ಬುಧವಾರ, ಜನವರಿ 22, 2020
22 °C

ಮೋದಿ ಹಿಟ್ಲರ್‌, ಮುಲಾಯಂ ಮುಸ್ಸೋಲಿನಿ: ಬೇನಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಿಟ್ಲರ್‌ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಮುಸ್ಸೋಲಿನಿ ಎಂದು ಕೇಂದ್ರ ಉಕ್ಕು ಸಚಿವ ಬೇನಿ ಪ್ರಸಾದ್ ವರ್ಮಾ ಹೇಳಿದ್ದಾರೆ.ಇಬ್ಬರು ನಾಯಕರೂ ಏಕ ಮನೋ­­­­ಭಾವ ಹೊಂದಿದ್ದಾರೆ. ಕೋಮು ಆಧರಿಸಿ ಮತಗಳ ಧ್ರುವೀಕರಣಕ್ಕೆ ಯತ್ನಿ­ಸು­ತ್ತಿದ್ದಾರೆ ಎಂದು ಬೇನಿ ಆರೋಪಿ­ಸಿದ್ದಾರೆ.‘ಭಾರತದ ರಾಜಕಾರಣದಲ್ಲಿ ಹಿಟ್ಲರ್‌ ಜನಿಸಿದ್ದಾರೆ. ಹಾಗೆಯೇ ಉ.ಪ್ರದೇಶದಲ್ಲಿ ಮುಸ್ಸೋಲಿನಿ  ಜನಿಸಿ­ದ್ದಾರೆ. ಇಬ್ಬರು ನಾಯ­ಕರ ನಡುವೆ ಗೆಳೆ­ತನ ಇದೆ. ಇಬ್ಬರ ಅವತಾ­ರವೂ ಒಂದೇ ಆಗಿದೆ’ ಎಂದು ಬೇನಿ ಹೇಳಿದ್ದಾರೆ. ಇತ್ತೀಚೆಗೆ ಮುಜಫ್ಫರ್‌­ನಗರದಲ್ಲಿ ನಡೆದ ಗಲಭೆಗೆ ಹಿಟ್ಲರ್‌ ಮತ್ತು ಮುಸ್ಸೋಲಿನಿ  ನಡುವಿನ ಗೆಳೆತನವೇ ಕಾರಣ ಎಂದೂ ಬೇನಿ ಟೀಕಿಸಿದ್ದಾರೆ.ಮೋದಿ ಗುಜರಾತ್‌ನ ನಿರಂಕುಶಾಧಿ­ಕಾರಿ­. ಮುಸ್ಲಿಮರಿಗೆ ಹಿಟ್ಲರ್‌ ವಿರುದ್ಧ ಮಾತ­ನಾಡುವ ಧೈರ್ಯ ಇಲ್ಲ. ಹಿಟ್ಲರ್‌ ಭೀತಿ ಯಾವ ಮಟ್ಟ­ದಲ್ಲಿದೆಯೆಂದರೆ ಬಿಜೆಪಿ ಅಥವಾ ಆರ್‌ಎಸ್‌ಎಸ್‌ನಲ್ಲಿ ಅವರ ಬಗ್ಗೆ ಯಾರೂ ಮಾತನಾ­ಡುವುದಿಲ್ಲ ಎಂದು ಬೇನಿ ಹೇಳಿದ್ದಾರೆ.

ಸರ್ದಾರ್‌ ಪಟೇಲ್‌ ಬಗ್ಗೆ ಮೋದಿ ಅವ­ರಿಗೆ ಹೊಸದಾಗಿ ಪ್ರೀತಿ ಆರಂಭ­ವಾ­ಗಿದೆ. ಆದರೆ ಅವರು ಮಹಾತ್ಮಾ ಗಾಂಧಿ ಬಗ್ಗೆ ಮಾತನಾಡುವುದಿಲ್ಲ ಎಂದು ಬೇನಿ ಟೀಕಿಸಿದ್ದಾರೆ.ಎಲ್‌.ಕೆ. ಅಡ್ವಾಣಿ ವಿರುದ್ಧವೂ ಬೇನಿ ಟೀಕೆ ಮಾಡಿ­ದ್ದಾರೆ. ಮೋದಿ ಅವರನ್ನು 2014ರ ಲೋಕಸಭೆ ಚುನಾವಣೆಯ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿದ ಬಿಜೆಪಿ ಸಂಸದೀಯ ಪಕ್ಷದ ಸಭೆಗೆ ಅಡ್ವಾಣಿ ಹೋಗಿರಲಿಲ್ಲ. ಮೋದಿ ನೇಮ­ಕ­ವನ್ನು ವಿರೋಧಿಸಿ ಅವರು ರಾಜೀ­ನಾ­ಮೆ­ಯನ್ನೂ ನೀಡಿದ್ದರು. ಆದರೆ ಈಗ ಅದೇ ಅಡ್ವಾಣಿ ಏಕತಾ ಓಟಕ್ಕೆ ಚಾಲನೆ ನೀಡಿದ್ದಾರೆ ಎಂದು ಬೇನಿ ಟೀಕಿಸಿದ್ದಾರೆ.ಬಿಜೆಪಿ ಖಂಡನೆ: ಮೋದಿ ಅವರನ್ನು ಹಿಟ್ಲರ್‌ಗೆ ಹೋಲಿಸಿರುವುದನ್ನು ಬಿಜೆಪಿ ಖಂಡಿಸಿದೆ. ‘ಇಂತಹ ಹೇಳಿಕೆ ನೀಡುವ ಮೊದಲು ಮೋದಿ ಜನಪ್ರಿಯತೆ ಬಗ್ಗೆ ಬೇನಿ ಯೋಚಿಸ­ಬೇ­ಕಿತ್ತು’ ಎಂದು ಬಿಜೆಪಿ  ವಕ್ತಾರ ವಿಜಯ ಬಹದೂರ್‌ ಪಾಠಕ್‌ ಹೇಳಿ­ದ್ದಾರೆ. ಬಿಜೆಪಿ ಮತ್ತು ಎಸ್‌ಪಿ ನಡುವೆ ಒಪ್ಪಂದವಾಗಿದೆ ಎಂದು ಆರೋ­ಪಿ­ಸು­ವಾಗ ಬೇನಿ ಅವರ ಕಾಂಗ್ರೆಸ್‌ ಪಕ್ಷವೇ ಮುಲಾಯಂ ಅವರಿಂದ ಬಾಹ್ಯ ಬೆಂಬಲ ಪಡೆದುಕೊಳ್ಳುತ್ತಿದೆ ಎಂಬು­ದನ್ನು ಬೇನಿ  ಪ್ರಸಾದ್‌ ವರ್ಮಾ ಮರೆಯಬಾರದು ಎಂದೂ ಪಾಠಕ್‌ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷವೇ ಬೇನಿ ಅವರನ್ನು ಗಂಭೀರವಾಗಿ ಪರಿಗಣಿಸು­ವುದಿಲ್ಲ ಎಂದು ಪಾಠಕ್‌ ಕುಟುಕಿದ್ದಾರೆ.

ಪ್ರತಿಕ್ರಿಯಿಸಿ (+)