ಹುಬ್ಬಳ್ಳಿ: ಎಲ್ಲವೂ ಅಂದುಕೊಂಡಂತೆ ನಡೆದರೆ ರಾಜ್ಯದ ಮೊದಲ ಮೋನೋ ರೈಲು ಯೋಜನೆಗೆ ಶೀಘ್ರವೇ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಲಿದ್ದಾರೆ.

ಈ ಕುರಿತು ಚರ್ಚಿಸಲು ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಚೇರಿಗೆ ಮಂಗಳವಾರ ನವದೆಹಲಿಯ ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ರಂಗನಾಥ ಕೆ.ಜಿ. ಭೇಟಿ ನೀಡಿದ್ದರು. ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ಪಾಟೀಲ ಸೇರಿದಂತೆ, ಕಮೀಷನರ್ ಹಾಗೂ ಎಂಜಿನಿಯರ್ಗಳ ಜೊತೆ ಮೋನೋ ರೈಲು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದರು.

ಹುಬ್ಬಳ್ಳಿ-ಧಾರವಾಡ ನಡುವಿನ ಮೋನೋ ರೈಲು ಸಂಪರ್ಕ, ಎರಡೂ ನಗರದಲ್ಲೂ ಜನಸಂದಣಿ ಹೆಚ್ಚಿಗೆ ಇರುವ ಹಾಗೂ ಬಸ್ ವ್ಯವಸ್ಥೆ ಇಲ್ಲದ ಪ್ರದೇಶಗಳಿಗೆ ರೈಲುಮಾರ್ಗ ನಿರ್ಮಾಣ, ಯೋಜನೆ ಅನುಷ್ಠಾನಕ್ಕೆ ಬೇಕಾಗಿರುವ ಭೂಮಿ, ಖರ್ಚು ವೆಚ್ಚ, ವಿವಿಧ ಮೂಲಗಳ ಸಾಲ ಸೌಲಭ್ಯ, ಹಣ ಹೂಡುವ ವಿದೇಶಿ ಕಂಪೆನಿಗಳ ಆಸಕ್ತಿ ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಂಗನಾಥ ಕೆ.ಜಿ. `ಅವಳಿ ನಗರದಲ್ಲಿ ಮೋನೋ ರೈಲು ಯೋಜನೆಯ ಅನುಷ್ಠಾನದ ಸಾಧ್ಯತೆ ಬಗ್ಗೆ ಇದು ಕೇವಲ ಪ್ರಾಥಮಿಕ ಚರ್ಚೆಯಾಗಿದೆ. ಈ ಕುರಿತು ಮಾಹಿತಿ ಸಂಗ್ರಹಿಸಲಾಗಿದ್ದು, ಇನ್ನು ಹತ್ತು ದಿನಗಳಲ್ಲಿ ಕೇಂದ್ರದ ಉನ್ನತಾಧಿಕಾರಿಗಳು ಹಾಗೂ ತಂತ್ರಜ್ಞರ ತಂಡದ ಜೊತೆ ಬಂದು ಯೋಜನೆ ಅನುಷ್ಠಾನದ ಸಂಪೂರ್ಣ ಮಾಹಿತಿ ನೀಡಲಾಗುವುದು. ಜೊತೆಗೆ ರೈಲುಮಾರ್ಗದ ಭೂಮಿ ಪರಿಶೀಲನೆ, ಯೋಜನೆ ಪೂರೈಸಲು ಬೇಕಾದ ಅವಧಿ ಮುಂತಾದ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಗುವುದು~ ಎಂದು ಹೇಳಿದರು.

