ಮಂಗಳವಾರ, ಸೆಪ್ಟೆಂಬರ್ 17, 2019
25 °C

ರಫ್ತು ಪ್ರಗತಿ

Published:
Updated:

ನವದೆಹಲಿ (ಪಿಟಿಐ): ಆಗಸ್ಟ್ ತಿಂಗಳಲ್ಲಿ ದೇಶದ ಒಟ್ಟು ರಫ್ತು ವಹಿವಾಟು  ಶೇ 44ರಷ್ಟು ಪ್ರಗತಿ ದಾಖಲಿಸಿದ್ದು, 24 ಶತಕೋಟಿ ಡಾಲರ್ ( ರೂ1,08,000 ಕೋಟಿ) ವಹಿವಾಟು ದಾಖಲಿಸಿದೆ. ಕಬ್ಬಿಣದ ಅದಿರು, ಎಂಜಿನಿಯರಿಂಗ್  ಉತ್ಪನ್ನಗಳು, ರಸಾಯನಿಕಗಳು, ಜವಳಿ ಸರಕುಗಳ ರಫ್ತು  ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದೆ.ಅಮೆರಿಕ ಮತ್ತು  ಯೂರೋಪ್ ಒಕ್ಕೂಟದಲ್ಲಿ ಬಿಕ್ಕಟ್ಟು ಮುಂದುವರೆದಿದ್ದರೂ, ಹೊಸ ಸಾಗರೋತ್ತರ ಮಾರುಕಟ್ಟೆಗಳ ಬೆಂಬಲ ಗರಿಷ್ಠ ರಫ್ತು ವೃದ್ಧಿ ದರ ಕಾಯ್ದುಕೊಳ್ಳುವಂತೆ ಮಾಡಿವೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.ಈ ಅವಧಿಯಲ್ಲಿ ಆಮದು ವಹಿವಾಟು ಕೂಡ ಶೇ 41ರಷ್ಟು ಪ್ರಗತಿ ದಾಖಲಿಸಿದ್ದು, 38 ಶತಕೋಟಿ ಡಾಲರ್ (ರೂ1,71,000 ಕೋಟಿ) ವಹಿವಾಟು ದಾಖಲಿಸಿದೆ. ರಫ್ತು ಮತ್ತು ಆಮದು ವಹಿವಾಟು ಗರಿಷ್ಠ ಮಟ್ಟದಲ್ಲಿ ಮುಂದುವರೆದಿರುವುದರಿಂದ ದೇಶದ ವ್ಯಾಪಾರ ಕೊರತೆ ಈ ಅವಧಿಯಲ್ಲಿ 14 ಶತಕೋಟಿ ಡಾಲರ್ (್ಙ63,000 ಕೋಟಿ) ಗಳಷ್ಟಾಗಿದೆ.ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಹಡಗುಗಳ ಮೂಲಕ ನಡೆಯುವ ಒಟ್ಟು ರಫ್ತು ವಹಿವಾಟು ಶೇ 54ರಷ್ಟು ಹೆಚ್ಚ್ದ್ದಿದು, 135 ಶತಕೋಟಿ ಡಾಲರ್‌ಗಳಿಗೆ (ರೂ6,03,000ಕೋಟಿ) ಏರಿಕೆ ಕಂಡಿದೆ.

Post Comments (+)