ಬೆಂಗಳೂರು: 2016ನೇ ಸಾಲಿನ ‘ಡಿ. ದೇವರಾಜ ಅರಸು ಪ್ರಶಸ್ತಿ’ಯನ್ನು ಹಿರಿಯ ರಾಜಕಾರಣಿ ಬಿ.ಎ. ಮೊಹಿದ್ದೀನ್ ಅವರಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ.

ಅರಸು ಅವರ ಸಿದ್ಧಾಂತ, ತತ್ವಾದರ್ಶಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗೆ ನೀಡಲಾಗುತ್ತಿರುವ ಪ್ರಶಸ್ತಿಯು ₹ 2 ಲಕ್ಷ ನಗದು ಒಳಗೊಂಡಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಇದೇ 20ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅರಸು ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು ಎಂದು ಸಚಿವರು ತಿಳಿಸಿದರು.

ಹಿರಿಯ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಅವರ ನೇತೃತ್ವದ ಆಯ್ಕೆ ಸಮಿತಿ ಮೊಹಿದ್ದೀನ್ ಹೆಸರು ಶಿಫಾರಸು ಮಾಡಿತ್ತು ಎಂದರು.

ಮೊಹಿದ್ದೀನ್ ಪರಿಚಯ: ಅರಸು ಪ್ರಶಸ್ತಿಗೆ ಆಯ್ಕೆಯಾದ ಬಿ.ಎ. ಮೊಹಿದ್ದೀನ್ 1938ರಲ್ಲಿ ಮಂಗಳೂರಿನ ಸಮೀಪದ ಬಜ್ಪೆಯಲ್ಲಿ ಜನಿಸಿದವರು. ಚಿಕ್ಕಮಗಳೂರು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

1971ರಲ್ಲಿ ಯುವ ಕಾಂಗ್ರೆಸ್ಗೆ ಸೇರಿದ ಮೊಹಿದ್ದೀನ್, 1978ರಲ್ಲಿ ಬಂಟ್ವಾಳ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1996ರಲ್ಲಿ ಜೆ.ಎಚ್. ಪಟೇಲ್ ಮಂತ್ರಿಮಂಡಲದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು.

ಅರಸು ವಿದ್ಯಾರ್ಥಿ ನಿಲಯ: ಅರಸು ನೆನಪನ್ನು ಚಿರಸ್ಥಾಯಿಗೊಳಿಸಲು ರಾಜ್ಯದ 2,408 ವಿದ್ಯಾರ್ಥಿ ನಿಲಯಗಳಿಗೆ ‘ಡಿ. ದೇವರಾಜ ಅರಸು ವಿದ್ಯಾರ್ಥಿನಿಲಯ’ ಎಂದು ಮರು ನಾಮಕರಣ ಮಾಡಲಾಗುವುದು. ಅರಸು ಅವರ ವ್ಯಕ್ತಿತ್ವ, ಸಾಧನೆ ಪರಿಚಯಿಸುವ ‘ಅರಸು ಯುಗ’, ‘ಒಡನಾಡಿ ಅರಸು’, ‘ವಿಧಾನಮಂಡಲದಲ್ಲಿ ಅರಸು’, ‘ಅರಸು ಮತ್ತು ರಾಜಕೀಯ’, ‘ಅರಸು ಮತ್ತು ಭೂಸುಧಾರಣೆ’, ‘ಅರಸು ನವಯುಗ ನಾಯಕ’, ‘ಅರಸು ಯುಗದ ಅರಣ್ಯ ಪರ್ವ’, ‘ಕರ್ನಾಟಕಕ್ಕೆ ಶುಭವಾಗಲಿ’, ‘ಕರ್ನಾಟಕದ ಅರಸು’, ‘ಪ್ರಗತಿಪಥ’ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.

ಅರಸು ಚಲನಚಿತ್ರ: ದೇವರಾಜ ಅರಸು ವ್ಯಕ್ತಿತ್ವ ಪರಿಚಯಿಸುವ ಚಲನಚಿತ್ರ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಅರಸು ಚಲನಚಿತ್ರದ ಚಿತ್ರಕತೆ ಸಿದ್ಧಪಡಿಸಿ ವಾರ್ತಾ ಇಲಾಖೆಗೆ ಸಲ್ಲಿಸಿದ್ದರು. ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಚಲನಚಿತ್ರದ ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನು ಆಯ್ಕೆಗೆ ಅವಕಾಶ ನೀಡದೇ ಏಕವ್ಯಕ್ತಿಗೆ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು.

ಇದರಿಂದಾಗಿ ಚಿತ್ರಕತೆ, ಸಂಭಾಷಣೆ ಕಳಿಸುವಂತೆ ಆಸಕ್ತರಿಗೆ ಆಹ್ವಾನ ನೀಡಲಾಗಿದೆ. ಉತ್ತಮ ಚಿತ್ರಕತೆ ಆಯ್ಕೆ ಮಾಡಿದ ಬಳಿಕ ಯಾರಿಂದ ಚಿತ್ರ ನಿರ್ದೇಶನ ಮಾಡಿಸಬೇಕು ಎಂದು ತೀರ್ಮಾನಿಸಲಾಗುವುದು ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.