ಚಿಕ್ಕಬಳ್ಳಾಪುರ: ಎಷ್ಟೇ ದೊಡ್ಡ ಗ್ರಾಮವಾಗಿದ್ದರೂ ಅಲ್ಲಿ ನಾಲ್ಕಾರು ಮಂದಿ ಅಂಗವಿಕಲರು ಇರುವುದು ಸಹಜ. ಕಿವುಡ, ಮೂಗರಿರುವುದೂ ಸಹಜ. ಆದರೆ ರಾಜ್ಯದ ಅತ್ಯಂತ ಕಿರಿಯ ತಾಲ್ಲೂಕುಗಳಲ್ಲಿ ಒಂದಾದ ಗುಡಿಬಂಡೆಯ ಯರಲಕ್ಕೇನಹಳ್ಳಿ ಗ್ರಾಮದ ಪ್ರತಿ ಕುಟುಂಬದಲ್ಲೂ ಇಬ್ಬರು, ಮೂವರು ಅಂಗವಿಕಲರಿದ್ದಾರೆ. ಬಹುತೇಕರು ಮೂಗರು, ಇನ್ನೂ ಕೆಲವರು ಅಂಗಾಂಗಗಳ ಸ್ವಾಧೀನ ಕಳೆದುಕೊಂಡವರು.

ಪುಟ್ಟ ಗ್ರಾಮದಲ್ಲೇ 40ಕ್ಕೂ ಹೆಚ್ಚು ಅಂಗವಿಕಲರಿದ್ದು, ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಕೂಡ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅಂಗವೈಕಲ್ಯ ಸಮಸ್ಯೆ ಕುರಿತು ಒಂದೊಂದು ಕಾರಣಗಳನ್ನು ಹೇಳಲಾಗುತ್ತಿದೆಯಾದರೂ ಗ್ರಾಮಸ್ಥರು ನಿಖರವಾಗಿ ಹೇಳುವುದು ಒಂದೇ ಮಾತು ~ವಿಷಕಾರಿ ಫ್ಲೋರೈಡ್~ ನೀರು ಸೇವನೆಯಿಂದಾಗಿ ವಂಶಪಾರಂಪರ್ಯದಿಂದ ಕಿರಿಯರು-ಹಿರಿಯರೆನ್ನದೆ ಅಂಗವ್ಯಕಲ್ಯತೆಗೆ ತುತ್ತಾಗುತ್ತಿದ್ದಾರೆ ಎನ್ನುತ್ತಾರೆ.

ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಶಿವಶಂಕರ್ ಎಂಟನೇ ತರಗತಿಗೆ ಹೋಗುವ ವೇಳೆ ಸೊಂಟದಿಂದ ಕೆಳಗಡೆ ಸಂಪೂರ್ಣ ಸ್ವಾಧೀನ ಕಳೆದುಕೊಂಡರೆ, ಹತ್ತನೇ ತರಗತಿಯವರೆಗೆ ಓದಿರುವ ಇಂದಿರಾ ಮಾತನಾಡಲು ಬರುವುದಿಲ್ಲ.

ಸಮೀಪದ ಬೀಚಗಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಅಕ್ಕ ಸಮಿತ್ರಾ ಮತ್ತು ತಮ್ಮ ನಾಗೇಶ್ ಅವರಿಗಂತೂ ಪಾದಗಳಲ್ಲಿ ಎರಡೇ ಬೆರಳುಗಳು. ಮೂಗರಲ್ಲಿ ಮಹಿಳೆಯರೇ ಹೆಚ್ಚು. ಅವರಲ್ಲಿ 20ರಿಂದ 60 ವಯೋಮಾನದವರು ಇದ್ದಾರೆ.

~ಗ್ರಾಮದಲ್ಲಿನ ಅಂಗವಿಕಲರ ಸಮಸ್ಯೆ ಕುರಿತು ಶಾಸಕರು, ಜಿಲ್ಲಾಡಳಿತ, ಸರ್ಕಾರದ ಗಮನಕ್ಕೆ ತಂದೆವು. ಎಷ್ಟೋ ದಿನಗಳ ಹಿಂದೆ ಫ್ಲೋರೈಡ್ ಅಂಶ ಪರೀಕ್ಷೆಗೆಂದು ನೀರು ತೆಗೆದುಕೊಂಡು ಹೋದ ಅಧಿಕಾರಿಗಳು ಮತ್ತೆ ಬಂದಿಲ್ಲ.

ಚುನಾವಣೆಯಲ್ಲಿ ಮತ ಕೇಳಲು ಬಂದ ಶಾಸಕರು ಮತ್ತೆ ಇತ್ತ ಮುಖ ತೋರಿಸಿಲ್ಲ. ಎಲ್ಲದಕ್ಕೂ ಹಣೆಬರಹ ಇರಬೇಕು ಎಂಬ ನಂಬಿಕೆಯಲ್ಲೇ ಜೀವನ ನಡೆಸಿಕೊಂಡು ಹೋಗುತ್ತಿದ್ದೇವೆ~ ಎಂದು ಗ್ರಾಮದ ನಿವಾಸಿ, ತಿರುಮಣಿ ಗ್ರಾಮ ಪಂಚಾಯಿತಿ ಸದಸ್ಯ ಆಂಜನಪ್ಪ ~ಪ್ರಜಾವಾಣಿ~ಗೆ ತಿಳಿಸಿದರು.

