ಗಿಳಿ ಹಸಿರು ಬಣ್ಣದ ಸೀರೆಗೆ ಕಡು ನೀಲಿ ನೆರಿಗೆಗಳು. ಹೊಂಬಣ್ಣದ ಬೆನ್ನಮೇಲೆ ಹಸಿರು ಹಚ್ಚೆಯ ಹೊಳಪು. ಬೆನ್ನಿಗಂಟಿಕೊಂಡಿದ್ದ ಚೋಲಿಗೆ ಮುತ್ತಿನೋಲೆಯಂಥ ಕುಚ್ಚು. ಎತ್ತರಕ್ಕೆ ಕಟ್ಟಿ, ಕತ್ತಿನುದ್ದಕ್ಕೆ ಇಳಿಬಿಟ್ಟ ಕೇಶವಿನ್ಯಾಸ... ರವೀನಾ ಮೆಲ್ಲಮೆಲ್ಲನೆ ಅಡಿಯಿಡುತ್ತಿದ್ದರೆ, ಇದು ಅವರೇನಾ ಎಂಬ ಪ್ರಶ್ನೆ ಮೂಡುವಷ್ಟು ಸರಳ.. ಸುಂದರ.

ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಶುಕ್ರವಾರ ಆರಂಭವಾದ `ದಿ ಬೆಸ್ಟ್ ಜ್ಯುವೆಲ್ಸ್ ಆಫ್ ಇಂಡಿಯಾ~ (ಬಿಜೆಐಎಸ್) ಆಭರಣಗಳ ಮೇಳದ ಉದ್ಘಾಟನೆಗೆ ಪ್ರದರ್ಶನದ ರಾಯಭಾರಿ ರವೀನಾ ಟಂಡನ್ ಬಂದಿದ್ದರು.

ದಿ ಆರ್ಟ್ ಆಫ್ ಜ್ಯುವೆಲ್ಸ್, ಜ್ಯುವೆಲ್ಲರ್ಸ್ ಅಸೋಸಿಯೇಷನ್ ಹಾಗೂ ಜೆಮಾಲಜಿ ಇನ್ಸ್ಟಿಟ್ಯೂಟ್ ಆಫ್ ಅಮೆರಿಕ ಜಂಟಿಯಾಗಿ ಈ ಮೇಳವನ್ನು ಏರ್ಪಡಿಸಿವೆ. ಯಾವ ಹಮ್ಮು ಬಿಮ್ಮುಗಳಿಲ್ಲದೆ, ತಾರಾ ಮೆರುಗಿಲ್ಲದೆ ಬಂದ ರವೀನಾ ಆಭರಣ ತಯಾರಕರ ಸಂಕಷ್ಟಕ್ಕೆ ನೆರವಾಗಿ ಎಂದರು.

ಭಾರತದಲ್ಲಿ ಎಲ್ಲದಕ್ಕೂ ತೆರಿಗೆ ಕೇಳಲಾಗುತ್ತದೆ. ತೆರಿಗೆಯನ್ನು ಕಟ್ಟುತ್ತೇವೆ. ಆದರೆ ಜೀವನಮಟ್ಟ ಸುಧಾರಣೆಯಾಗಿದೆಯೇ? ಜೀವನವನ್ನು ಉತ್ತಮಗೊಳಿಸಲು ಈ ಹಣ ಅದೆಷ್ಟು ವಿನಿಯೋಗವಾಗಿದೆ? ಆಗಿದ್ದರೆ ಜೀವನ ಉತ್ತಮಗೊಂಡಿದೆಯೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ನಮ್ಮ ಹಕ್ಕಿಗಾಗಿ ಹೋರಾಡುವ ಚಳವಳಿಯನ್ನು ಯಾವಾಗಲೂ ಬೆಂಬಲಿಸುವುದಾಗಿಯೂ ಹೇಳಿದರು.

ಕೇಂದ್ರ ಬಜೆಟ್ನಲ್ಲಿ ಚಿನ್ನದ ಮೇಲಿನ ತೆರಿಗೆ ಹೆಚ್ಚಳವನ್ನು ವಾಪಸು ಪಡೆಯುವಂತೆ ಚಿನ್ನಾಭರಣ ವ್ಯಾಪಾರಿಗಳ ನಿಯೋಗವೊಂದು ನವದೆಹಲಿಯಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಲಿದೆ. ಈ ಭೇಟಿ ಫಲಪ್ರದವಾಗಲಿ ಎಂದು ಆಶಿಸಿ ಒಂದು ನಿಮಿಷ ಪ್ರಾರ್ಥಿಸಲು ಮೇಳದ ಆಯೋಜಕ ಪಿ.ಮಹೇಶ್ ಕೋರಿದರು. ಇದಕ್ಕೆ ಸ್ಪಂದಿಸಿದ ರವೀನಾ ಟಂಡನ್ ಸಹ ಒಂದು ನಿಮಿಷ ಎದ್ದು ನಿಂತು ಪ್ರಾರ್ಥಿಸಿದರು.

ಆಗಾಗ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾ ಕಡೆಗೆ ಕೊರಳು ಕೊಂಕಿಸಿ, ನಗೆಮಲ್ಲಿಗೆಯನ್ನು ಚೆಲ್ಲುತ್ತಿದ್ದರು ರವೀನಾ.

