ಬೆಂಗಳೂರು: ‘ಯುವಿ’ ಐದು ಬೆರಳು ತೋರಿಸಿ ‘ಹೇಗಿತ್ತು ನನ್ನ ಬೌಲಿಂಗ್...?’ ಎನ್ನುವಂತೆ ತಲೆ ಎತ್ತಿ ನೋಡಿದಾಗ ನಾಯಕ ‘ಮಹಿ’ ತಲೆದೂಗಿ ನಕ್ಕರು!

ಏಕದಿನ ಕ್ರಿಕೆಟ್ನಲ್ಲಿ ಐದು ವಿಕೆಟ್ ಪಡೆದು ವೈಯಕ್ತಿಕ ಶ್ರೇಷ್ಠ ಸಾಧನೆಯ ಸಂಭ್ರಮದ ಅಲೆಯ ಮೇಲೆ ತೇಲಿದ ಯುವರಾಜ್ ಸಿಂಗ್ ಅವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಚ್ಚರಿಗೆ ಕಾರಣರಾದರು. ಪರಿಣತ ವೇಗಿಗಳು ಹಾಗೂ ಸ್ಪಿನ್ನರ್ಗಳು ಸಾಧಿಸಲಾಗದ್ದನ್ನು ಈ ಸಾಂದರ್ಭಿಕ ಬೌಲರ್ ಸಾಧಿಸಿ ತೋರಿಸಿದರು ಎನ್ನುವುದೇ ವಿಶೇಷ.

ವಿಶ್ವಕಪ್ಗೆ ಮುನ್ನ ಯುವರಾಜ್ ಪ್ರದರ್ಶನ ಮಟ್ಟದ ಬಗ್ಗೆ ಬಹಳಷ್ಟು ಚರ್ಚೆ ಆಗಿತ್ತು. ಬ್ಯಾಟಿಂಗ್ನಲ್ಲಿ ಪ್ರಭಾವಿ ಆಗಿಲ್ಲ ಎನ್ನುವ ಪ್ರಶ್ನೆಯೂ ಕಾಡಿತ್ತು. ಸಾಂದರ್ಭಿಕ ಬೌಲರ್ ರೂಪದಲ್ಲಿ ತಂಡಕ್ಕೆ ಅವರು ಎಷ್ಟರ ಮಟ್ಟಿಗೆ ನೆರವಾಗುತ್ತಾರೆ ಎಂದು ಯೋಚಿಸುವ ಗೊಡವೆಗೆ ಯಾರೂ ಹೋಗಿರಲಿಲ್ಲ. ಬ್ಯಾಟಿಂಗ್ಗೆ ಬಲ ನೀಡುವರೇ? ಎನ್ನುವ ಸವಾಲನ್ನು ಮಾತ್ರ ಮುಂದಿಟ್ಟುಕೊಂಡು ಕ್ರಿಕೆಟ್ ಪಂಡಿತರು ರಿಮ್ಮುಗಟ್ಟಲೇ ಬರೆದಿದ್ದರು ಹಾಗೂ ಗಂಟೆಗಟ್ಟಲೆ ಚರ್ಚೆ ಮಾಡಿದ್ದರು. ಬೌಲರ್ ರೂಪದಲ್ಲಿ ಅವರ ಕೊಡುಗೆಯ ಬಗ್ಗೆ ಚಿಂತೆ ಮಾಡುವುದು ಆಗ ಅಗತ್ಯವೂ ಎನಿಸಿರಲಿಲ್ಲ. ಆದರೆ ಯುವರಾಜ್ ತಮ್ಮ ಸುತ್ತ ಹಬ್ಬಿದ್ದ ಅನುಮಾನದ ಹುತ್ತವನ್ನು ದಿಟ್ಟ ಆಟದ ಬಲದಿಂದಲೇ ಕೆಡವಿದರು.

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿನ ಅವರ ಬೌಲಿಂಗ್ ಪ್ರದರ್ಶನವಂತೂ ಅದ್ಭುತ. ಈ ಸಾಂದರ್ಭಿಕ ಬೌಲರ್ ಭಾರತ ತಂಡಕ್ಕೆ ಏಕದಿನ ಕ್ರಿಕೆಟ್ನಲ್ಲಿ ಇಷ್ಟೊಂದು ಪ್ರಯೋಜನಕಾರಿ ಆಗಿದ್ದು ಇದೇ ಮೊದಲು. ಮುಂಚೂಣಿಯ ಬೌಲರ್ಗಳನ್ನು ಮೀರಿ ನಿಂತು, ಐದು ವಿಕೆಟ್ಗಳನ್ನು ಕಬಳಿಸಿ ಮೆಚ್ಚುಗೆ ಕೂಡ ಗಳಿಸಿದರು. ನಾಯಕ ಮಹೇಂದ್ರ ಸಿಂಗ್ ದೋನಿ ಅವರು ಯುವರಾಜ್ಗೆ ಪೂರ್ಣ ಕೋಟಾ ಮುಗಿಸಲು ಅವಕಾಶವನ್ನೂ ನೀಡಿದರು.

ಯುವಿ ಮತ್ತು ಪಠಾಣ್ ನಡುವೆ ಹತ್ತು ಓವರುಗಳನ್ನು ಹಂಚುವ ಯೋಚನೆ ಹೊಂದಿದ್ದ ದೋನಿ ಸರಿಯಾದ ಸಮಯಕ್ಕೆ ಯುವರಾಜ್ಗೆ ಕೋಟಾ ಪೂರ್ಣಗೊಳಿಸುವಂತೆ ಹೇಳಿದರು. ಅದೊಂದು ಒಳ್ಳೆಯ ನಿರ್ಧಾರವೇ ಎನಿಸಿತು. ನಾಯಕನ ವಿಶ್ವಾಸ ಗಳಿಸುವಂತೆ ಬೌಲಿಂಗ್ ಮಾಡಿದ 29 ವರ್ಷ ವಯಸ್ಸಿನ ಪಂಜಾಬ್ ಕ್ರಿಕೆಟಿಗ ತನ್ನ ಪೂರ್ಣ ಕೋಟಾವನ್ನು 10-0-31-5ರಲ್ಲಿ ಪೂರ್ಣಗೊಳಿಸಿದರು.

ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಏಳು ಓವರ್ಗಳವರೆಗೆ ಬೆವರು ಸುರಿಸಿದರೂ ಸಿಂಗ್ಗೆ ವಿಕೆಟ್ ದಕ್ಕಿರಲಿಲ್ಲ. ‘ಟೈ’ ಆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಬೌಲಿಂಗ್ನಲ್ಲಿ ನಿರಾಸೆ ಕಾಡಿತ್ತು. ಆದರೆ ಆ ಪಂದ್ಯದಲ್ಲಿ ಯುವರಾಜ್ ಅರ್ಧ ಶತಕ (58 ರನ್) ಗಳಿಸುವ ಮೂಲಕ ತಂಡದ ಮೊತ್ತಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಆ ಮೂಲಕ ಪ್ರದರ್ಶನ ಮಟ್ಟದಲ್ಲಿ ಚೇತರಿಕೆ ಸಾಧ್ಯವಾಗಿದೆ ಎನ್ನುವುದನ್ನು ಸಾಬೀತುಪಡಿಸಿದ್ದರು. ಐರ್ಲೆಂಡ್ ಪಂದ್ಯದಲ್ಲಿ ಪ್ರಭಾವಿ ದಾಳಿ ನಡೆಸುವ ಮೂಲಕ ಬೌಲಿಂಗ್ನಲ್ಲಿಯೂ ತಂಡಕ್ಕೆ ಬಲವಾಗಿ ನಿಲ್ಲಲು ತಾವು ಸಮರ್ಥರೆಂದು ಸಾರಿದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.