ಮಂಗಳವಾರ, ಜನವರಿ 28, 2020
17 °C

ರಂಗನತಿಟ್ಟು ಪಕ್ಷಿಧಾಮಕ್ಕೆ ಬಂದ ಅತಿಥಿಗಳು

ಪ್ರಜಾವಾಣಿ ವಾರ್ತೆ/ –ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿ­ಗಾಗಿ ವಿವಿಧ ಜಾತಿಯ ಪಕ್ಷಿಗಳು ಬರಲಾರಂಭಿಸಿವೆ.

ಮೂರ್ನಾಲ್ಕು ದಿನಗಳೀಚೆಗೆ ವಿವಿಧ ಪಕ್ಷಿಗಳು ಇಲ್ಲಿಗೆ ಬರುತ್ತಿವೆ. ಓಪನ್‌­ಬಿಲ್‌ ಸ್ಟೋರ್ಕ್‌, ಸ್ಪೂನ್‌ಬಿಲ್‌ ಸ್ಟೋರ್ಕ್‌, ಪೆಲಿಕಾನ್‌ (ಹೆಜ್ಜಾರ್ಲೆ) ಹಾಗೂ ರಿವರ್‌ ಟರ್ನ್‌ ಪಕ್ಷಿಗಳು ರಂಗನತಿಟ್ಟಿಗೆ ಬಂದಿಳಿಯುತ್ತಿವೆ. ಸುಮಾರು 50 ಜತೆ ಪೆಲಿಕಾನ್‌, 60 ಜತೆ ಓಪನ್‌ ಬಿಲ್‌, 30 ಜತೆ ಸ್ಪೂನ್‌­ಬಿಲ್‌ ಹಾಗೂ ಎರಡು ಜತೆ ರಿವರ್‌ ಟರ್ನ್‌ ಪಕ್ಷಿಗಳು ಇಲ್ಲಿಗೆ ಬಂದಿವೆ. ಬುಧವಾರದಿಂದ ಪೇಂಟೆಡ್‌ ಸ್ಟೋರ್ಕ್‌ ಪಕ್ಷಿಗಳು ಪಕ್ಷಿಧಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಜಾಗ  ಹುಡುಕುತ್ತಿವೆ.ಪೆಲಿಕಾನ್‌ ಪಕ್ಷಿಗಳು ಈಗಾಗಲೇ ಎತ್ತ­ರದ ಮುಳ್ಳಿನ ಮರಗಳ ಮೇಲೆ ಗೂಡು ಕಟ್ಟುವ ಕಾಯಕದಲ್ಲಿ ತೊಡ­ಗಿವೆ. ರಿವರ್‌ ಟರ್ನ್‌ ಪಕ್ಷಿಗಳು ಮಿಲನ ಕ್ರಿಯೆ­ಯಲ್ಲಿ ತೊಡಗಿದ್ದು, ಒಂದು ವಾರದಲ್ಲಿ ಮೊಟ್ಟೆ ಇಡುವ ಸಾಧ್ಯತೆ ಇದೆ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿ­ಕಾರಿ (ವನ್ಯಜೀವಿ ವಿಭಾಗ) ಲಕ್ಷ್ಮೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಜನವರಿ ಮೊದಲ ವಾರದ ವೇಳೆಗೆ 20 ಸಾವಿರ ಪೆಲಿಕಾನ್‌, 15 ಸಾವಿರ ಪೇಂಟೆಡ್‌ ಸ್ಟೋರ್ಕ್‌, 10 ಸಾವಿರದಷ್ಟು ಓಪನ್‌ ಬಿಲ್‌ ಸ್ಟೋರ್ಕ್‌, 6ರಿಂದ 7 ಸಾವಿರ ಸ್ಪೂನ್‌ಬಿಲ್‌ ಸ್ಟೋರ್ಕ್‌ ಪಕ್ಷಿ­ಗಳು ರಂಗನತಿಟ್ಟಿಗೆ ಬರಲಿವೆ.ಭರತ್‌ಪುರ, ಮಂಡಗದ್ದೆ ಮಾತ್ರ­ವಲ್ಲದೆ ಶ್ರೀಲಂಕಾದಿಂದಲೂ ಕೆಲವು ಪಕ್ಷಿ­ಗಳು ವಂಶಾಭಿವೃದ್ಧಿಗಾಗಿ ಇಲ್ಲಿಗೆ ಬರು­ತ್ತವೆ. ನೈಟ್‌ ಹೆರಾನ್‌, ಪರ್ಪಲ್‌ ಹೆರಾನ್‌, ಸ್ನೇಕ್‌ ಬರ್ಡ್‌, ಕಾರ್ಮೊ­ರೆಂಟ್‌, ಬ್ಲಾಕ್‌ ಹೆಡೆಡ್‌ ಐಬಿಸ್‌ (ಕಪ್ಪುತಲೆ ಬಕ), ಸ್ಟೋನ್‌ ಫ್ಲವರ್‌ ಪಕ್ಷಿ­ಸಂಕುಲ ಪಕ್ಷಿಧಾಮದಲ್ಲಿ ಬೀಡುಬಿಟ್ಟಿವೆ.

ಪ್ರತಿಕ್ರಿಯಿಸಿ (+)