ರಕ್ತಹೀನತೆ ಬಗ್ಗೆ ಜಾಗೃತರಾಗಿರಲು ಸಲಹೆ

7

ರಕ್ತಹೀನತೆ ಬಗ್ಗೆ ಜಾಗೃತರಾಗಿರಲು ಸಲಹೆ

Published:
Updated:

ಹೂವಿನ ಹಡಗಲಿ: ಮಹಿಳೆಯರು ರಕ್ತಹೀನತೆ ಉಂಟಾಗ ದಂತೆ ಜಾಗೃತರಾಗಿರಬೇಕು ಎಂದು ಡಾ.ರಾಜೇಶ ಹೇಳಿದರು. ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಮದರ್ ಥೆರೆಸಾ ಮಹಿಳಾ ಸಬಲೀಕರಣ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಗತಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳೆಯರ ರಕ್ತ ತಪಾಸಣೆ ಮತ್ತು ರಕ್ತ ಗುಂಪು ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಕ್ತದ ಗುಂಪು ತಿಳಿದಿದ್ದರೆ ಅನಾರೋಗ್ಯದ ಸಮಯದಲ್ಲಿ ರಕ್ತವನ್ನು ಸುಲಭವಾಗಿ ಪಡೆಯಲು ಅನುಕೂಲವಾಗುತ್ತದೆ ಪ್ರತಿಯೊಬ್ಬರು ರಕ್ತದ ಗುಂಪು ತಿಳಿದಿರಬೇಕು ಎಂದರು.ಡಾ.ಚಂದ್ರಶೇಖರ ಮಾತನಾಡಿ ಮಹಿಳೆಯರು ಆಹಾರದ ಕಡೆ ಗಮನ ಹರಿಸುವುದಿಲ್ಲ. ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದರು.ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕರಾದ ಧನಂಜಯ ಸ್ವಾಮಿ, ಮಹಿಳೆಯರ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ವಿವರಣೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಫಿರೋಜ್, ಗುಣಶೀಲ, ವನಜಾಕ್ಷಿ ರಕ್ತ ತಪಾಸಣೆ ನಡೆಸಿದರು. 100ಕ್ಕೂ ಹೆಚ್ಚು ಮಹಿಳೆಯರು ರಕ್ತ ತಪಾಸಣೆ ಮಾಡಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry