ನವದೆಹಲಿ (ಪಿಟಿಐ): ಭೋಪಾಲ್ ಯೂನಿಯನ್ ಕಾರ್ಬೈಡ್ ಘಟಕದಲ್ಲಿ ರಾಶಿ ಬಿದ್ದಿರುವ 350 ಟನ್ ವಿಷಪೂರಿತ ತ್ಯಾಜ್ಯವನ್ನು ಜರ್ಮನಿ ಕಂಪೆನಿಯಿಂದ ವಿಲೇವಾರಿ ಮಾಡಿಸಲು ಮಧ್ಯಪ್ರದೇಶ ಸರ್ಕಾರಕ್ಕೆ ಅನುಮತಿ ನೀಡಲಾಗಿದೆ.

ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ನೇತೃತ್ವದ ಸಚಿವರ ಸಮಿತಿಯು ಈ ಅನುಮತಿ ನೀಡಿದೆ ಎಂದು ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಸಚಿವ ಬಾಬುಲಾಲ್ ಗೌರ್ ತಿಳಿಸಿದ್ದಾರೆ.
ಈ ತ್ಯಾಜ್ಯವನ್ನು ವಿಮಾನದಲ್ಲಿ ಜರ್ಮನಿಗೆ ಸಾಗಿಸುವುದಕ್ಕಾಗಿ 25 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ.

ಜರ್ಮನಿಯ ಗಿಜ್- ಐಎಸ್ಎಂಬ ಕಂಪೆನಿಯು ಒಂದು ವರ್ಷದೊಳಗೆ ಇದನ್ನು ತನ್ನ ರಾಷ್ಟ್ರಕ್ಕೆ ಸಾಗಿಸಲಿದೆ. ಈ ಸಂಬಂಧ ಜರ್ಮನಿ ಕಂಪೆನಿಯೊಂದಿಗೆ ಮಾಡಿಕೊಳ್ಳಬೇಕಾದ ಒಪ್ಪಂದವನ್ನು ಎರಡು ವಾರದೊಳಗೆ ಸಿದ್ಧಪಡಿಸಿಕೊಳ್ಳಲು ಮಧ್ಯಪ್ರದೇಶ ಸರ್ಕಾರಕ್ಕೆ ಸಚಿವರ ಸಮಿತಿ ಸೂಚಿಸಿದೆ.

1984ರ ಡಿ. 2-3ರ ನಡುವಿನ ರಾತ್ರಿ ಸಂಭವಿಸಿದ್ದ ಭೋಪಾಲ್ ಅನಿಲ ದುರಂತದಿಂದ ಸಂತ್ರಸ್ತರಾದವರಿಗೆ ಈವರೆಗೆ 3000 ಕೋಟಿ ರೂಪಾಯಿಗೂ ಹೆಚ್ಚು ಪರಿಹಾರ ನೀಡಲಾಗಿದೆ. 5,295 ಸಾವಿನ ಪ್ರಕರಣಗಳು, 4902 ಶಾಶ್ವತ ಅಂಗವೈಕಲ್ಯ, ಸಣ್ಣಪುಟ್ಟ ಗಾಯಗಳ 5,27,894 ಪ್ರಕರಣಗಳು ಮತ್ತು 35,455 ತಾತ್ಕಾಲಿಕ ಅಂಗವೈಕಲ್ಯ ಪ್ರಕರಣಗಳು ಇದರಲ್ಲಿ ಸೇರಿವೆ ಎಂದು ಗೌರ್ ಅಂಕಿಅಂಶ ನೀಡಿದರು.

ಸಚಿವರ ಸಮಿತಿ ಸಭೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್ ನಾಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್, ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.