ಶನಿವಾರ, ಮೇ 15, 2021
24 °C

ಯುವತಿ ಅಪಹರಣಕ್ಕೆ ಯತ್ನಿಸಿದ ಪೊಲೀಸ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಕಾನೂನು ಪಾಲನೆ ಹೊಣೆ ಹೊತ್ತಿರುವ ಪೊಲೀಸ್, ಯುವತಿ ಅಪಹರಣಕ್ಕೆ ಯತ್ನಿಸಿ ಬಂಧನಕ್ಕೆ ಒಳಗಾದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಪಟ್ಟಣ ಠಾಣೆಯ ಪೇದೆ ಹಮೀದ್ ಬಂಧಿತ ವ್ಯಕ್ತಿ.ಇಲ್ಲಿನ ಮಾಜಿ ಪುರಸಭಾ ಸದಸ್ಯ ರಾಜು ಎಂಬುವರ ಪುತ್ರಿ ತುಳಸಿ ಟ್ಯೂಷನ್‌ಗೆ ಹೋಗುತ್ತ್ದ್ದಿದ ವೇಳೆ ಈ ಅಪಹರಣ ನಡೆದಿದೆ. ಹಮೀದ್ ಸ್ಕಾರ್ಪಿಯೋ ಕಾರ್‌ನಲ್ಲಿ ಆಕೆಯನ್ನು ಅಪಹರಿಸಿಕೊಂಡು ಹೋಗುವುದನ್ನು ಕಂಡ ರಾಜು ಅವರ ಸೋದರ ಪಿ. ವೆಂಕಟೇಶ್ ತಕ್ಷಣ ರಾಜುಗೆ ವಿಚಾರ ತಿಳಿಸಿದರು.ಯುವತಿಯನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ವಾಹನವನ್ನು  ಈ ಇಬ್ಬರೂ ಬೆನ್ನಟ್ಟಿ ತಡೆದು ನಿಲ್ಲಿಸಿದರು. ಬಳಿಕ ಆರೋಪಿಯನ್ನು ಹಿಡಿದು ಪಟ್ಟಣ ಠಾಣೆಗೆ ಒಪ್ಪಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್ ಹಾಗೂ ಡಿವೈಎಸ್‌ಪಿ ಮಹಾದೇವಯ್ಯ ಪಟ್ಟಣ ಠಾಣೆಗೆ ಭೇಟಿ ನೀಡಿ  ಮಾಹಿತಿ ಸಂಗ್ರಹಿಸಿದರು. ಯುವತಿ ತಂದೆ ರಾಜು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.