ದೀಪ ಬೆಳಗಿಸಿ, ಮೇಳ ಉದ್ಘಾಟಿಸಿ ಮಾತನಾಡುತ್ತ ಭಾರತೀಯ ಸಂಸ್ಕೃತಿಯಲ್ಲಿ ಆಭರಣಕ್ಕೆ ತನ್ನದೇ ಆದ ಮಹತ್ವವಿದೆ. ಅಲಂಕಾರ, ಸೌಂದರ್ಯ ಅಥವಾ ಉಳಿಕೆಯೇ ಆಗಿರಲಿ ಆಭರಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದು ರವೀನಾ ಹೇಳಿದರು.

ಬಿಜೆಐಎಸ್ನ ಅಂಗವಾಗಿ ಬಾನುಲಿಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾಗಿದ್ದವರಿಗೆ ಗಿಫ್ಟ್ ವೋಚರ್ಗಳನ್ನು ವಿತರಿಸಿದರು.

ಮೊದಲ ಬಹುಮಾನ ಪಡೆದ ತನ್ವೀರ್ ಎಂಬ ಯುವಕನಿಗೆ ಗಿಫ್ಟ್ ವೋಚರ್ ನೀಡಿದರು. ಕೈಯಲ್ಲಿ ಹಣವಿದೆ. ಆಭರಣ ಮಳಿಗೆಗಳ ಸಾಲೇ ಕಣ್ಣಮುಂದಿದೆ. ಯಾರಿಗಾಗಿ, ಏನನ್ನು ಕೊಳ್ಳಲು ಇಷ್ಟ ಪಡುವೆ ಎಂದು ರವೀನಾ ಕುತೂಹಲದಿಂದ ಕೇಳಿದರು.

ಇನ್ನೂ ತೀರ್ಮಾನಿಸಿಲ್ಲ ಎಂಬ ಚುಟುಕು ಉತ್ತರ ಯುವಕನಿಂದ ಬಂತು. ಅದಕ್ಕೆ ರವೀನಾ, ನಿಮ್ಮ ಯಾವ ಸ್ನೇಹಿತೆ ಎಂಬುದು ತೀರ್ಮಾನವಾಗಿಲ್ಲವೇ ಎಂದು ಕಿಚಾಯಿಸಿದರು.
`ನಿಮ್ಮಂಥ ತಾರೆಯ ಮುಂದೆ ಮಾತೇ ಬರುತ್ತಿಲ್ಲ.

ಟೀವಿಯಲ್ಲಿ ಕಾಣುವುದಕ್ಕಿಂತ ನೀವಿಲ್ಲಿ ಚಂದ ಕಾಣಿಸುತ್ತಿದ್ದೀರಿ. ನಿಮ್ಮಂದಿಗೆ ವೇದಿಕೆಯ ಮೇಲೆ ಬಹುಮಾನ ಪಡೆಯುವ ಕನಸೂ ಕಂಡಿರಲಿಲ್ಲ. ಹಾಗಾಗಿ ಮಾತನಾಡಲಾಗುತ್ತಿಲ್ಲ ಎನ್ನುತ್ತಲೇ ಯುವಕ ಬಡಬಡಿಸಿ ವೇದಿಕೆಯಿಂದಿಳಿದಿದ್ದ. ಈ ಬಹುಮಾನವನ್ನು `ಆಭರಣ್~ ಮಳಿಗೆಯು ಪ್ರಾಯೋಜಿಸಿತ್ತು.

ವೇದಿಕೆಯಿಂದಿಳಿದು, ಆಭರಣ ಮೇಳದ ಅಂಗಳದತ್ತ, ನೆಲದ ಮೇಲೆ ತೇಲುತ್ತಿರುವಂತೆ ಹೆಜ್ಜೆ ಹಾಕುತ್ತಿದ್ದ ರವೀನಾ, ತಮ್ಮ ಸಹಾಯಕ ಪ್ರವೀಣ್ ಎಂಬುವವರನ್ನು ಕೂಗಿ ಕರೆದರು. `ಲಿಪ್ಗ್ಲಾಸ್ ದೇನಾ~ ಎಂದು ಕೈಚಾಚಿದರು. ಕ್ಯಾಮೆರಾ ಮುಂದೆ ನಗೆಮಲ್ಲಿಗೆ ಚೆಲ್ಲುತ್ತಿದ್ದ ಕೆಂದುಟಿಗಳಿಗೆ ತುಟಿ ರಂಗಿನ ಲೇಪನ ಮಾಡಿಕೊಂಡರು.

ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ ಎಂದಿದ್ದ ರವೀನಾ ಸ್ಟ್ರೆಪ್ಸಿಲ್ಸ್ ಒಂದನ್ನು ಬಾಯಿಗಿರಿಸಿಕೊಂಡು, ಮತ್ತೆ ನಗುತ್ತ ಮಳಿಗೆಗಳತ್ತ ಹೆಜ್ಜೆ ಹಾಕಿದರು. ಅಂದಹಾಗೆ ಮೇಳವು 6ರಿಂದ 8ರವರೆಗೆ ತ್ರಿಪುರವಾಸಿನಿಯಲ್ಲಿ ನಡೆಯಲಿದೆ. ಇಲ್ಲಿ 2 ಸಾವಿರ ರೂಪಾಯಿಗಳಿಂದ 2 ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಈ ಪ್ರದರ್ಶನ ಮತ್ತು ಮಾರಾಟದಲ್ಲಿ ಲಭ್ಯ.

ಚಿತ್ರ: ಬಿ.ಎಚ್.ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.