ಕಿ.ಮೀಗೆ ರೂ 140 ಕೋಟಿ ವೆಚ್ಚ
ಮೋನೋ ರೈಲುಮಾರ್ಗ ನಿರ್ಮಾಣ ವೆಚ್ಚದ ಬಗ್ಗೆ ವಿವರಿಸಿದ ರಂಗನಾಥ್, ಒಂದು ಕಿ.ಮೀ ಮೋನೋ ರೈಲುಮಾರ್ಗ ನಿರ್ಮಾಣಕ್ಕೆ ರೂ 140 ಕೋಟಿ ಖರ್ಚಾಗುತ್ತದೆ. ಅವಳಿನಗರಕ್ಕೆ 60 ಕಿ.ಮೀ ರೈಲು ಮಾರ್ಗದ ಅವಶ್ಯಕತೆ ಇದೆ ಎಂದು ಪ್ರಾಧಿಕಾರ ತಿಳಿಸಿದ್ದು, ಒಟ್ಟಾರೆ ಯೋಜನೆಗೆ ರೂ 6,500 ಕೋಟಿ ವೆಚ್ಚ ತಗುಲುತ್ತದೆ.

ಇತ್ತೀಚೆಗೆ ಈ ರೀತಿಯ ಎಲ್ಲಾ ಯೋಜನೆಗಳಲ್ಲೂ ಖಾಸಗಿ ಕಂಪೆನಿಗಳ ಸಹಯೋಗದಲ್ಲಿ `ಬೂಟ್~ (ನಿರ್ಮಾಣ, ಮಾಲೀಕತ್ವ, ನಿರ್ವಹಣೆ, ಹಸ್ತಾಂತರ) ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇಲ್ಲೂ ಅದೇ ಮಾದರಿ ಅಳವಡಿಸಿಕೊಳ್ಳುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಬೇಕು.

ಮೋನೋ ರೈಲು ಜೊತೆಗೆ ಅವಳಿ ನಗರದಲ್ಲಿ ಕೆಲವು ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದ್ದು, ಅದರ ಬಗ್ಗೆಯೂ ಇನ್ನು ಹತ್ತು ದಿನಗಳಲ್ಲಿ ಸೂಕ್ತ ನಿರ್ಧಾರ ತಿಳಿಸುವುದಾಗಿ ಹೇಳಿದರು. ಸಭೆಯಲ್ಲಿ ಪ್ರಾಧಿಕಾರದ ಆಯುಕ್ತ ಆರ್.ಎನ್. ಶಾನಭಾಗ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಎಲ್ಲಿಂದ ಎಲ್ಲಿಗೆ?
ಅವಳಿ ನಗರದಲ್ಲಿ ಮೋನೋ ರೈಲುಮಾರ್ಗದ ಬಗ್ಗೆ ಮಾತನಾಡಿದ ಪಾಟೀಲ, ಹುಬ್ಬಳ್ಳಿ- ಧಾರವಾಡದ ನಡುವೆ 18 ಕಿ.ಮೀ ಮಾರ್ಗ ಸೇರಿದಂತೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಿಂದ (ಚನ್ನಮ್ಮ ಸರ್ಕಲ್) ಜನನಿಬಿಡ ಪ್ರದೇಶಕ್ಕೆ ಮಾರ್ಗವನ್ನು ಗುರುತಿಸಲು ಯೋಚಿಸಲಾಗಿದೆ.

ಅವುಗಳಲ್ಲಿ ಹಳೇ ಬಸ್ ನಿಲ್ದಾಣದಿಂದ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಸಿಬಿಟಿ, ಹಳೇ ಹುಬ್ಬಳ್ಳಿ, ಕುಸುಗಲ್ ರಸ್ತೆ, ಉಣಕಲ್ ಮಾರ್ಗ ಹಾಗೂ ಧಾರವಾಡದಲ್ಲಿ ಸಿಬಿಟಿ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿವಿ, ರೈಲು ನಿಲ್ದಾಣ, ಕೆಲಗೇರಿ ಮುಂತಾದ ಮಾರ್ಗಗಳನ್ನು ಗುರುತಿಸಬಹುದು ಎಂದು ಹೇಳಿದರು.

ಸದ್ಯಕ್ಕೆ ನಮ್ಮವರೇ ಮುಖ್ಯಮಂತ್ರಿಗಳಾಗಿದ್ದು, ರಾಜ್ಯದಲ್ಲೇ ಮೊದಲ ಮೋನೋ ರೈಲು ಅವಳಿ ನಗರಕ್ಕೆ ಬಂದರೆ ಅದರ ಕೀರ್ತಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.