ಬೈಲಹೊಂಗಲ: ಜಮ್ಮು-ಕಾಶ್ಮೀರದಲ್ಲಿ ಸೇನೆಯಲ್ಲಿದ್ದ ಯೋಧ ಮೆದುಳಿನ ಶಸ್ತ್ರಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ ಹವಾಲ್ದಾರ ಸುಬಾನಿ ಮಹಮ್ಮದ್ ಹುಸೇನ್ ಮುಮ್ಮಣಗಿ (34) ಅಂತ್ಯಕ್ರಿಯೆ ತಾಲ್ಲೂಕಿನ ಸವಟಗಿ ಗ್ರಾಮದಲ್ಲಿ ಜನಸಾಗರದ ನಡುವೆ ಭಾನುವಾರ ಜರುಗಿತು.

ಹದಿನೇಳು ವರ್ಷದ ಹಿಂದೆ ಸೇನೆ ಸೇರಿ ಸದ್ಯ ಹವಾಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದು, ಆರು ತಿಂಗಳಿನಲ್ಲಿ ನಿವೃತ್ತಿ ಹಂತದಲ್ಲಿದ್ದ ಯೋಧ ಹುಸೇನ ಶುಕ್ರವಾರ ಚಂಡೀಘಡ ಆಸ್ಪತ್ರೆಯಲ್ಲಿ ಮೃತಪಟ್ಟರು.
ದೆಹಲಿ, ಗೋವಾ, ಬೆಳಗಾವಿ ಮೂಲಕ ಕಳೇಬರ ಸ್ವಗ್ರಾಮಕ್ಕೆ ಆಗಮಿಸಿದಾಗ ಕುಟುಂಬದ ಸದಸ್ಯರ, ಬಳಗದ ಶೋಕ ಮುಗಿಲು ಮುಟ್ಟಿತ್ತು.

ಪತ್ನಿ, ಎರಡು ಗಂಡು ಮಕ್ಕಳು, ತಂದೆ ಹಾಗೂ ಸಹೋದರ ಸಹೋದರಿಯರು ಇದ್ದಾರೆ.
ಸೇನಾಧಿಕಾರಿ, ಸೇನಾ ಸಿಬ್ಬಂದಿ ಮೃತ ಯೋಧನಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ದೊಡವಾಡ ಪಿ.ಎಸ್.ಐ. ಎಸ್.ಬಿ. ನಾಯಕ, ಕಿತ್ತೂರ ತಹಸೀಲ್ದಾರ ಗೋಟೇಕರ, ಕಂದಾಯ ಇಲಾಖೆ ಸಿಬ್ಬಂದಿ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.