ಯಾದಗಿರಿ: ಜಿಲ್ಲೆಯು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ಗಡಿ ಭಾಗದಲ್ಲಿ ಓಡಾಡುವ ವಾಹನಗಳು, ಜನರ ಮೇಲೆ ಕಣ್ಣಿಡುವುದು ಅತ್ಯವಶ್ಯಕ. ಇದಕ್ಕಾಗಿಯೇ ಪೊಲೀಸ್ ಇಲಾಖೆ, ಅಂತರ ರಾಜ್ಯ ಗಡಿಯಲ್ಲಿ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಿದ್ದು, ಜಿಲ್ಲೆಯ ಗಡಿ ಭಾಗದಲ್ಲಿರುವ ಚೆಕ್ಪೋಸ್ಟ್ಗಳು ಸೌಲಭ್ಯ ಹಾಗೂ ಸಿಬ್ಬಂದಿ ಇಲ್ಲದೇ ನರಳುತ್ತಿವೆ.

ಜಿಲ್ಲೆಯ ಗಡಿ ಪ್ರದೇಶದಲ್ಲಿ ಆಂಧ್ರಪ್ರದೇಶ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸೂಕ್ತ ಪೊಲೀಸ್ ಭದ್ರತೆ ಮತ್ತು ಚೆಕ್ಪೋಸ್ಟ್ ಇಲ್ಲದೇ ಇರುವುದರಿಂದ ಜಿಲ್ಲೆಗೆ ನಿರಾತಂಕವಾಗಿ ಬರುವಂತಾಗಿದೆ.

ತಾಲ್ಲೂಕಿನ ಕಡೆಚೂರು ಮತ್ತು ನಂದೇಪಲ್ಲಿ ಗ್ರಾಮಗಳ ನಂತರ ಆಂಧ್ರ ಪ್ರದೇಶದ ಗಡಿ ಆರಂಭವಾಗುತ್ತದೆ. ಅಕ್ರಮ ವಸ್ತುಗಳ ಸಾಗಾಟ, ಅನಧಿಕೃತ ಪ್ರವೇಶ ತಡೆಗಳನ್ನು ನಿಯಂತ್ರಿಸಲು ಅಂತರ ರಾಜ್ಯ ಗಡಿಯಲ್ಲಿ ಚೆಕ್ಪೋಸ್ಟ್ಗಳು ಅತ್ಯವಶ್ಯಕವಾಗಿದೆ. ಆದರೆ ನಂದೇಪಲ್ಲಿ ನಂತರ ಆರಂಭವಾಗುವ ಆಂಧ್ರದ ಗಡಿಯಲ್ಲಿರುವ ಚೆಕ್ಪೋಸ್ಟ್ ಕೇವಲ ಕಟ್ಟಡಕ್ಕೇ ಸೀಮಿತವಾಗಿ ಉಳಿದಿದೆ.

ಆಂಧ್ರಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ನಿಗ್ರಹಿಸಲು ಉಗ್ರ ಕ್ರಮ ಕೈಗೊಂಡ ನಂತರ ಅಲ್ಲಿಯ ನಕ್ಸಲ್ ನಾಯಕರು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದು, ಯಾದಗಿರಿ ಜಿಲ್ಲೆಯಲ್ಲೂ ನಕ್ಸಲ್ ನಾಯಕರು ಬೀಡುಬಿಟ್ಟಿರುವುದು ಈಗಾಗಲೇ ಬಹಿರಂಗಗೊಂಡಿದೆ.

ಆಂಧ್ರಪ್ರದೇಶದ ಹೈದರಾಬಾದ್, ಮೆಹಬೂಬ್ನಗರ, ನಾರಾಯಣಪೇಟೆಗಳಿಗೆ ಹೋಗುವ ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆಂಧ್ರದಿಂದ ರಾಜ್ಯಕ್ಕೆ ಸಂಚರಿಸುವ ವಾಹನಗಳ ತಪಾಸಣೆ ನಡೆಸಲು ಗಡಿಭಾಗದ ಚೆಕ್ಪೋಸ್ಟ್ನಲ್ಲಿ ಒಬ್ಬ ಪೊಲೀಸ್ ಪೇದೆಯೂ ಇಲ್ಲದಿರುವುದು ದುರಂತದ ಸಂಗತಿ ಎನ್ನುತ್ತಾರೆ ಇಲ್ಲಿನ ಜನರು.

ಭೀಕರ ಬರದಿಂದಾಗಿ ಹೊರ ರಾಜ್ಯಕ್ಕೆ ಮೇವು ಹಾಗೂ ಕಸಾಯಿಖಾನೆಗೆ ಜಾನುವಾರುಗಳ ಸಾಗಾಟವನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ ಇಂತಹ ಅಕ್ರಮ ಸಾಗಾಟ ತಡೆಗೆ ಯಾವುದೇ ಚೆಕ್ಪೋಸ್ಟ್ಗಳು ಕಾರ್ಯ ನಿರ್ವಹಿಸುತ್ತಲೇ ಇಲ್ಲ ಎಂದು ಇಲ್ಲಿನ ಜನರು ಹೇಳುತ್ತಾರೆ.

ಯಾದಗಿರಿ ನಗರದಲ್ಲಿ ಪ್ರತಿ ಮಂಗಳವಾರ ನಡೆಯುವ ಜಾನುವಾರು ಸಂತೆಯಲ್ಲಿ ಆಂಧ್ರದ ಕಸಾಯಿಖಾನೆ ದಲ್ಲಾಳಿಗಳು ಜಾನುವಾರುಗಳನ್ನು ಖರೀದಿಸಿ ವಾಹನದಲ್ಲಿ ಸಾಗಿಸುತ್ತಿದ್ದರೂ ಗಡಿಪ್ರದೇಶದಲ್ಲಿ ಯಾವುದೇ ತಪಾಸಣೆ, ತಡೆ ಇಲ್ಲದಂತಾಗಿದೆ. ಇನ್ನೊಂದೆಡೆ ಆಂಧ್ರದಲ್ಲಿ ದಿನಬಳಕೆ ಸಾಮಗ್ರಿಗಳ ನಕಲಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ಆ ವಸ್ತುಗಳು ಈ ಗಡಿಭಾಗದ ಮೂಲಕ ಯಾದಗಿರಿ ಜಿಲ್ಲೆಯನ್ನು ಪ್ರವೇಶಿಸುತ್ತಿವೆ.

ಈ ಮೊದಲು ಗಡಿ ಭಾಗದ ಈ ಪ್ರದೇಶದಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಅಗತ್ಯ ಸಿಬ್ಬಂದಿ ಒದಗಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚೆಕ್ಪೋಸ್ಟ್ ಕಟ್ಟಡ ಮಾತ್ರವಿದ್ದು, ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನಿಯೋಜನೆ ಇಲ್ಲದೇ ಇರುವುದರಿಂದ ಅಕ್ರಮ ಸಾಗಣೆ ನಿರಾತಂಕವಾಗಿ ನಡೆದಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳು ಅನೇಕ ಬಾರಿ ಗಡಿಭಾಗದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ, ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ ಎಂದು ಹೇಳಿಕೆ ನೀಡಿದ್ದರೂ, ಅಲ್ಲಿ ಯಾವುದೇ ಚೆಕ್ಪೋಸ್ಟ್ ಸ್ಥಾಪನೆಯಾಗಲಿ, ಸಿಬ್ಬಂದಿ ಕೂಡಾ ಆಗಮಿಸುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದೆ ಎನ್ನಲಾಗುತ್ತಿದ್ದರೂ, ಅತೀ ಸೂಕ್ಷ್ಮ ವಿಷಯವಾಗಿರುವ ಅಂತರ ರಾಜ್ಯ ಗಡಿ ಪ್ರದೇಶದಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡಿದಷ್ಟು ಸಿಬ್ಬಂದಿ ಕೊರತೆಯಿದೆಯೇ? ಎನ್ನುವ ಪ್ರಶ್ನೆಯನ್ನು ಜಿಲ್ಲೆಯ ಗಡಿ ಪ್ರದೇಶದ ಜನ ಕೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.