ಶನಿವಾರ, ಜೂನ್ 19, 2021
27 °C

ಯಶವಂತಪುರ, ಹುಬ್ಬಳ್ಳಿ ಅಹಮದಾಬಾದ್ ವಿಶೇಷ ರೈಲು ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ- ಅಹಮದಾಬಾದ್ ಹಾಗೂ ಹುಬ್ಬಳ್ಳಿ- ಯಶವಂತಪುರ ಮಾರ್ಗದಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.ಹುಬ್ಬಳ್ಳಿ- ಯಶವಂತಪುರ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06546) ಮಾ.11ರಂದು ರಾತ್ರಿ ಹತ್ತು ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದ್ದು, ಮಾ.12ರ ಬೆಳಿಗ್ಗೆ 6.40ಕ್ಕೆ ಯಶವಂತಪುರ ತಲುಪಲಿದೆ. ರೈಲು ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕರೆ ಮತ್ತು ತುಮಕೂರು ಮಾರ್ಗವಾಗಿ ಸಂಚರಿಸಲಿದೆ.ಯಶವಂತಪುರ- ಅಹಮದಾಬಾದ್ ರೈಲು ಮಾ.14ರಂದು ಬೆಳಿಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಅದೇ ದಿನ ರಾತ್ರಿ 7.20ಕ್ಕೆ ಅಹಮದಾಬಾದ್ ತಲುಪಲಿದೆ.ಆ ರೈಲು ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಾಪುರ, ಪುಣೆ, ಲೋನವಾಲ, ಕಲ್ಯಾಣ್, ಸೂರತ್, ವಡೋದರ ಮಾರ್ಗದಲ್ಲಿ ಸಂಚರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.