ಈ ಕುಡಿಯುವ ನೀರಿನ ಸಮಸ್ಯೆ ಬೋಗೇನಹಳ್ಳಿ, ತಿರುಮಣಿ, ದೊಡ್ಡಿನೆಂಚರ್ಲು, ತಾಲ್ಲೂಗಡ್ಡೆಹಳ್ಳಿ, ಸಿಂಗಾನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿದೆ. ಫ್ಲೋರೈಡ್ ಅಂಶದ ನೀರಿನ ಸೇವನೆಯಿಂದ ಬಹುತೇಕ ಗ್ರಾಮಸ್ಥರು ದೇಹದಲ್ಲಿ ಚೈತನ್ಯ ಕಳೆದುಕೊಂಡಿದ್ದಾರೆ. ನಡೆದಾಡಲು ಆಗದೇ ಮನೆಯಲ್ಲಿರುವುದು ಕಂಡುಬರುತ್ತದೆ.

~ಫ್ಲೋರೈಡ್ ನೀರು ಕುಡಿದ ಪರಿಣಾಮ ಅಷ್ಟಿಷ್ಟಲ್ಲ. ನಮ್ಮ ಗ್ರಾಮದವರನ್ನು ಯಾರೂ ಸಹ ಮದುವೆಯಾಗಲು ಬಯಸುವುದಿಲ್ಲ. ತೀರ ಹಿಂದುಳಿದ ಗ್ರಾಮವಾಗಿರುವ ಕಾರಣ ಇಲ್ಲಿ ಯಾರೂ ಭೇಟಿ ನೀಡುವುದಿಲ್ಲ. ಸಮಸ್ಯೆಗಳನ್ನು ಆಲಿಸುವುದಿಲ್ಲ.

ಇಲ್ಲಿನ ಅಂಗವಿಕಲರು ಮತ್ತು ಮೂಗರನ್ನು ಇದೇ ಗ್ರಾಮದವರೇ ಮದುವೆಯಾಗುತ್ತಾರೆ. ಇದರಿಂದ ಇನ್ನಷ್ಟು ಅಂಗವಿಕಲರೇ ಜನ್ಮ ತಾಳುತ್ತಾರೆ ಹೊರತು ಆರೋಗ್ಯವಂತ ಮಕ್ಕಳು ಜನಿಸುವುದಿಲ್ಲ~ ಎಂದು ಗ್ರಾಮಸ್ಥ ವೆಂಕಟೇಶ್ ತಿಳಿಸಿದರು.

ಇಲ್ಲಿನ ಗ್ರಾಮದೇವರು ನರಸಿಂಹಸ್ವಾಮಿಯಾಗಿದ್ದು, ಶೇ 70ರಷ್ಟು ಮಂದಿಗೆ ಲಕ್ಷ್ಮೀನರಸಮ್ಮ, ನರಸಮ್ಮ, ನರಸಿಂಹ ಮುಂತಾದ ಹೆಸರಿಡಲಾಗಿದೆ. ಗ್ರಾಮದಲ್ಲಿ ಆಯಾ ವ್ಯಕ್ತಿಗಳನ್ನು ಕರೆಯಬೇಕಿದ್ದರೆ, ~ಮೂಗಲಕ್ಷ್ಮಿ ನರಸಮ್ಮ~, ~ಮೂಗಮಾರಕ್ಕ~ ಎಂದು ಕರೆಯಲಾಗುತ್ತದೆ. ಅವರ ಅಂಗವೈಕಲ್ಯದ ಆಧಾರದ ಮೇಲೆ ಅವರ ಹೆಸರನ್ನಿಟ್ಟು ಕರೆಯಲಾಗುತ್ತಿದೆ.

~ಗ್ರಾಮೀಣಾಭಿವೃದ್ಧಿ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಗ್ರಾಮಕ್ಕೆ ಮಾತ್ರ ಯಾವುದೇ ಸೌಕರ್ಯ ದೊರೆತಿಲ್ಲ. ಫ್ಲೋರೈಡ್ ನಿವಾರಣೆಗೆ ಭರವಸೆ ನೀಡುತ್ತಿದ್ದರೂ ಅನುಷ್ಠಾನಕ್ಕೆ ಬರುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿದರೆ, ಸಮಸ್ಯೆ ಹೇಳಿಕೊಳ್ಳಬಹುದು. ಆದರೆ ಇಲ್ಲಿಗೆ ಯಾರೂ ಹೆಜ್ಜೆಯನ್ನೂ ಇಡುವುದಿಲ್ಲ~ ಎಂದು ಗ್ರಾಮಸ್ಥರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.