ವಕ್ಕುಂದ (ಬೈಲಹೊಂಗಲ): ಐವತ್ತು ವರ್ಷಗಳಿಂದ ರಂಗಭೂಮಿಗೆ ಶ್ರಮಿಸುತ್ತಿರುವ ರಂಗಕರ್ಮಿ ಕೆ.ಡಿ. ನದಾಫ ಅವರ ಸಾಧನೆ ಮಾದರಿ ಯಾಗಿದೆ ಎಂದು ಚಿತ್ರನಟ ಶಿವರಂಜನ ಬೋಳಣ್ಣವರ ಹೇಳಿದರು.

ಕೆ.ಡಿ.ನದಾಫ ರಂಗ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು. ಇಳಿ ವಯಸ್ಸಿನಲ್ಲೂ ನಾಟಕಗಳಿಗೆ ಸಂಗೀತ ನಿರ್ದೇಶನ, ಶಾಸ್ತ್ರೀಯ ಸಂಗೀತ, ತಂಬೂರಿ ಸೇರಿದಂತೆ ವಿವಿಧ ವಾದ್ಯಗಳನ್ನು ನುಡಿಸುವಲ್ಲಿ ಪಾಂಡಿತ್ಯ ಹೊಂದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಕೆ.ಎಲ್.ಇ. ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಅಪ್ಪಟ ಗ್ರಾಮೀಣ ಪ್ರತಿಭೆ ಕೆ.ಡಿ.ನದಾಫ ಅವರ ಸಾಧನೆ ಶ್ಲಾಘನೀಯವಾಗಿದ್ದು, ಅವರ ಹೆಸರ ನ್ನು ರಂಗಮಂಟಪಕ್ಕೆ ನಾಮ ಕರಣ ಮಾಡುವ ಮೂಲಕ ಹಿಂದೂ- ಮುಸ್ಲಿಂರ ಭಾವೈಕ್ಯವನ್ನು ನಾಡಿಗೆ ಸಾರಿದ ಹೆಮ್ಮೆ ವಕ್ಕುಂದ ಗ್ರಾಮದ್ದಾಗಿದೆ ಎಂದರು.

ರಾಚೋಟೇಶ್ವರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಚೇತನ ವಿವಿಧೋದ್ದೇಶಗಳ ಸಹಕಾರಿ ಸೌಹಾರ್ದ ನಿಯಮಿತ ಅಧ್ಯಕ್ಷ ಸಿ.ಕೆ.ಮೆಕ್ಕೇದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಈಶ್ವರ ಹೋಟಿ, ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಭದ್ರಶೆಟ್ಟಿ, ಗ್ರಾ.ಪಂ.ಅಧ್ಯಕ್ಷ ಫಕೀರಪ್ಪ ತಿಗಡಿ, ಸದಸ್ಯ ಮಂಜು ಹೂವಿನ, ರಂಗಾಯಣ ಕಲಾವಿದ ಕೆ.ಜಗುಚಂದ್ರ, ವಿ.ಎಸ್ ಕೋರಿಮಠ, ಚಂದ್ರಪ್ಪ ಭದ್ರಶೆಟ್ಟಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮಸ್ಥರ ವತಿಯಿಂದ ರಂಗಭೂಮಿ ದಿಗ್ಗಜ ಕೆ.ಡಿ.ನದಾಫ, ಕಿರುತೆರೆ ಕಲಾವಿದ ಡಾ.ವೆಂಕಟೇಶ, ಕ್ರೀಡಾ ಮತ್ತು ಕಲಾ ವೇದಿಕೆ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಶಿಕ್ಷಣ ಪ್ರೇಮಿ ಬಿ.ಬಿ.ಗಣಾಚಾರಿ, ಪುರಸಭೆ ಸದಸ್ಯ ಸುಬಾನಿ ಸಯ್ಯದ ಅವರನ್ನು ಸತ್ಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.