ಭಾನುವಾರ, ಮೇ 16, 2021
22 °C

ಮೊಬೈಲ್ ಕರೆ ದರ ಮತ್ತಷ್ಟು ದುಬಾರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗ್ರಾಮೀಣ ಕಾರ್ಯನಿರ್ವಹಣಾ ಶುಲ್ಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮತ್ತೊಂದು ಸುತ್ತಿನ ಕರೆ ದರ ಏರಿಕೆ ಅನಿವಾರ್ಯ ಎಂಬ ಸುಳಿವನ್ನು ದೂರವಾಣಿ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್ ನೀಡಿದೆ.`ಕರೆ ಮತ್ತು ಎಸ್‌ಎಂಎಸ್ ಸೇವೆಗಳನ್ನು ಮಾತ್ರ ಬಳಸುತ್ತಿರುವ ಗ್ರಾಮೀಣ ಮಾರುಕಟ್ಟೆಯಲ್ಲಿ ನೆಲೆನಿಲ್ಲುವುದು ಕಷ್ಟವಾಗಿದೆ. ಗ್ರಾಮೀಣ ಮೊಬೈಲ್ ಕಾರ್ಯನಿರ್ವಹಣಾ ಶುಲ್ಕ ಗಣನೀಯವಾಗಿ ಹೆಚ್ಚುತ್ತಿದ್ದು, ವರಮಾನ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಆಯ್ದ ದೂರಸಂಪರ್ಕ ವೃತ್ತಗಳಲ್ಲಿ ಕರೆ ದರ ಏರಿಕೆ ಅನಿವಾರ್ಯ~ ಎಂದು ಭಾರ್ತಿ ಏರ್‌ಟೆಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮಿತ್ತಲ್ ಹೇಳಿದ್ದಾರೆ.ಇತ್ತೀಚೆಗಷ್ಟೇ ಏರ್‌ಟೆಲ್, ವೊಡಾಫೋನ್, ಡೊಕೊಮೊ, ರಿಲಯನ್ಸ್ ಮತ್ತು ಐಡಿಯಾ ಸಂಸ್ಥೆಗಳು ಕರೆ ದರವನ್ನು ಶೇ 20ರಿಂದ ಶೇ 50ರಷ್ಟು ಹೆಚ್ಚಿಸಿದ್ದವು. ದರ ಏರಿಕೆ ಕುರಿತು ಸೂಕ್ತ ಕಾರಣ ನೀಡುವಂತೆ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ `ಟ್ರಾಯ್~ ಈಗಾಗಲೇ ಸೇವಾ ಸಂಸ್ಥೆಗಳಿಗೆ ಸೂಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.