ಶನಿವಾರ, ಮೇ 15, 2021
24 °C

ರಥದಿಂದ ಚಿಣ್ಣರ ಎಸೆದು ಹರಕೆ ಸಲ್ಲಿಕೆ!

ಪ್ರಜಾವಾಣಿ ವಾರ್ತೆ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಸಾಮಾನ್ಯವಾಗಿ ದೇವ ರಿಗೆ  ಪೂಜೆ, ಪುನಸ್ಕಾರ, ಉರುಳು ಸೇವೆ, ಪಾದಯಾತ್ರೆ ಮಾಡುವ ಮೂಲಕ ಹರಕೆ ತೀರಿಸೋದು ಸಹಜ. ಆದರೆ ಬೀಳಗಿ ತಾಲ್ಲೂಕಿನ ನಾಗರಾಳ ಜಾತ್ರೆಯಲ್ಲಿ ಎಳೆ ಮಕ್ಕಳನ್ನು ರಥದ ಮೇಲ್ಬಾಗದಿಂದ ಎಸೆದು ಹರಕೆ ಸಲ್ಲಿಸುವುದು ವಿಶೇಷ ವಾಗಿದೆ. ನಾಗರಾಳ ಗ್ರಾಮದ ದಿಗಂಬೇಶ್ವರ ಮಠದಲ್ಲಿ ಪ್ರತೀ ವರ್ಷ ನಡೆಯುವ ಜಾತ್ರೆಯಲ್ಲಿ ರಥದ ಮೇಲಿಂದ ನೂರಾ ರು ಕಂದಮ್ಮರನ್ನು ಎಸೆಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಸಲ್ಲಿಸು ತ್ತಾರೆ. ಮಠದ ಸ್ವಾಮಿಜೀ ತೀರ್ಥ ರೂಪದಲ್ಲಿ ಸಾರಾಯಿ ಕುಡಿದು ರಥದ ಮೇಲೆ ಕುಳಿತುಕೊಂಡು ಮನಸೋ ಇಚ್ಛೆಯಂತೆ ಮಕ್ಕಳನ್ನು ತೂರುವುದನ್ನು ನೋಡಿ ದರೆ ಎಂತಹವರ ಮನಸ್ಸು ಕರಗದೆ ಇರದು. ಹೀಗೆ ಎಸೆಯುವುದ ರಿಂದ ಹೆದರುವ ಮಕ್ಕಳು ಚೀರಾಡುವ ಪರಿ ಕೇಳಲು ಆಗದು.ರಥವನ್ನು ಎಳೆಯುವ ಮೊದಲು ಸ್ವಾಮೀಜಿ ರಥದ ಮೇಲೆ ಕುಳಿತು ಕೊಂಡು ಚಿಕ್ಕ ಚಿಕ್ಕ ಮಕ್ಕಳನ್ನು ಬೇಕಾ ಬಿಟ್ಟಿಯಾಗಿ ಕುಡಿದ ಅಮಲಿನಲ್ಲಿ ಎಸೆಯುತ್ತಾರೆ. ಕೆಳಗೆ ಕೆಲವರು ಕಂಬಳಿ ಮೂಲಕ ಮಕ್ಕಳನ್ನು ಹಿಡಿದು ತಮ್ಮ ಪಾಲಕರಿಗೆ ಒಪ್ಪಿಸುತ್ತಾರೆ. ಆದರೆ ಮುಗ್ದ ಮಕ್ಕಳು ಮೇಲಿಂದ ಬಿದ್ದು ಕಿರುಚಿ ಗಾಬರಿಗೊಂಡು ಅಳುತ್ತಾರೆ. ಆದರೆ  ಭಕ್ತರು ತಮ್ಮ ಹರಕೆಯನ್ನು ತೀರಿಸಿರುವ ಧನ್ಯತಾ ಭಾವನೆ ಪ್ರದರ್ಶಿಸುತ್ತಾರೆ.  ಅಷ್ಟೇ ಅಲ್ಲದೆ ಹೀಗೆ ಎಸೆಯುವ ಮಕ್ಕಳಿಗೆ ಯಾವ ರೀತಿಯಲ್ಲೂ ಅಪಾ ಯ ವಾಗುವುದಿಲ್ಲ, ಇದೊಂದು ದೈವ ಸ್ವರೂಪ ಹಾಗೂ ಪವಾಡ ವೆಂಬುದು ಭಕ್ತರ ಬಲವಾದ ನಂಬಿಕೆ ಯಾಗಿದೆ.ಒಂದು ಮಗುವನ್ನು ರಥದ ಮೇಲಿ ನಿಂದ ಎಸೆದು ಹರಕೆ ತೀರಿಸಲು ಮಠಕ್ಕೆ 101 ರೂಪಾಯಿ ಪಾವತಿ ಮಾಡಿಸಿ ಕೊಂಡಿರುತ್ತಾರೆ. ರಥವನ್ನು ಎಳೆಯುವ ಮುಂಚೆ ಮಕ್ಕಳನ್ನು ಎಸೆಯುತ್ತಾರೆ. ಈ ಭಾರಿಯ ಜಾತ್ರೆಯಲ್ಲಿ (ಕಳೆದ ಸೋಮ ವಾರ ಸಂಜೆ ನಡೆದ ಜಾತ್ರೆ)  ಸುಮಾರು 200 ಮಕ್ಕಳನ್ನು ಈ ಜಾತ್ರೆಯಲ್ಲಿ ಎಸೆಯಲಾಯಿತು. ಭಕ್ತರು ನೀಡುವ ಹರಕೆಯ ಹಣ ಮಠಕ್ಕೆ ಸಂದಾಯ ವಾಗುತ್ತದೆ.   ತೇರಿನ ಮೇಲಿಂದ ಹಸುಗೂಸನ್ನು ಎಸೆಯುವ ಪದ್ದತಿಯನ್ನು ಸರ್ಕಾರ ಈಗಾಗಲೇ ನಿಷೇಧ ಮಾಡಿದೆ. ಆದರೂ ಸಹ  ನಾಗರಾಳ ಗ್ರಾಮದಲ್ಲಿ ಹಲವು ವರ್ಷಗಳಿಂದ  ಮಕ್ಕಳನ್ನು ಎಸೆಯುವ ಪದ್ದತಿ ಇನ್ನು ಜೀವಂತಾಗಿದೆ.ರಥದ ಮೇಲಿಂದ ಎಳೆಯ ಕಂದಮ್ಮಗಳನ್ನು ಎಸೆಯುವ ಈ ಅನಿಷ್ಠ ಪದ್ದತಿಯನ್ನು ಸ್ವಂತ ಪಾಲಕರೇ ನಡೆಸಿ ಕೊಂಡು ಬರುತ್ತಿರುವುದಕ್ಕೆ ಜಾಗೃತಿ ಮತ್ತು ಕಡಿವಾಣ ಅಗತ್ಯವಾಗಿದೆ ಎಂಬು ದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.