ಶುಕ್ರವಾರ, ಮೇ 20, 2022
24 °C

ರಂಗ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ದೇಶದ ವಿವಿಧೆಡೆಯ ಹದಿನೇಳು ಕಲಾ ಪ್ರಕಾರಗಳ ಕಲಾವಿದರು ಇಲ್ಲಿ ಪ್ರದರ್ಶನ ನೀಡಲಿದ್ದಾರೆ. ಬೆಂಗಳೂರಿಗರಿಗೆ ಅಪರೂಪವಾದ ಅಪೂರ್ವ ಜಾನಪದ ಮತ್ತು ಶಾಸ್ತ್ರೀಯ ನಾಟಕಗಳನ್ನು ವೀಕ್ಷಿಸುವ ಅವಕಾಶ ಇಲ್ಲಿದೆ.ಏಳು ವಿಭಿನ್ನ ಪ್ರಕಾರಗಳನ್ನು ಪ್ರತಿನಿಧಿಸುವ ಏಳು ನಾಟಕಗಳು, ಎರಡು ಮನೋಹರ ವಾಚನಗಳು (ದಸ್ತಾಂಗೋಯಿ ಮತ್ತು ಪಾಂಡವನಿ) ಈ ಸಲದ ವಿಶೇಷ. ಜತೆಗೆ ಕರ್ನಾಟಕದ ಎಂಟು ಜಾನಪದ ನಾಟಕ ಪದ್ಧತಿಗಳ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಜಾನಪದ ಮತ್ತು ಶಾಸ್ತ್ರೀಯ     ಪದ್ಧತಿಗಳ ಅಪೂರ್ವ ಚಲನಚಿತ್ರ ಪ್ರದರ್ಶನ, ನಾಟಕ ರಸಗ್ರಹಣ ಶಿಬಿರ, ‘ಲೋಕಸಂಸ್ಕೃತಿ’ ವಿಚಾರ ಸಂಕಿರಣ, ರಿಫ್ಲೆಕ್ಷನ್ ಛಾಯಾಚಿತ್ರ ಪ್ರದರ್ಶನ ಇರುತ್ತವೆ.ದಂತಕಥೆಯಾದ ಮಹಾರಾಷ್ಟ್ರದ ಲೋಕಸಾಹಿರ್ ವಿಠ್ಠಲ್, ಗಂಗಾರಾಂ ಉಮಪ್ ಅವರ ಗೋಂದಳ್ ಪ್ರಕಾರದ ‘ಜಾಂಬೂಲ್ ಅಖ್ಯಾನ್’,  ಸಹಜ ಬೆಳಕಿನಲ್ಲಿ ನಟನ ಕೈರಳಿಯವರ ‘ಕುಟ್ಟಿಯಾಟ್ಟಂ’, ನಾರಾಯಣ ಪಣಿಕ್ಕರ್ ಅವರ ಸೋಪಾನ ತಂಡದಿಂದ ‘ತೆಯ್ಯಂ’ ಆಧಾರಿತ ನಾಟಕ, ದೂರದ ಮಣಿಪುರದ ಪೋಯ್‌ಬಿ ಪ್ರದರ್ಶನ, ತಮಿಳುನಾಡಿನ ತಂಡದಿಂದ ಮಹಾಭಾರತದ ಎರಡು ಪ್ರಸಂಗಗಳ ಆಧಾರಿತ ’ಕಟ್ಟೈಕೂತ್ತು’ ಮತ್ತು ಮಾರೋಪದಲ್ಲಿ ಉಡುಪಿಯ ಥಿಯೇಟರ್ ಯಕ್ಷಮೇಳದಿಂದ ಯಕ್ಷಗಾನ ಮೂಡಿ ಬರಲಿದೆ.ಸನ್ಯಾಸಿಗಳ ‘ರಾಮವಿಜಯ’

ನಾಟಕೋತ್ಸವದಲ್ಲಿ ಶುಕ್ರವಾರ ಸಂಜೆ 6.45ಕ್ಕೆ ಕರ್ನಾಟಕ ಜಾನಪದ ಕಂಸಾಳೆ ಕಲಾವಿದರಿಂದ ‘ಬೀಸು ಕಂಸಾಳೆ’, ಸಂಜೆ 7.30ಕ್ಕೆ ಅಸ್ಸಾಂನ ಸತ್ರಿಯಾ ಸನ್ಯಾಸಿಗಳ ತಂಡದಿಂದ ‘ರಾಮ ವಿಜಯ.ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಟಿಕೆಟ್‌ಗೆ: ರಂಗಶಂಕರ ಮತ್ತು ‘ಡೈಲಿ ಬ್ರೆಡ್’ ಇಂದಿರಾ ನಗರ, ಕೋರಮಂಗಲ, www.indianstage.in,
www.bookmyshow.com.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.