ಶುಕ್ರವಾರ, ಜೂನ್ 18, 2021
24 °C

ಮೊಬೈಲ್ ಚಟ; ಸಂವೇದನೆಗೆ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಅತಿಯಾದ ಇಂಟರ್ನೆಟ್ ಬಳಕೆ ಮತ್ತು ಮೊಬೈಲ್ ಚಟದಿಂದ ಯುವ ಜನತೆ ಸಹಜ ವರ್ತನೆ ಹಾಗೂ ಸಂವೇ­ದನೆ ಕಳೆದುಕೊಳ್ಳುತ್ತಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಸುಜಯಾ ಕಳವಳ ವ್ಯಕ್ತಪಡಿಸಿದರು.ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗವು ಆಯೋಜಿಸಿರುವ ‘ಯುವ ಜನತೆಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಚಟದ ಮನೋ ವೈಜ್ಞಾನಿಕ ಪರಿ­ಣಾಮ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ಇಂಟರ್ನೆಟ್ ಮತ್ತು ಮೊಬೈಲ್‌­ನಲ್ಲಿ ಹೆಚ್ಚಾಗಿ ಮುಳುಗುವ ಜನರು ಮಾನವ ಸಹಜ ಸಾಮಾಜಿಕ ಸಂಬಂಧವನ್ನು ದೂರ ಮಾಡಿಕೊಳ್ಳುವ ಅಪಾಯವಿರುತ್ತದೆ ಎಂದರು.ಮನಃಶಾಸ್ತ್ರಜ್ಞೆ ಡಾ.ಪ್ರೀತಿ ಪೈ ಅವೈಜ್ಞಾನಿಕ ಮೊಬೈಲ್ ಬಳಕೆ ಅನಾಹುತದ ಬಗ್ಗೆ ಮಾತನಾಡಿದರು.ಬಿಡಿಎ ಸಹಾಯಕ ಆಯುಕ್ತ ಎಂ.ಎಸ್.ಎನ್. ಬಾಬು, ಕಲ್ಪತರು ವಿದ್ಯಾಸಂಸ್ಥೆ ಪದಾಧಿಕಾರಿ­ಗಳಾದ ಶಿವಸ್ವಾಮಿ, ಜಗದೀಶ ಮೂರ್ತಿ, ರುದ್ರಮುನಿಸ್ವಾಮಿ, ಕೆಐಟಿ ಪ್ರಾಂಶುಪಾಲ ಡಾ. ಶಶಿಧರ್, ಅಡವಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಸೈಯದ್ ಮುಸ್ತಾಕ್ ಅಹಮದ್, ಮನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವಿ.ಎನ್.ಬಸವರಾಜಪ್ಪ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.