ಭಾನುವಾರ, ಜನವರಿ 26, 2020
27 °C

ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಪ್ರವೇಶ

ಸಂಗೀತಾ

ನಿರಂತರ ಸ್ಕೂಲ್‌ ಆಫ್‌ ಡಾನ್ಸ್‌: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್‌. ಸೌಮ್ಯ ಹಾಗೂ ಸೋಮಶೇಖರ್‌ ಅವರ ಶಿಷ್ಯೆ ಸಂಗೀತಾ ಫಣೀಶ್‌ ಬುಧವಾರ ರಂಗಪ್ರವೇಶ ಮಾಡಲಿದ್ದಾರೆ. ಕಥಕ್‌ ನೃತ್ಯಾಭ್ಯಾಸ ಮಾಡಿರುವ ಇವರು ಜಯಶ್ರೀ ಹಾಗೂ ಡಾ. ಫಣೀಶ್‌ ಎಂ.ಎಸ್‌. ಅವರ ಪುತ್ರಿ. ವೀಣಾ ಮೂರ್ತಿ ವಿಜಯ್‌ ಅವರಿಂದ ಕೂಚಿಪುಡಿ ಪ್ರಕಾರವನ್ನೂ ಅಭ್ಯಾಸ ಮಾಡಿದ್ದು, ಕೂಚಿಪುಡಿ ನೃತ್ಯ ಪ್ರಕಾರದಲ್ಲೂ ರಂಗಪ್ರವೇಶ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಶತಾವಧಾನಿ ಡಾ.ಆರ್‌. ಗಣೇಶ್‌, ಸಾಯಿ ಆರ್ಟ್ಸ್‌ ಇಂಟರ್‌ನ್ಯಾಷನಲ್‌ನ ನಿರ್ದೇಶಕರಾದ ಡಾ. ಸುಪರ್ಣಾ ವೆಂಕಟೇಶ್‌ ಹಾಗೂ ಸಾಯಿ ವೆಂಕಟೇಶ್‌, ಕೂಚಿಪುಡಿ ಕಲಾವಿದೆ ವೀಣಾಮೂರ್ತಿ ವಿಜಯ್‌, ಎಂ.ಬಿ. ಭಾನುಪ್ರಕಾಶ್‌ ಭಾಗವಹಿಸಲಿದ್ದಾರೆ. ಸಂಜೆ 5.ಭಾವನಾ

ಖೇಚರ ಅಕಾಡೆಮಿ ಆಫ್‌ ಭರತನಾಟ್ಯಂ: ಜೆ.ಎಸ್‌.ಎಸ್‌ ಸಭಾಂಗಣ, 8ನೇ ಬ್ಲಾಕ್‌, ಜಯನಗರ. ನೃತ್ಯಪಟುಗಳಾದ ಶ್ರೀಧರ್‌ ಮತ್ತು ಅನುರಾಧಾ ದಂಪತಿ ಶಿಷ್ಯೆ ಭಾವನಾ ವೆಂಕಟೇಶ್ವರ ಬುಧವಾರ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

ಶಂಕರ್‌ ಮತ್ತು ಜಯಲಕ್ಷ್ಮಿ ಅವರ ಪುತ್ರಿಯಾದ ಭಾವನಾ 10 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದು ಬಿ.ಕಾಂ. ಪದವೀಧರೆ. ಅತಿಥಿಗಳು: ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ, ನೂಪುರ ಸ್ಕೂಲ್‌ ಆಫ್‌ ಭರತನಾಟ್ಯಂ ನಿರ್ದೇಶಕಿ ಲಲಿತಾ ಶ್ರೀನಿವಾಸನ್‌. ಸಂಜೆ 6.15.

ಪ್ರತಿಕ್ರಿಯಿಸಿ (+)