ಶುಕ್ರವಾರ, ಮೇ 14, 2021
32 °C

ರಂಗಶಂಕರದಲ್ಲಿ ಸಂಜೆ ಹಾಡು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಶಂಕರ ಮತ್ತು ವಾಸ್ಪ್: ಮಂಗಳವಾರ, ಬುಧವಾರ ವಾಸ್ಪ್ ತಂಡದ ಮೂರನೇ ಕೊಡುಗೆ `ಸಂಜೆ ಹಾಡು~ (ರಚನೆ ಹಾಗೂ ನಿರ್ದೇಶನ: ರಾಜೇಂದ್ರ ಕಾರಂತ್. ಬೆಳಕು: ಮೊಹಮದ್ ಮುಸ್ತಫಾ. ಪ್ರಸಾದನ: ವಿಜಯ್ ಬೆಣಚ. ಸಂಗೀತ: ವಿಜಯ್ ಡಿ. ಜೆ. ಕಲಾವಿದರು: ರಾಜೇಂದ್ರ, ಸುನಿಲ್ ಕುಮಾರ್, ಕುಲದೀಪಕ್, ಸೌರವ್ ಲೋಕೇಶ್, ವಿನಯ್ ಶಾಸ್ತ್ರಿ, ಪ್ರಸಾದ್ ಜೈನ್).   ಇದು ರಾಜೇಂದ್ರ ಕಾರಂತ್ 1989ರಲ್ಲಿ ಬರೆದ ಮೊದಲ ನಾಟಕ. 22 ವರ್ಷಗಳು ಕಳೆದರೂ ನಾಟಕದ ಕಥಾ ವಸ್ತು ಇಂದಿಗೂ ಪ್ರಸ್ತುತವಾಗಿದೆ. ಪ್ರತಿಯೊಂದೂ ವ್ಯಾಪಾರೀಕರಣ ಆಗುತ್ತಿರುವ ಇಂದಿನ ಜಗತ್ತಿನಲ್ಲಿ ಮಾನವೀಯ ಸಂಬಂಧಗಳೂ ವ್ಯಾಪಾರವಾಗುತ್ತಿವೆ. ಇಂದಿನ ಸಣ್ಣ ಕುಟುಂಬಗಳ ಪ್ರತ್ಯೇಕ ಇರುವಿಕೆಯ ಹಂಬಲದಲ್ಲಿ ಆಧುನಿಕ ತಂದೆ-ತಾಯಂದಿರು ಒಂದೊಂದೇ ಮಗುವನ್ನು ಅಪೇಕ್ಷಿಸುತ್ತಿರುವುದು ಆರ್ಥಿಕವಾಗಿ ಅನುಕೂಲಕರ. ಆದರೆ ವೃದ್ಧಾಪ್ಯದಲ್ಲಿ ಆ ಒಬ್ಬನೇ ಮಗ ಅಥವಾ ಮಗಳಿಂದ ದೂರ ಇರಬೇಕಾದ ಸ್ಥಿತಿ, ಒಂಟಿತನದ  ಹಂಬಲದಿಂದ ಹಾಡುವ ಹಾಡೇ  ಸಂಜೆಹಾಡು .ತನ್ನ ಮಗನಲ್ಲಿ ಕಾಣಲು ಆಗದ್ದನ್ನು ಬೇರೆಲ್ಲೋ ಹುಡುಕುವ ಸದಾಶಿವವರಾವ್ ಕೇಳುವ ಪ್ರಶ್ನೆ  `ಬರೀ ರಕ್ತ ಸಂಬಂಧ ಮಾತ್ರ ಸಂಬಂಧವೇ? ಮಾನಸಿಕ ಸಂಬಂಧಗಳಿಗೆ ಬೆಲೆಯೇ ಇಲ್ಲವೇ?~. ಅದಕ್ಕೆ ಉತ್ತರ ಹುಡುಕುವ ಪ್ರಯತ್ನವೇ ಈ ನಾಟಕ. ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.