ಮಂಗಳವಾರ, ಜನವರಿ 21, 2020
29 °C

ರಣಜಿ: ಕರ್ನಾಟಕಕ್ಕೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ : ಕೆಎಸ್‌ಸಿಎ ಮೈದಾನದಲ್ಲಿ ಪಂಜಾಬ್ ತಂಡದ ಜತೆ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವು 10 ವಿಕೆಟ್‌ಗಳ  ಭರ್ಜರಿ ಗೆಲುವು ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಪಂಜಾಬ್ ತಂಡದ 174ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ತಂಡವು 505 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ ಡಿಕ್ಲೇರ್ ಘೋಷಿಸಿತ್ತು. ಹೀಗಾಗಿ 331ರನ್‌ಗಳ ಹಿನ್ನಡೆ ಅನುಭವಿಸಿದ್ದ ಪಂಜಾಬ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಗಳಿಸಿದ್ದು ಕೇವಲ 361ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಕರ್ನಾಟಕ ತಂಡಕ್ಕೆ ಗೆಲ್ಲಲು ಎರಡನೇ ಇನ್ನಿಂಗ್ಸ್‌ನಲ್ಲಿ ದೊರೆತಿದ್ದು ಬರೀ 30 ರನ್‌ಗಳು ಮಾತ್ರ.

ರಾಜ್ಯದ ತಂಡವು ವಿಕೆಟ್ ನಷ್ಟವಿಲ್ಲದೆ ಸುಲಭದ ಗುರಿ ಬೆನ್ನತ್ತಿ ಜಯ ಸಾಧಿಸಿತು. ರಾಹುಲ್ 25 ಮತ್ತು ಅಗರ್‌ವಾಲ್ 8 ರನ್ ಗಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.

 

 

 

ಪ್ರತಿಕ್ರಿಯಿಸಿ (+)