ಲಂಡನ್ (ಪಿಟಿಐ): ಒಲಂಪಿಕ್ಸ್ ಪಥ ಸಂಚಲನದಲ್ಲಿ ಭಾರತೀಯ ಕ್ರೀಡಾಪಟುಗಳೊಂದಿಗೆ ಕಂಡು ಬಂದ ನೀಲಿ ಜೀನ್ಸ್ ಹಾಗೂ ಕೆಂಪು ಜಾಕೆಟ್ ಧರಿಸಿದ್ದ ಯುವತಿ ಯಾರೆಂದು ತಲೆ ಕೆರೆದುಕೊಂಡಿದ್ದವರಿಗೆ ಕೊನೆಗೂ ಉತ್ತರ ಲಭಿಸಿದೆ. ಸಾಮಾಜಿಕ ತಾಣದಲ್ಲಿ ವೈರಾಣುವಿನಂತೆ ಹರಿದಾಡಿದ ಈ ಸುದ್ದಿಯ ಜಾಡು ಹಿಡಿದ ಪತ್ರಿಕೆಯೊಂದು ಈಕೆ ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿಧರೆ ಮಧುರಾ ಹನಿ ಎಂದು ಪ್ರಕಟಿಸಿದೆ.

ಭಾರತೀಯ ತಂಡದೊಂದಿಗೆ ಕಂಡ ಈಕೆಯ ಸ್ನೇಹಿತನಿಗೂ ಇದು ಆಶ್ಚರ್ಯ ತಂದಿದೆ. `ಭಾರತೀಯ ತಂಡದೊಂದಿಗೆ ಗುರುತಿಸಿಕೊಳ್ಳುವುದಕ್ಕೂ ಮುನ್ನ ಮಧುರಾ ಹನಿ ತನ್ನ ಒಲಂಪಿಕ್ಸ್ಸ್ ಪ್ರವೇಶ ಪತ್ರದ ಚಿತ್ರವನ್ನು ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಳು. ಇದು ದೊಡ್ಡ ಪ್ರಕರಣವಾಗುತ್ತಿದ್ದಂತೆ ಆಕೆ ತನ್ನ ಫೇಸ್ಬುಕ್ ಖಾತೆಯನ್ನು ಸ್ಥಗತಿಗೊಳಿಸಿದ್ದಾಳು~ ಎಂದು ಅವರು ತಿಳಿಸಿದ್ದಾರೆ.

ಆದರೆ ತೀವ್ರ ಮುಜುಗರಕ್ಕೆ ಕಾರಣವಾಗಿರುವ ಈ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಈ ಯುವತಿಯ ಗುರುತು ಅಧಿಕೃತವಾಗಿ ಇನ್ನೂ ಅಧಿಕಾರಿಗಳ ಕೈ ಸೇರಿಲ್ಲ. ಈ ನಡುವೆ ತಂಡದ ಮುಖ್ಯಸ್ಥ ಬ್ರಿಗೇಡಿಯರ್ ಪಿ.ಕೆ.ಮುರಳೀಧರನ್ ರಾಜಾ ಅವರು ಪ್ರತಿಕ್ರಿಯಿಸಿ `ಈ ಕುರಿತು ನನಗೂ ಮಾಹಿತಿ ಬಂದಿದೆ. ಆದರೆ ಪತ್ರಿಕೆಯೊಂದರ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗದು. ಆಯೋಜಕರಿಂದ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ~ ಎಂದು ತಿಳಿಸಿದರು.

`ಆಕೆ ಯಾರು ಹಾಗೂ ಧ್ವಜಧಾರಿ ಸುಶೀಲ್ ಕುಮಾರ್ ಜತೆ ಹೆಜ್ಜೆ ಏಕೆ ಹಾಕಿದಳು. ಪ್ರಕರಣವನ್ನು ಆಯೋಜಕರ ಬಳಿ ತೆಗೆದುಕೊಂಡು ಹೋಗಿದ್ದೇವೆ. ಅಥ್ಲೀಟ್ಗಳ ಜತೆ ಆಕೆ ಹೆಜ್ಜೆ ಹಾಕಿ ಸಾಕಷ್ಟು ಅವಮಾನ ಮಾಡಿದ್ದಾಳೆ~ ಎಂದು ರಾಜ ಕಿಡಿಕಾರಿದರು.

ಇದೇ ಮೊದಲ ಬಾರಿಗೆ ಭಾರತದ 81 ಕ್ರೀಡಾಪಟುಗಳು ಒಲಂಪಿಕ್ಸ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರಲ್ಲಿ 40 ಅಥ್ಲೀಟ್ಗಳು ಹಾಗೂ 11 ಅಧಿಕಾರಿಗಳು ಪಥಸಂಚಲನ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.