ಭಾನುವಾರ, ಜೂನ್ 20, 2021
20 °C

ಮೌಂಟ್‌ ಎವರೆಸ್ಟ್‌ಗೆ ಏಣಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಐಎಎನ್ಎಸ್):  ಮೌಂಟ್‌ ಎವರೆಸ್ಟ್ ಏರುವ ಎಲ್ಲಾ ಚಾರಣಿಗರು ಅದರ ತುದಿಯನ್ನು ಏರಲಾಗದು ಎಂದು ಪಶ್ಚಾತಾಪ ಪಡುವ ಹಾಗಿಲ್ಲ. ಚಾರಣಿಗರ ಅನುಕೂಲಕ್ಕಾಗಿ  ಎವರೆಸ್ಟ್‌ ಏರಲು ಈಗ ಏಣಿ ತಯಾರಾಗುತ್ತಿದೆ.ನೇಪಾಳ ಪ್ರವಾಸೋದ್ಯಮ ಸಚಿವಾ­ಲಯ ಎವರೆಸ್ಟ್‌ ಶಿಖರದ ಸುಮಾರು 40 ಅಡಿ  ಎತ್ತರ ಇರುವ ಕೊನೆಯ ಹಿಮ ಬಂಡೆ ‘ಹಿಲರಿ ಸ್ಟೆಪ್‌’ಗೆ ಏಣಿ ನಿರ್ಮಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ‘ಏಪ್ರಿಲ್‌ ಮತ್ತು ಜೂನ್‌ ನಲ್ಲಿ ಹೆಚ್ಚು ಜನರು ಎವರೆಸ್ಟ್‌ ಏರುವುದರಿಂದ  ‘ಹಿಲರಿ ಸ್ಟೆಪ್‌’ನಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ.ಅಲ್ಲದೆ ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಹಿಲರಿ ಸ್ಟೆಪ್‌ನಲ್ಲಿ ಏಣಿ ನಿರ್ಮಿಸಲು ಯೋಜಿಸಿದ್ದೇವೆ ಎಂದು ಇಲ್ಲಿನ ಪ್ರವಾಸೋದ್ಯಮ ಸಚಿವಾಲ­ಯದ ವಕ್ತಾರ ಮೋಹನ್‌ ಕೃಷ್ಣಾ ಸಾಪ್‌ಕೋಟ ಹೇಳಿದ್ದಾರೆ. ‘ಹಿಮ ಶಿಖರದಲ್ಲಿ ಏಣಿ ನಿರ್ಮಿಸು­ವುದು ಅಷ್ಟು ಸುಲಭದ ಮಾತಲ್ಲ. ಆದರೆ ನಾವು ಈ ಬಗ್ಗೆ ಚಿಂತಿಸಿದ್ದು, ಮುಂದೆ ಇದನ್ನು ಕಾರ್ಯರೂಪಕ್ಕೆ ತರುತ್ತೇವೆ ’ ಎಂದು ಅವರು ತಿಳಿಸಿದ್ದಾರೆ.ಎಡ್ಮಂಡ್‌ ಹಿಲರಿ ಮತ್ತು ತೇನ್‌ಸಿಂಗ್‌ ಮೊದಲು ಎವರೆಸ್ಟ್‌ ಪರ್ವತ ಏರಿದ ನಂತರದಲ್ಲಿ ಪರ್ವತ ಏರಲು ಹೋಗಿ ಸುಮಾರು 300 ಜನ ಸಾವನ್ನಪಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.