ರಷ್ಯಾದಲ್ಲಿ ಈಗ ಹೊಸ ಸಮಯ

ಬುಧವಾರ, ಮೇ 22, 2019
24 °C

ರಷ್ಯಾದಲ್ಲಿ ಈಗ ಹೊಸ ಸಮಯ

Published:
Updated:

 ಮಾಸ್ಕೊ (ಇತಾರ್-ತಾಸ್): ರಷ್ಯಾದಲ್ಲಿ ಸೆ.1ರಿಂದ ಹೊಸ ಸಮಯ ಜಾರಿಗೆ ಬಂದಿದೆ. ಈ ಹಿಂದೆ ಸೋವಿಯತ್ ಕಾಲದಿಂದಲೂ ಅನುಸರಿಸುತ್ತಿದ್ದ `ಸಮಯ ಪಟ್ಟಿ~ ಪದ್ಧತಿಗೆ ಬದಲಾಗಿ `ಸಮಯ ವಲಯ~ ಪದ್ಧತಿ ಅಳವಡಿಸಲಾಗಿದೆ.ಈ ಮುಂಚೆ ರಷ್ಯಾದಲ್ಲಿ ಒಂಬತ್ತು ಸಮಯ ಪಟ್ಟಿಗಳು ಇದ್ದವು. ಈಗ ಅದಕ್ಕೆ ಬದಲಾಗಿ ಒಂಬತ್ತು ಸಮಯ ವಲಯಗಳು ಅಸ್ತಿತ್ವಕ್ಕೆ ಬಂದಿವೆ. ಹಿಂದಿದ್ದ ಪ್ರದೇಶ ವ್ಯಾಪ್ತಿ ಹಾಗೂ ಪ್ರಸ್ತುತ ಪ್ರದೇಶ ವ್ಯಾಪ್ತಿಯಲ್ಲಿ ಬದಲಾವಣೆಗಳು ಆಗಿವೆ. ರಾಷ್ಟ್ರದ ರಾಜಧಾನಿ ಮಾಸ್ಕೊವನ್ನು ಕೇಂದ್ರಬಿಂದುವಾಗಿಸಿಕೊಂಡು ಈ ಸಮಯ ವಲಯಗಳನ್ನು ವಿಂಗಡಿಸಲಾಗಿದೆ.ಮ್ಯಾಗದನ್, ಕಾಮಚತ್ಕ, ಚುಕೋತ್ಕ ಮತ್ತು ಸಖಲಿನ್ ವಲಯಗಳು ಪೂರ್ವ ದಿಕ್ಕಿನ ತುತ್ತ ತುದಿಯಲ್ಲಿ ಬರುತ್ತವೆ. ಮಾಸ್ಕೊದಲ್ಲಿ ಮಧ್ಯಾಹ್ನ 3 ಗಂಟೆಯಾಗಿದ್ದಾಗ ಈ ವಲಯಗಳ ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆಯಾಗಿರುತ್ತದೆ.ಈ ಮುಂಚೆ ಒಂದೇ ಸಮಯ ಪಟ್ಟಿಯ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಸಮಯ ಇತ್ತು. ಆದರೆ ಇದೀಗ ಇಡೀ ಸಮಯ ವಲಯ ವ್ಯಾಪ್ತಿಯ ಎಲ್ಲೆಡೆ ಒಂದೇ ಸಮಯ ಇರುತ್ತದೆ. ರಾಜಧಾನಿಯೊಂದಿಗಿನ ಸಮಯದ ಅಂತರ ಇಳಿಸುವುದು ಈ ಬದಲಾವಣೆಯ ಪ್ರಮುಖ ಉದ್ದೇಶ ಎಂದು ಹೇಳಲಾಗಿದೆ.ಈ ಕ್ರಮದಿಂದ ರೈಲು, ವಿಮಾನಗಳ ವೇಳಾಪಟ್ಟಿ ಸಿದ್ಧಗೊಳಿಸಲು ಹಾಗೂ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಕೂಲವಾಗಲಿದೆ ಎಂದೂ ಹೇಳಲಾಗಿದೆ.ಆದರೆ ತಜ್ಞರು ಮಾತ್ರ ಈ ಬದಲಾವಣೆ ಬಗ್ಗೆ ಅಷ್ಟೇನೂ ಉತ್ಸಾಹದ ಮಾತುಗಳನ್ನು ಆಡಿಲ್ಲ. ಯಕುಟಿಯಾ ವಲಯ ಹೊರತುಪಡಿಸಿ ಬೇರ‌್ಯಾವ ವಲಯಗಳಿಗೂ ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry