಥಾನದಲ್ಲಿಯೇ ಲಭ್ಯರಿ­ರಬೇಕು ಎಂದು ಸೂಚನೆ ನೀಡಿ­ದರು. ಯಾವುದೇ ಕಾರ­ಣಕ್ಕೂ ಮೊಬೈಲ್‌ ಸ್ವಿಚ್‌ ಆಫ್‌ ಮಾಡ­ಬಾ­ರದು. ಕರೆ ಬಂದ ಕೂಡಲೇ ಸ್ವೀಕರಿಸ­ಬೇಕು. ಕೇಂದ್ರ ಸ್ಥಾನ ಬಿಟ್ಟು ಹೋಗ­ಬೇಕಿ­ರುವವರು ನನ್ನ ಅನುಮತಿ ಪಡೆಯ­ಬೇಕಾ­ದದ್ದು ಕಡ್ಡಾಯ ಎಂದು ಅವರು ಹೇಳಿದರು.ಈಗಾಗಲೇ ಕ್ಷೇತ್ರದ ಹಲವೆಡೆ ಚೆಕ್‌ಪೋಸ್ಟ್‌­ಗಳನ್ನು ಗುರುತಿಸಿದ್ದು, 25 ‘ಫ್ಲೈಯಿಂದ್‌ ಸ್ಕ್ವಾಡ್‌’ ಹಾಗೂ 15 ನೀತಿ ಸಂಹಿತೆ ಜಾರಿ ಘಟಕಗಳನ್ನು ರಚನೆ ಮಾಡಲಾಗಿದೆ ಎಂದ ಅವರು, ಚೆಕ್‌­ಪೋಸ್ಟ್‌ಗಳಲ್ಲಿ ತಾತ್ಕಾಲಿಕ ಕಟ್ಟಡ ವ್ಯವಸ್ಥೆ ಮಾಡುವಂತೆ ಲೋಕೋಪ­ಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು.ರಾಜಕೀಯ ಪಕ್ಷಗಳು, ಸಭೆ, ಸಮಾ­ರಂಭ, ಮೆರವಣಿಗೆ, ಮುಂತಾದವು­ಗಳನ್ನು ಮಾಡಲು ಮುಂಚಿತವಾಗಿ ಅನು­ಮತಿ ಪಡೆಯುವಂತೆ ತಿಳಿ­ಸಿದ ಅವರು ಚುನಾವಣಾ ಅಧಿಕಾರಿ ಸಿಬ್ಬಂದಿ ನೇರ­ವಾಗಿ ಮಾಧ್ಯಮದೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ಇದ­ಕ್ಕಾಗಿ ಜಿಲ್ಲಾಧಿಕಾರಿ, ‘ಸ್ವೀಪ್’ ಸಂಬಂಧಿಸಿದಂತೆ ಸಿ.ಇ.ಓ, ರಕ್ಷಣಾ ಕಾರ್ಯಕ್ಕೆ ಸಂಬಂಧಿ­ಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾ­ಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಮಾತ್ರ ಮಾಹಿತಿ ನೀಡಬಹುದಾಗಿದೆ ಎಂದು ಅವರು ಸಭೆಯಲ್ಲಿ ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಎಸ್ಪಿ ಅನುಪಮ್ ಅಗ್ರವಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಸವರಾಜು, ಸಿಪಿಓ ಧನುಷ್, ಜಿ.ಪಂ ಉಪಕಾರ್ಯದರ್ಶಿ ಆರ್.ಲತಾ, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ಗಳು, ಇ.ಓ ಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಚುನಾವಣಾ ನೋಡೆಲ್ ಅಧಿಕಾರಿಗಳು, ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.